Last Updated:
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ. ಕೆಆರ್‌ಎಸ್‌ನಲ್ಲಿ 35.87%, ತುಂಗಭದ್ರಾದಲ್ಲಿ 24.08% ನೀರು. ಮಳೆ ಕೊರತೆಯಿಂದ ರೈತರಿಗೆ ಆತಂಕ, ಕುಡಿಯುವ ನೀರಿಗೂ ಸಮಸ್ಯೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಪರಿಣಾಮ ಹಲವು ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ (Water) ಸಂಗ್ರಹ ಇನ್ನೂ ತೃಪ್ತಿಕರ ಮಟ್ಟ ತಲುಪಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಜಲಾಶಯಗಳ ಸ್ಥಿತಿ ಸರ್ಕಾರ ಹಾಗೂ ರೈತರ (Farmer) ಆತಂಕವನ್ನು ಹೆಚ್ಚಿಸಿದ್ದು, ಮುಂದಿನ ಕೆಲವು ವಾರಗಳ ಮಳೆಯೇ ನೀರಿನ ಲಭ್ಯತೆಯನ್ನು ನಿರ್ಧರಿಸುವಂತಿದೆ.ಜುಲೈ 16ರಂದು ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
ವಾಣಿವಿಲಾಸ ಸಾಗರ: 78.93% (ಸದ್ಯಕ್ಕೆ ನೆಮ್ಮದಿ)
ಆಲಮಟ್ಟಿ: 72.42%
ಹಾರಂಗಿ: 63.36%
ಕಬಿನಿ: 62.13%
ಮಲಪ್ರಭಾ: ಕೇವಲ 33.13%
ಭೀಮಾ ಲಿಫ್ಟ್ ಡ್ಯಾಂ: ಕೇವಲ 7.39% (ಅತ್ಯಂತ ಕನಿಷ್ಠ)
ಮಳೆರಾಯ ಕೈಕೊಟ್ಟರೆ ಗತಿ ಏನು?
ಜಲಾಶಯಗಳ ಮಟ್ಟ ಹೀಗೆಯೇ ಮುಂದುವರಿದರೆ, ಬೆಳೆಗಳಿಗೆ ನೀರು ಹರಿಸುವುದು ಸವಾಲಾಗಲಿದೆ. ಕೃಷಿಕರು ತಮ್ಮ ಪಂಪ್‌ಸೆಟ್‌ಗಳನ್ನು ನಂಬಿ ಬೆಳೆ ಬೆಳೆಯುವ ಮುನ್ನ ಎಚ್ಚರ ವಹಿಸಬೇಕಾದ ಪರಿಸ್ಥಿತಿ ಇದೆ. ಸದ್ಯದ ಮಟ್ಟಿಗೆ ಇಡೀ ರಾಜ್ಯದ ನೀರಾವರಿ ವ್ಯವಸ್ಥೆ ಸಂಪೂರ್ಣವಾಗಿ ಮುಂಗಾರು ಮಳೆಯ ಕೃಪೆಯ ಮೇಲೆ ಅವಲಂಬಿತವಾಗಿದೆ.
Bangalore [Bangalore],Bangalore,Karnataka
Jul 16, 2026 10:54 AM IST














