OTT Movies: ಒಟಿಟಿಗೆ ಬಂತು ವಿಜಯ್ ದೇವರಕೊಂಡ ಅಭಿನಯಿಸಿರುವ ಸಿಂಗ್ ಗೀತಂ ಸಿನಿಮಾ! | Sing geetham movie streaming on netflix vijay deverakonda played cameo | | ACTPnews


Last Updated:

OTT Movie: ವಿಜಯ್ ದೇವರಕೊಂಡ ಅಭಿನಯಿಸಿರುವ ಸಿನಿಮಾ ಒಂದು ಒಟಿಟಿಗೆ ಬಂದಿದೆ. ಯಾವುದು ಆ ಮೂವಿ? ಯಾರೆಲ್ಲ ನಟಿಸಿದ್ದಾರೆ?

ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ

ಪ್ರಸಿದ್ಧ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (Singeetham Srinivas Rao) ಮತ್ತು ನಾಗ್ ಅಶ್ವಿನ್ (Nag Ashwin) ಒಟ್ಟಾಗಿ, ಆ ಮಹಾನ್ ವ್ಯಕ್ತಿಯ ಬಹುದಿನಗಳ ಕನಸನ್ನು ಪರದೆಯ ಮೇಲೆ ನನಸಾಗಿಸಿದರು. ಸಿಂಗ್ ಗೀತಂ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಯಿತು, ಜನರು ಕಥಾವಸ್ತುವಿನಲ್ಲಿರುವ ಅದ್ಭುತ ತಾಜಾತನ ಮತ್ತು ವಿಶಿಷ್ಟತೆಯನ್ನು ಮೆಚ್ಚಿದ್ದಾರೆ. ಮ್ಯೂಸಿಕ್, ಮೆಲೊಡಿ ಹಾಗೂ ಸ್ಟೋರಿ ಮೂಲಕ ಸಿನಿಮಾ ಮೆಚ್ಚುಗೆ ಗಳಿಸುತ್ತಿದೆ.

ಈ ಚಿತ್ರವು ತನ್ನ ಮನೋರಂಜನೆ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದು ಸಂಗೀತ ಸ್ವರೂಪವನ್ನು ಮೀರಿ, ಪರಿಸರ ಸಂರಕ್ಷಣೆ ಮತ್ತು ಕಾರ್ಪೊರೇಟ್ ವಲಯದ ದುರಾಸೆಯ ವಿನಾಶಕಾರಿ ಸ್ವರೂಪದ ಬಗ್ಗೆ ಬೆಳಕು ಚೆಲ್ಲುತ್ತದೆ. ಪ್ರಬಲ ಮತ್ತು ಸಕಾಲಿಕ ಸಂದೇಶವನ್ನು ನೀಡುತ್ತದೆ. ಬಂಜರು ಗಣಿಗಾರಿಕೆ ಪಟ್ಟಣದಲ್ಲಿ ಉಳಿದಿರುವ ಕೊನೆಯ ಮರ ಮತ್ತು ಅದನ್ನು ರಕ್ಷಿಸಲು ನಡೆಯುವ ತೀವ್ರ ಹೋರಾಟದ ಸುತ್ತ ಇದರ ಮೂಲ ಕಥೆ ಸುತ್ತುತ್ತದೆ.

ಅಯಾನ್, ಅಹಲ್ಯಾ ಬಮ್ರೂ, ಶಾಲಿನಿ ಕೊಂಡೇಪುಡಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ, ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಿನಿಮಾದಲ್ಲಿ ಎಕ್ಸ್ಟ್ರಾ ಬೂಸ್ಟ್. ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಇನ್ನಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ. ಭಾರತಾದ್ಯಂತ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರು ಥೀಮ್ ಮತ್ತು ನಾವೀನ್ಯತೆಯನ್ನು ಮೆಚ್ಚುತ್ತಿದ್ದಾರೆ.

ಗಂಭೀರ ಸಾಮಾಜಿಕ ಕಳಕಳಿಯನ್ನು ಲೈಟ್ ಮ್ಯೂಸಿಕ್, ಹಾಸ್ಯ ಮತ್ತು ಹೃದಯಸ್ಪರ್ಶಿ ಕ್ಷಣಗಳೊಂದಿಗೆ ಕೌಶಲ್ಯದಿಂದ ಸಮತೋಲನಗೊಳಿಸಿದ್ದಕ್ಕಾಗಿ ಪ್ರೇಕ್ಷಕರು ಚಿತ್ರವನ್ನು ಹೆಚ್ಚು ಶ್ಲಾಘಿಸುತ್ತಿದ್ದಾರೆ. ಸಿಂಗ್ ಗೀತಂ ನಮ್ಮ ಕಾಲಕ್ಕೆ ಒಂದು ಪ್ರಾಮಾಣಿಕ ನೀತಿಕಥೆಯಾಗಿ ಎದ್ದು ಕಾಣುತ್ತದೆ.

ಇದರಲ್ಲಿ ವಿಜಯ್ ದೇವರಕೊಂಡ ಅವರು ಅತಿಥಿ ಪಾತ್ರವನ್ನು ಮಾಡಿದ್ದು ಅವರ ಪ್ರೋಮೋವನ್ನು ನೆಟ್​ಫ್ಲಿಕ್ಸ್ ಶೇರ್ ಮಾಡಿದೆ. ಪ್ರೋಮೋದಲ್ಲಿ ವಿಜಯ್ ದೇವರಕೊಂಡ ಕಲರ್​ಫುಲ್ ಸೂಟ್ ಧರಿಸಿ ಮೈತುಂಬಾ ಆಭರಣ ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ.

ಇದು ಸಿಂಗ್ ಗೀತಮ್ ಸಿನಿಮಾದ ಭಾಗ ಎಂದು ಹೇಳಿದ್ದು ಇದರಲ್ಲಿ ನಟ ಸಣ್ಣ ಅತಿಥಿ ಪಾತ್ರವನ್ನು ಮಾಡಿದ್ದಾರೆ. ಇದು ಮೇನ್ ರೋಲ್ ಅಲ್ಲ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports