Jana Nayagan: ಜನ ನಾಯಗನ್ ಬರ್ತಿದ್ದಂತೆ ಬದಲಾಯ್ತು ಹಲವು ಸಿನಿಮಾ ರಿಲೀಸ್ ಡೇಟ್ಸ್! ದಳಪತಿಗೆ ದಾರಿ ಬಿಟ್ರು ಸ್ಟಾರ್ಸ್ | actors change release date ahead jana nayagan | | ACTPnews

ಜನ ನಾಯಗನ್


Last Updated:

Jana Nayagan: ಜನ ನಾಯಗನ್ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಆಗ್ತಿದ್ದಂತೆ ಎಷ್ಟೊಂದು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಗೊತ್ತಾ? ಗೌರವದಿಂದ ದಳಪತಿಗೆ ದಾರಿಬಿಟ್ಟಿದ್ದಾರೆ ಸ್ಟಾರ್ಸ್!

ಜನ ನಾಯಗನ್
ಜನ ನಾಯಗನ್

ತಮಿಳುನಾಡು (Tamil Nadu) ಮುಖ್ಯಮಂತ್ರಿ ವಿಜಯ್ (Vijay) ಅವರ ಕೊನೆಯ ಸಿನಿಮಾ ‘ ಜನ ನಾಯಗನ್ ‘ (Jana Nayagan) ಬರೀ ಸಿನಿಮಾ ರಿಲೀಸ್ ಅಲ್ಲ. ಇದು ದಳಪತಿ ಫ್ಯಾನ್ಸ್​ಗೆ ಇನ್ನೆಂದೂ ಸಿಗದ ಸ್ಪೆಷಲ್ ಮೊಮೆಂಟ್. ಏಳು ತಿಂಗಳ ವಿಳಂಬ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯೊಂದಿಗಿನ ದೀರ್ಘಕಾಲದ ಸಮಸ್ಯೆಗಳ ನಂತರ ಕೊನೆಗೂ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರತಂಡ ಕೊನೆಗೂ ಸಿನಿಮಾವನ್ನು ಜುಲೈ 23 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಓಕೆ, ಸಿನಿಮಾ ಘೋಷಣೆಯಾಗಿದೆ, ಇದರಲ್ಲೇನು ವಿಶೇಷ ಅಂತೀರಾ? ಜನ ನಾಯಗನ್ ಒಂದೇ ಒಂದು ಸಿನಿಂಆದ ರಿಲೀಸ್ ಡೇಟ್ ಅನೌನ್ಸ್ ಆಗ್ತಿದ್ದಂತೆ ಕಾಲಿವುಡ್ ಸಿನಿಮಾದ ರಿಲೀಸ್ ಡೇಟ್ಸ್ ಚಾರ್ಟ್ ತಲೆಗೆಳಗಾಗಿದೆ.

ಜನ ನಾಯಗನ್ ರಿಲೀಸ್ ಅನೌನ್ಸ್​​ಮೆಂಟ್ ಕಾಲಿವುಡ್​ನಾದ್ಯಂತ ಒಂದು ವಿಭಿನ್ನ ಪ್ರತಿಕ್ರಿಯೆ ಹುಟ್ಟುಹಾಕಿತು. ಹಲವಾರು ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಮುಂದೂಡಿವೆ. ಬಹಳಷ್ಟು ಸಿನಿಮಾ ಅನಿರ್ಧಿಷ್ಟವಾಧಿಗೆ ಮುಂದೂಡಿದರೆ ಇನ್ನೂ ಕೆಲವು ಸಿನಿಮಾ ಮುಂದಿನ ಆಗಸ್ಟ್, ಸೆಪ್ಟೆಂಬರ್ ರಿಲೀಸ್ ಚೂಸ್ ಮಾಡಿವೆ.

ಜಿವಿ ಪ್ರಕಾಶ್ ಕುಮಾರ್ ಅವರ ಇಮ್ಮಾರ್ಟಲ್ ಜುಲೈ 17 ರಿಂದ ಸೆಪ್ಟೆಂಬರ್ 4 ಕ್ಕೆ ರಿಲೀಸ್ ಡೇಟ್ ಬದಲಾಯಿಸಿದರೆ, ಜುಲೈ 17 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿದ್ದ ದಿ ಡಾರ್ಕ್ ಹೆವನ್ ರಿಲೀಸ್ ಅನಿರ್ದಿಷ್ಟಾವಧಿ ಮುಂದೂಡಿಕೆ ಘೋಷಿಸಿತು.

ಲೋಕೇಶ್ ಕನಕರಾಜ್ ಅವರ ಡಿಸಿ ಜುಲೈ 31 ರಿಂದ ಆಗಸ್ಟ್ 7 ಕ್ಕೆ ಬಿಡುಗಡೆಯನ್ನು ಬದಲಾಯಿಸಿತು. ವಿಜಯ್ ಅವರ ಮಗ ಜೇಸನ್ ಸಂಜಯ್ ನಿರ್ದೇಶನದ ಸಿಗ್ಮಾ ಕೂಡ ಜುಲೈ ಅಂತ್ಯದ ಸ್ಲಾಟ್‌ನಿಂದ ಆಗಸ್ಟ್‌ಗೆ ಶಿಫ್ಟ್ ಆಗಿದೆ. ಆರ್ ಮಾಧವನ್ ಅವರ ಜಿಡಿಎನ್ ಜುಲೈ 17 ರಂದು ಬಿಡುಗಡೆಯಾಗುವ ಬಗ್ಗೆಯೂ ಚರ್ಚೆಗಳು ನಡೆದವು, ತಯಾರಕರು ಸದ್ದಿಲ್ಲದೆ ರೇಸ್‌ನಿಂದ ಹಿಂದೆ ಸರಿದರು.

ಏಪ್ರಿಲ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಂಪೂರ್ಣ ಚಿತ್ರ ಸೋರಿಕೆಯಾಗಿದ್ದರೂ , ತಮಿಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿರುವ ‘ ಜನ ನಾಯಗನ್’ ಚಿತ್ರಕ್ಕೆ ಭಾರಿ ಬೇಡಿಕೆ ಇರುವುದನ್ನು ಈ ಮುಂದೂಡಿಕೆಗಳು ಎತ್ತಿ ತೋರಿಸುತ್ತವೆ.

ಬಾಕ್ಸ್ ಆಫೀಸ್ ಲೆಕ್ಕಾಚಾರ ಇಂಪಾರ್ಟೆಂಟ್

ವಿಜಯ್ ಅವರ ಕೊನೆಯ ಚಿತ್ರದ ಕ್ರೇಜ್ ಮತ್ತು ಅದರ ಸುತ್ತಲಿನ ನಿರೀಕ್ಷೆಯನ್ನು ಗಮನಿಸಿದರೆ ಮುಂದೂಡಿಕೆ ಅನಿವಾರ್ಯವಾಗಿತ್ತು ಎಂದು ಚೆನ್ನೈನ ಜಿಕೆ ಥಿಯೇಟರ್‌ನ ರೂಬನ್ ಮತಿವಾನನ್ ನಂಬುತ್ತಾರೆ.

ಇದನ್ನೂ ಓದಿ: Sara Arjun: 15 ವರ್ಷದ ಸಿನಿ ಪಯಣ ನೆನಪಿಸಿಕೊಂಡ ಧುರಂಧರ್ ನಟಿ! ಸಾರಾ ಅರ್ಜುನ್ ಭಾವುಕ ಪೋಸ್ಟ್ ವೈರಲ್

“ಜನ ನಾಯಗನ್ ಬಂದಾಗಲೆಲ್ಲಾ ಅದು ಹಬ್ಬವಾಗುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಜುಲೈ 23 ರಂದು ಬಿಡುಗಡೆಯಾಗಲಿರುವ ಹಲವಾರು ಸಿನಿಮಾಗಳು ಮುಂದೂಡಲ್ಪಟ್ಟಿವೆ. ಏಳು ತಿಂಗಳಿನಿಂದ ಕಾಯುತ್ತಿರುವ ಜನ ನಾಯಗನ್‌ಗೆ ಬೇಡಿಕೆಯಿರುವಷ್ಟು ಸ್ಕ್ರೀನ್ ನೀಡುವುದು ನ್ಯಾಯಯುತವಾಗಿದೆ. ವೆಚ್ಚಗಳು ಮತ್ತು ವಿತರಣಾ ವೆಚ್ಚಗಳನ್ನು ನೀವು ಗಣನೆಗೆ ತೆಗೆದುಕೊಂಡರೆ, ಜನ ನಾಯಗನ್ ದೊಡ್ಡ ಬಿಡುಗಡೆಗೆ ಅರ್ಹವಾಗಿದೆ” ಎಂದು ಅವರು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed