Nicholas Pooran: 13 ಸಿಕ್ಸರ್ಸ್, 5 ಬೌಂಡರಿ, 31 ಎಸೆತಗಳಲ್ಲಿ ಶತಕ! ಐಪಿಎಲ್​​​ನಲ್ಲಿ ಫ್ಲಾಪ್ ಆಗಿದ್ದ 21 ಕೋಟಿ ಪ್ಲೇಯರ್​​​ನಿಂದ MCLನಲ್ಲಿ ವಿಧ್ವಂಸ | ಕ್ರೀಡಾ ಸುದ್ದಿ | ACTPnews

ನಿಕೋಲಸ್ ಪೂರನ್


Last Updated:

ಕ್ರಿಸ್ ಗೇಲ್ ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಕೇವಲ ಒಂದು ಎಸೆತ ಕಡಿಮೆ ಎದುರಿಸಿದ್ದರೆ, ಗೇಲ್ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು.

ನಿಕೋಲಸ್ ಪೂರನ್
ನಿಕೋಲಸ್ ಪೂರನ್

ಐಪಿಎಲ್​ನಲ್ಲಿ ದಯನೀಯ ವೈಫಲ್ಯ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಫಾರ್ಮ್​ಗೆ ಮರಳಿದ್ದು, ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್ 13 ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳ ಸಹಿತ 33 ಎಸೆತಗಳಲ್ಲಿ 106 ರನ್ ಗಳಿಸಿ ಔಟಾದರು. ಇದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (MLC 2026) ಅತ್ಯಂತ ವೇಗದ ಶತಕವಾಗಿದೆ. ಈ ಋತುವಿನ ಮೊದಲ ಎಲಿಮಿನೇಟರ್‌ನಲ್ಲಿ MI ನ್ಯೂಯಾರ್ಕ್ ಪರ ವಾಷಿಂಗ್ಟನ್ ಫ್ರೀಡಂ ವಿರುದ್ಧದ ಪಂದ್ಯದಲ್ಲಿ ಪೂರನ್ ಈ ಪ್ರದರ್ಶನ ತೋರಿದರು. ದುರಾದೃಷ್ಟವಶಾತ್ ಈ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ತಂಡ ಸೋಲು ಕಂಡಿತು.

ಗೇಲ್ ಅವರ ಯಾವ ದಾಖಲೆ ಜಸ್ಟ್ ಮಿಸ್

ಕ್ರಿಸ್ ಗೇಲ್ ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಕೇವಲ ಒಂದು ಎಸೆತ ಕಡಿಮೆ ಎದುರಿಸಿದ್ದರೆ, ಗೇಲ್ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಪೂರನ್ ಅವರ ಈ ಮಿಸ್ ಗೇಲ್ ಅವರ ದಾಖಲೆಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಆದರೆ ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆಗಳ ವಿಷಯಕ್ಕೆ ಬಂದರೆ, ಎಸ್ಟೋನಿಯಾದ ಸಾಹಿಲ್ ಚೌಹಾಣ್ 2024 ರಲ್ಲಿ ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

14 ಎಸೆತಗಳಲ್ಲಿ ಅರ್ಧಶತಕ, 31 ಎಸೆತಗಳಲ್ಲಿ ಶತಕ

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ನ್ಯೂಯಾರ್ಕ್ ತಂಡ 9 ರನ್​​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಎರಡನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್, ಬಂದ ತಕ್ಷಣವೇ ಸ್ಫೋಟಕ ಬ್ಯಾಟಿಂಗ್​​ಗೆ ಮುಂದಾದರು. ಪಂದ್ಯದ ತಮ್ಮ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅವರು, ನಂತರ ಮ್ಯಾಕ್ಸ್‌ವೆಲ್ ಅವರ ಅದೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಐದನೇ ಓವರ್‌ನಲ್ಲಿ ಸೌರಭ್ ನೇತ್ರವಾಲ್ಕರ್ ಅವರ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಅದೇ ಓವರ್​​ನಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪವರ್​​ ಪ್ಲೇ ನಂತರವೂ ಅಬ್ಬರಿಸಿದ ಅವರು 12ನೇ ಓವರ್​​ನಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 33 ಎಸೆತಗಳಲ್ಲಿ 5 ಬೌಂಡರಿ, 13 ಸಿಕ್ಸರ್​ಗಳ ಸಹಿತ 106 ರನ್​ಗಳಿಸಿ ಔಟ್ ಆದರು.

266 ರನ್‌ಗಳ ಬೃಹತ್ ಮೊತ್ತ ಪೇರಿಸಿದ ನ್ಯೂಯಾರ್ಕ್​

ನಿಕೋಲಸ್ ಪೂರನ್ ಅವರ ಐತಿಹಾಸಿಕ ಶತಕ ಹಾಗೂ ಕೀರನ್ ಪೊಲಾರ್ಡ್ ಅರ್ಧಶತಕದ(25 ಎಸೆತಗಳಲ್ಲಿ 64) ಬಲದಿಂದ, MI ನ್ಯೂಯಾರ್ಕ್ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 266 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ವಾಷಿಂಗ್ಟನ್ ಫ್ರೀಡಂ ತಂಡ 18.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಸ್ಟೀವ್ ಸ್ಮಿತ್ 48 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್​ಗಳ ಸಹಿತ ಅಜೇಯ 110, ಆ್ಯಂಡ್ರೀಸ್ ಗೌಸ್ 51 ಎಸೆತಗಳಲ್ಲಿ 10 ಬೌಂಡರಿ, 12 ಸಿಕ್ಸರ್​​ಗಳ ಸಹಿತ 132 ರನ್​​ಗಳಿಸಿ ಗೆಲುವಿನ ರೂವಾರಿಯಾದರು. 267 ರನ್​ಗಳನ್ನ ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡ ಟಿ20ಯಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ತಂಡ ಎನಿಸಿಕೊಂಡಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Nicholas Pooran: 13 ಸಿಕ್ಸರ್ಸ್, 5 ಬೌಂಡರಿ, 31 ಎಸೆತಗಳಲ್ಲಿ ಶತಕ! ಐಪಿಎಲ್​​​ನಲ್ಲಿ ಫ್ಲಾಪ್ ಆಗಿದ್ದ 21 ಕೋಟಿ ಪ್ಲೇಯರ್​​​ನಿಂದ MCLನಲ್ಲಿ ವಿಧ್ವಂಸ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed