Actor: ‘ನಾನು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ನವ್ಯಾ ನಾಯರ್ ಮೊದಲ ಸಾಲಿನಲ್ಲಿ ಕೂರಬೇಕು’: ವಿಜಯ್-ತ್ರಿಷಾ ಉದಾಹರಣೆ ಕೊಟ್ಟು ಖ್ಯಾತ ನಟನ ಕಾಮೆಂಟ್ | | ACTPnews

ನಟ ಧ್ಯಾನ್ ಶ್ರೀನಿವಾಸನ್


Last Updated:

ನಟಿ ನವ್ಯಾ ನಾಯರ್ (Navya Nair) ಜೊತೆ ಅಭಿನಯಿಸಿರುವ ‘ವಿಸಿಟರ್’ (Visitor) ಚಿತ್ರದ ಕಾರ್ಯಕ್ರಮದಲ್ಲಿ ನಟ ಧ್ಯಾನ್ ಶ್ರೀನಿವಾಸನ್ ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟ ಧ್ಯಾನ್ ಶ್ರೀನಿವಾಸನ್
ನಟ ಧ್ಯಾನ್ ಶ್ರೀನಿವಾಸನ್

ಮಲಯಾಳಂ ನಟ ಧ್ಯಾನ್ ಶ್ರೀನಿವಾಸನ್ (Dhyan Srinivasan) ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚು ತಮ್ಮ ಹಾಸ್ಯಭರಿತ ಮಾತುಗಳಿಂದ ಹಾಗೂ ವೇದಿಕೆ ಭಾಷಣಗಳ ಮೂಲಕ ಸುದ್ದಿಯಾಗುತ್ತಾರೆ. ಯಾವುದೇ ಕಾರ್ಯಕ್ರಮದಲ್ಲಾದರೂ ತಮ್ಮ ವಿಶಿಷ್ಟ ಕಾಮಿಡಿ ಸ್ಟೈಲ್ ನಿಂದ ಪ್ರೇಕ್ಷಕರನ್ನು ರಂಜಿಸುವ ಧ್ಯಾನ್, ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದಾರೆ. ನಟಿ ನವ್ಯಾ ನಾಯರ್ (Navya Nair) ಜೊತೆ ಅಭಿನಯಿಸಿರುವ ‘ವಿಸಿಟರ್’ (Visitor) ಚಿತ್ರದ ಕಾರ್ಯಕ್ರಮದಲ್ಲಿ ನಟ ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಸಿಟರ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆಗೆ ಬಂದ ಧ್ಯಾನ್ ಶ್ರೀನಿವಾಸನ್, ಮೈಕ್ ಹಿಡಿದ ತಕ್ಷಣವೇ ತಮ್ಮ ಮಾತುಗಳನ್ನು ಆರಂಭಿಸಿದ್ದಾರೆ . ತಮ್ಮ ಸಂದರ್ಶನ ಜೀವನ ಶುರುವಾಗಿದ್ದೇ ನಟಿ ನವ್ಯಾ ನಾಯರ್ ಮೇಲಿದ್ದ ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಬಾಲ್ಯದ ದಿನಗಳಿಂದಲೇ ನವ್ಯಾ ನಾಯರ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಆ ನಂತರ ಅವರು ವಿವಾಹವಾದರು. ಈಗ ಅವರಿಗೆ ದೊಡ್ಡ ಮಗನೂ ಇದ್ದಾನೆ. ಹಲವು ವರ್ಷಗಳ ನಂತರ ಈಗ ಅವರೊಂದಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಧ್ಯಾನ್ ತಮಾಷೆಯಾಗಿ ಹೇಳಿದ್ದಾರೆ.

ತಮ್ಮ ಭಾಷಣದ ವೇಳೆ ಧ್ಯಾನ್ ಹೇಳಿದ ಒಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ‘ನಾನು ಒಂದು ದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ನವ್ಯಾ ನಾಯರ್ ಸೀರೆ ಧರಿಸಿ, ಕಣ್ಣಲ್ಲಿ ಆನಂದ ಬಾಷ್ಪ ತುಂಬಿಕೊಂಡು ಮೊದಲ ಸಾಲಿನಲ್ಲಿ ಕುಳಿತಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಗುತ್ತಾ ಹೇಳಿದ್ದಾರೆ.

ಅದೇ ರೀತಿಯ ಕಾಮಿಡಿ ಸ್ಟೈಲ್ ನಲ್ಲಿ ಧ್ಯಾನ್ ತಮ್ಮ ಮಾತುಗಳನ್ನು ಹೇಳಿದ್ದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ಆ ಘಟನೆಗೆ ಹೋಲಿಕೆ ಮಾಡುತ್ತಿದ್ದಾರೆ.

ಧ್ಯಾನ್ ಮಾತಿನ ನಂತರ ನಟಿ ನವ್ಯಾ ನಾಯರ್ ಕೂಡ ಅದೇ ರೀತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ . ಭಯಪಡಬೇಡಿ ಧ್ಯಾನ್. ನೀವು ಮುಖ್ಯಮಂತ್ರಿ ಆದಾಗ ನೀವು ಬಯಸಿದಂತೆಯೇ ಹಸಿರು ಅಂಚಿನ ಬಿಳಿ ಸೀರೆ ಧರಿಸಿ, ವಜ್ರದ ಹಾರ ಹಾಕಿಕೊಂಡು, ಆನಂದ ಬಾಷ್ಪ ಹಾಕುತ್ತಾ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ನಗುತ್ತಾ ಉತ್ತರಿಸಿದ್ದಾರೆ.

ಧ್ಯಾನ್ ಶ್ರೀನಿವಾಸನ್ ಈ ಹಿಂದೆಯೂ ಹಲವು ಸಂದರ್ಶನಗಳಲ್ಲಿ ನಟಿ ನವ್ಯಾ ನಾಯರ್ ಮೇಲಿನ ತಮ್ಮ ಬಾಲ್ಯದ ಅಭಿಮಾನವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ಶ್ರೀನಿವಾಸನ್ ಹಾಗೂ ಕುಟುಂಬದೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದ ಅವರು, ಬಾಲ್ಯದಲ್ಲಿ ಕಾವ್ಯಾ ಮಾಧವನ್, ಮೀರಾ ಜಾಸ್ಮಿನ್ ಮತ್ತು ನವ್ಯಾ ನಾಯರ್ ಅವರ ಅಭಿಮಾನಿಯಾಗಿದ್ದೆ ಎಂದು ಹೇಳಿದ್ದರು.

ಅವರಲ್ಲಿ ಒಬ್ಬರನ್ನು ಮದುವೆಯಾಗಬೇಕು ಎಂಬ ಮುಗ್ಧ ಆಸೆಯೂ ಇತ್ತು ಎಂದು ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೊ ಕೂಡ ಇತ್ತೀಚೆಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧ್ಯಾನ್ ಮತ್ತು ನವ್ಯಾ ನಾಯರ್ ನಡುವಿನ ಈ ಸಂಭಾಷಣೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಭಿಮಾನಿಗಳು ಇಬ್ಬರ ನಡುವಿನ ಮಾತುಕತೆಯನ್ನು ಮೆಚ್ಚಿಕೊಂಡಿದ್ದು, ಇದು ಕಾರ್ಯಕ್ರಮದ ಬೆಸ್ಟ್ ಮೂಮೆಂಟ್ ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Actor: ‘ನಾನು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ನವ್ಯಾ ನಾಯರ್ ಮೊದಲ ಸಾಲಿನಲ್ಲಿ ಕೂರಬೇಕು’: ವಿಜಯ್-ತ್ರಿಷಾ ಉದಾಹರಣೆ ಕೊಟ್ಟು ಖ್ಯಾತ ನಟನ ಕಾಮೆಂಟ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed