Last Updated:
OTT: ಎಷ್ಟೋ ಹಾರರ್ ಮೂವಿ ನೋಡಿರ್ತೀರಿ. ಹಾಗಿದ್ರೆ ಇದೊಂದನ್ನು ನೋಡಿ. ಇಂಡೋನೇಷ್ಯಾದ ಮುದ್ದಾದ ಜೋಡಿ ನಡುವೆ ಬರೋ ದೆವ್ವದ ಕಥೆ ಮೈನಡುಗಿಸುತ್ತೆ.
ಒಟಿಟಿಯಲ್ಲಿ ಈಗ ಬಹಳಷ್ಟು ಸಿನಿಮಾಗಳು (Cinema) ರಿಲೀಸ್ ಆಗುತ್ತಲೇ ಇರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹಾರರ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ (Thriller) ಸಿನಿಮಾಗಳ ಕಡೆಗೆ ಬೇಡಿಕೆ ಹೆಚ್ಚಾಗಿದೆ. ಜನರು ಇಂಥಹ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳು ನೋಡಿ ಮುಗಿದವು ಎಂದುಕೊಂಡಿದ್ದೀರಾ? ಹಾಗಿದ್ರೆ ಈ ಸಿನಿಮಾ ನಿಮಗಾಗಿ.
ಹೌದು, ಒಟಿಟಿಯಲ್ಲಿ ಬೆಚ್ಚಿ ಬೀಳಿಸೋ ಸಿನಿಮಾ ಒಂದಿದೆ. ಇದನ್ನು ನೋಡುತ್ತಿದ್ದರೆ ನಿಮ್ಮ ದೇಹದಲ್ಲಿ ನಡುಕ ಬರೋದು ಗ್ಯಾರೆಂಟಿ. ಒಬ್ಬರೇ ನೋಡಬೇಕು. ಪುಟ್ಟ ಮಕ್ಕಳು, ವೃದ್ಧರೂ ನೋಡದೇ ಇರುವುದು ವಾಸಿ.
ಇದು ಮುದ್ದಾದ ಜೋಡಿಯ ನಡುವೆ ಬರುವ ಒಂದು ಹಾರಿಫಿಕ್ ದೆವ್ವದ ಸ್ಟೋರಿ. ವಿವಾಹಿತ ಯುವತಿಯನ್ನು ತನ್ನದೇ ವಧು ಎಂದು ಬಿಟ್ಟೂ ಬಿಡದೆ ಕಾಡುವ ದೆವ್ವ ಚಂದದ ಜೋಡಿಯ ಜೀವನವನ್ನು ಹಿಂಡಿ ಬಿಡುತ್ತದೆ. ಆ ಸಿನಿಮಾ ಯಾವುದು? ಎಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಸಿನಿಮಾ ಪೆಂಗೆನ್ಟಿನ್ ಸೆತಾನ್. ಈ ಕಥೆಯು ವಿವಾಹಿತ ದಂಪತಿ ಕುರಿತಾಗಿದೆ. ಇಚಾ (ಎರಿಕಾ ಕಾರ್ಲಿನಾ) ಮತ್ತು ಏರಿಯಲ್ (ಎಮಿರ್ ಮಹಿರಾ). ಇಬ್ಬರ ನಡುವಿನ ಸಂಬಂಧವು ಸ್ವಲ್ಪ ಹಳಿ ತಪ್ಪಿರುತ್ತದೆ. ಆಗ ಇಚಾಗೆ ಚಿತ್ರ ವಿಚಿತ್ರ ಕನಸುಗಳು ಬರೋಕೆ ಶುರುವಾಗುತ್ತದೆ. ಒಬ್ಬ ನಿಗೂಢ ವ್ಯಕ್ತಿ ಅವಳ ಕನಸಿನಲ್ಲಿ ಅವಳನ್ನು ಸಮಾಧಾನಪಡಿಸೋಕೆ ಶುರು ಮಾಡುತ್ತಾನೆ.
ಆದರೆ, ಆ ವ್ಯಕ್ತಿ ಮನುಷ್ಯನಲ್ಲ ಎಂದು ಅವಳು ಅರಿತುಕೊಳ್ಳುತ್ತಾಳೆ. ಅವನು ಜಿನ್ ದಾಸಿಮ್, ಇಸ್ಲಾಮಿಕ್ ಜಾನಪದದ ಪ್ರಕಾರ ಕುಟುಂಬಗಳನ್ನು ನಾಶಮಾಡುವ ಶಕ್ತಿಶಾಲಿ, ದುಷ್ಟಶಕ್ತಿ. ದಂಪತಿ ಹೆಚ್ಚುತ್ತಿರುವ ಭಯ ಮತ್ತು ಗೊಂದಲದಲ್ಲಿಯೇ ಬದುಕುತ್ತಿರುವಾಗ ಅವರ ಜೀವನದ ದಿಕ್ಕೇ ಬದಲಾಗುತ್ತದೆ.

ವಿಶಿಷ್ಟ ಹಾರರ್ ಅನುಭವ ನೀಡುವ ಪೆಂಗೆನ್ಟಿನ್ ಸೆತಾನ್ ಅಥವಾ ‘ದಿ ಡೆವಿಲ್ಸ್ ಬ್ರೈಡ್’ ಅನ್ನು ವಿಶೇಷವಾಗಿಸುವುದು ಇಂಡೋನೇಷಿಯನ್ ಜಾನಪದದ ಕಥೆ ಮತ್ತು ಇಸ್ಲಾಮಿಕ್ ಪಿಶಾಚಿ ಉಚ್ಛಾಟಿಸುವ ಆಚರಣೆಗಳ ಸಂಯೋಜನೆಯಾಗಿದೆ.
ನಿರ್ದೇಶಕರು ಈ ಅಂಶಗಳನ್ನು ಆಧುನಿಕ ಸಿನಿಮೀಯ ತಂತ್ರಗಳೊಂದಿಗೆ ಸುಂದರವಾಗಿ ಸಂಯೋಜಿಸಿ ಸಸ್ಪೆನ್ಸ್ ಮತ್ತು ಸಾಂಸ್ಕೃತಿಕ ಆಳದಿಂದ ತುಂಬಿರುವ ಭಯಾನಕ ಹಾರರ್ ಜಗತ್ತನ್ನು ಸೃಷ್ಟಿಸುತ್ತಾರೆ. ಚಿತ್ರದಲ್ಲಿ ನೆರಳುಗಳು, ಮೂಕ ಕ್ಷಣಗಳು ಮತ್ತು ಹಠಾತ್ ಜಂಪ್‌ಸ್ಕೇರ್‌ಗಳ ಬಳಕೆಯು ಸಿನಿಮಾದ ಉದ್ದಕ್ಕೂ ನಿಮ್ಮ ಎದೆ ಬಡಿತ ಹೆಚ್ಚಿಸುತ್ತಲೇ ಇರುತ್ತದೆ.

ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ಎಲ್ಲಾ ಕಡೆಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ. ಪೆಂಗೆನ್ಟಿನ್ ಇಬ್ಲಿಸ್, ಪೆಂಗೆನ್ಟಿನ್ ಸೆತಾನ್, ಡೆವಿಲ್ಸ್ ಬ್ರೈಡ್ ಅನ್ನೋ ಹೆಸರಿನಿಂದ ಫೇಮಸ್ ಆಗಿವೆ. ಈ ಸಿನಿಮಾ ಇಂಡೋನೇಷ್ಯನ್ ಭಾಷೆ ಹಾಗೂ ಹಿಂದಿಯಲ್ಲಿ ಲಭ್ಯವಿದೆ. ಇದಕ್ಕೆ ಇಂಗ್ಲಿಷ್ ಸಬ್ಟೈಟಲ್ ಕೂಡಾ ಇರುತ್ತದೆ.
Bangalore,Karnataka














