Last Updated:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ಧರ್ಮಪತ್ನಿ ಚೆನ್ನಮ್ಮ (Chennamma) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರಿಗೆ ಕೆಲವು ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲ ಸಮಯದಿಂದ ಅವರು ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ. ಇಂದು ಸಂಜೆ 4 ಗಂಟೆ ವೇಳೆಗೆ ಹೃದಯ ಸ್ತಂಭನದಿಂದ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ಈ ಹಿಂದೆ ನ್ಯೂಸ್18 ಕನ್ನಡ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಚೆನ್ನಮ್ಮ ಅವರು, ಪತಿ, ಕುಟುಂಬ (Family Politics), ರಾಜಕೀಯ ಬೆಳವಣಿಗೆಗಳ ಆಸಕ್ತಿಯುತ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಪ್ರಜ್ವಲ್ ಇನ್ನು ಚಿಕ್ಕ ಹುಡುಗ ಆತನಿಗೆ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಈ ಚುನಾವಣೆಯಲ್ಲಿ ಮನೆಯಿಂದ ಇಬ್ಬರೇ ನಿಂತಿದ್ದರು. ಕುಟುಂಬದಿಂದ ಮುರ್ನಾಲ್ಕು ಜನ ಇದ್ದರೆ ಅಂತ ಮಾತನಾಡುತ್ತಾರೆ. ಆದ್ದರಿಂದ ಇಬ್ಬರೇ ಚುನಾವಣೆಗೆ ನಿಲ್ಲೋದು ಸಾಕು ಎಂಬ ಅಭಿಪ್ರಾಯ ನನಗೆ ಇತ್ತು ಎಂದು ಹೇಳಿದರು.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಹಾಗೂ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೆನ್ನಮ್ಮ ಅವರು, ಪ್ರಜ್ವಲ್ ಅವರಿಗೆ ಟಿಕೆಟ್ ನೀಡಬೇಕು ಅಂತ ನನಗೆ ಅನಿಸಲಿಲ್ಲ. ಏಕೆಂದರೆ ಇನ್ನು ರಾಜಕೀಯ ಅನುಭವ ಇಲ್ಲ. ಎಲ್ಲಾ ಮಾತನಾಡುತ್ತಾನೆ, ಓಡಾಟ ಮಾಡುತ್ತಿದ್ದ. ಬೇರೆ ಅವರಿಗೆ ಮಾತನಾಡಲು ಅವಕಾಶ ಕೊಡಬಾರದು ಎಂಬ ಉದ್ದೇಶ ನನ್ನದು. ಆದರೆ ಪ್ರಜ್ವಲ್ ಅವರಿಗೆ ಚುನಾವಣೆಗೆ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಪ್ರಜ್ವಲ್ ಹೇಳಿ ಒಪ್ಪಿಸಿದ್ದರು ಎಂದು ಚೆನ್ನಮ್ಮ ತಿಳಿಸಿದ್ದರು.
ದೇವೇಗೌಡ ಅವರ ಕರಡಿಯಲ್ಲಿ ಬೆಳೆದಿದ್ದ ಹಲವರು ಅವರನ್ನು ಬಿಟ್ಟು ಹೋಗಿ ಮಾತನಾಡುವಾಗ ನೋವಾಗಿತ್ತು. ನನ್ನೊಂದಿಗೆ ರಾಜಕೀಯ ಹೆಚ್ಚು ಮಾತನಾಡುತ್ತಿರಲಿಲ್ಲ. ಆರಂಭದಲ್ಲಿ ಕೆಲವು ಸಂದರ್ಭದಲ್ಲಿ ಮಾತ್ರ ರಾಜಕೀಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು. ಆದರೆ ಆ ಬಳಿಕ ನಮಗೆ ಬೇಸರ ಮಾಡೋದು ಬೇಡ ಅಂತ ಮಾತನಾಡುತ್ತಿರಲಿಲ್ಲ. ಅವರ ಜೊತೆಯಲ್ಲಿದ್ದವರೇ ತೊಂದರೆ ಕೊಟ್ಟಾಗಲೂ ಮಾತನಾಡುತ್ತಿರಲಿಲ್ಲ. ಮಕ್ಕಳೊಂದಿಗೆ ಮಾತ್ರ ರಾಜಕೀಯ ಚರ್ಚೆ ಆಗಾಗ ಮಾಡ್ತಾರೆ ಅಷ್ಟೇ ಎಂದು ಪತಿಯ ಬಗ್ಗೆ ಚೆನ್ನಮ್ಮ ಹೇಳಿದ್ದರು.
ನನಗೆ ರಾಜಕೀಯ ಇಷ್ಟ ಇಲ್ಲ. ಎಂದಿಗೂ ರಾಜಕೀಯಕ್ಕೆ ಬರಬೇಕು ಎಂದು ಅನಿಸಿರಲಿಲ್ಲ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಹೋದಾಗ ದೇವೇಗೌಡರಿಗೆ ಬೇಸರ ಆಗಿತ್ತು. ನಾವು ಯಾರು ಆಗ ಹೋಗಲಿಲ್ಲ. ನನ್ನೊಂದಿಗೆ ಕೆಲ ದಿನಗಳು ಮಾತನಾಡಿಲ್ಲ. ಆ ಬಳಿಕ ತಂದೆಗಾಗಿ ಮನೆಗೆ ಕುಮಾರಸ್ವಾಮಿ ವಾಪಸ್ ಬಂದಿದ್ದರು. ಕಾಂಗ್ರೆಸ್ ಜೊತೆಗೆ ಹೋಗಬೇಕು ಅಂತ ಇವರಿಗೆ ಇಷ್ಟ ಇತ್ತು. ಆದರೆ ಕೆಲವರು ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ಭೇಟಿ ಮಾಡಲು ಅವಕಾಶವೇ ನೀಡಲಿಲ್ಲ. ಈ ಹಿಂದೆ ಕಾಂಗ್ರೆಸ್ ಅವರು ಮೋಸ ಮಾಡಿದ್ದರಿಂದ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಿದ್ದರು ಅಷ್ಟೇ ಅಂತ ನನಗೆ ಅನಿಸುತ್ತದೆ. ನನಗೆ ಮೊದಲು ಜಾತಕ, ಜ್ಯೋತಿಷ್ಯದ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಮನೆಯಲ್ಲಿ ಜಾತಕ ಬರೆಯಿಸಿರಲಿಲ್ಲ. ದೇವೇಗೌಡರ ಜಾತಕದಲ್ಲಿ ರಾಜಕೀಯ ಬಗ್ಗೆ ಉಲ್ಲೇಖ ಇತ್ತು, 70 ವರ್ಷಗಳ ವರೆಗೂ ಅದರಲ್ಲಿ ಏನು ಬರೆದಿತ್ತೋ ಅದೇ ರೀತಿ ಆಗಿತ್ತು ಎಂದು ಹೇಳಿದ್ದರು.
Bangalore [Bangalore],Bangalore,Karnataka














