Last Updated:
ಖ್ಯಾತ ಹೃದ್ರೋಗ ತಜ್ಞ ಡಾ. ಮೆಹುಲ್ ರಾಥೋಡ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಅವರ ಕಾರಿನಲ್ಲಿ ಖಾಲಿ ಇಂಜೆಕ್ಷನ್ ಬಾಟಲುಗಳು ಪತ್ತೆಯಾಗಿದ್ದು, ವಿಧಿವಿಜ್ಞಾನ ತನಿಖೆ ಪ್ರಾರಂಭಿಸಲಾಗಿದೆ.
ಎಂ.ಜೆ. ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ (Cardiologist) ಡಾ. ಮೆಹುಲ್ ಈಶ್ವರ್ ರಾಥೋಡ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಾರಾಷ್ಟ್ರದ ಲಾತೂರ್ ನಗರದಲ್ಲಿ ಈ ದುಃಖಕರ ಘಟನೆಯೊಂದು ನಡೆದಿದೆ. ನಗರದ ಪ್ರಸಿದ್ಧ ಎಂ.ಜೆ. ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ. ಮೆಹುಲ್ ಈಶ್ವರ್ ರಾಥೋಡ್ ತಮ್ಮ ಕಾರಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆರಂಭಿಕ ತನಿಖೆಯಲ್ಲಿ ಪೊಲೀಸರು ಆತ್ಮಹತ್ಯೆಯ ಸಾಧ್ಯತೆಯನ್ನು ಶಂಕಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಆತ್ಮಹತ್ಯೆ ಎಂದು ಶಂಕಿಸಲಾಗಿದೆ ಆದರೆ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸ್ ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ನಡೆಸುತ್ತಿವೆ.
ಡಾ. ಮೆಹುಲ್ ರಾಥೋಡ್ ಅವರು ಲಾತೂರ್‌ನಲ್ಲಿ ಜನಪ್ರಿಯ ಹೃದ್ರೋಗ ತಜ್ಞರಾಗಿದ್ದರು. ನಿನ್ನೆ ಬುಧವಾರ ದಿನ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಅಂಬೆಜೋಗೈ ರಸ್ತೆಯ ಪ್ರದೇಶಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಸುಮಾರು 1:30 ಗಂಟೆಯ ಸುಮಾರಿಗೆ ಅವರ ಕಾರು ಅಲ್ಲೇ ನಿಂತಿರುವುದು ಕಂಡುಬಂದಿದೆ. ನಂತರ ಅವರು ಆಸ್ಪತ್ರೆಗೆ ಹಿಂತಿರುಗದೇ ಇದ್ದಾಗ ಅವರನ್ನು ಸಂಪರ್ಕಿಸಲು ಕುಟುಂಬದವರು ಮತ್ತು ಸಹೋದ್ಯೋಗಿಗಳು ಪದೇ ಪದೇ ಫೋನ್ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಹುಡುಕಾಟ ಆರಂಭಿಸಿದ್ದಾರೆ.
ಈ ವೇಳೆ ಕಾರು ಅಂಬೆಜೋಗೈ ರಸ್ತೆಯಲ್ಲಿ ನಿಂತಿರುವುದು ತಿಳಿದು ಅಲ್ಲಿಗೆ ಹೋದಾಗ ಡಾ. ಮೆಹುಲ್ ಅವರು ಕಾರಿನೊಳಗೆ ಗಂಭೀರ ಸ್ಥಿತಿಯಲ್ಲಿದ್ದರು ಎಂದು ವರದಿಯಾಗಿದೆ.
ಪತ್ನಿ ಮತ್ತು ಸಹ ವೈದ್ಯರು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಅವರ ಪತ್ನಿ ಮತ್ತು ಇತರ ಸಹೋದ್ಯೋಗಿಗಳು ಡಾ. ಮೆಹುಲ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನ ಮಾಡಿದರೂ, ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಾರಿನೊಳಗೆ ಕೆಲವು ಖಾಲಿ ಇಂಜೆಕ್ಷನ್ ಬಾಟಲುಗಳನ್ನು ಪತ್ತೆ ಮಾಡಿದ್ದಾರೆ. ವಿಷಕಾರಿ ವಸ್ತುವನ್ನು ಚುಚ್ಚಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಆ ವಸ್ತು ಏನು ಎಂಬುದು ಇನ್ನೂ ದೃಢಪಡಿಸಿಲ್ಲ. ವಿಧಿವಿಜ್ಞಾನ ತಂಡವು ಕಾರು, ಸುತ್ತಮುತ್ತಲಿನ ಪ್ರದೇಶ ಮತ್ತು ಇತರ ಪುರಾವೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ.
ಪೊಲೀಸರು ಡಾ. ಮೆಹುಲ್ ಅವರ ಮೊಬೈಲ್ ಫೋನ್, ಕರೆ ವಿವರಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆಗೆ ಏನಾದ್ರೂ ಕಾರಣಗಳಿದ್ಯಾ ಎಂದು ಕಂಡುಹಿಡಿಯಲು ಪ್ರಯತ್ನ ನಡೆಯುತ್ತಿದೆ. ಘಟನೆಯನ್ನು ಎಲ್ಲಾ ದೃಷ್ಟಿಯಿಂದ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಲಾತೂರ್‌ನ ವೈದ್ಯಕೀಯ ಸಮುದಾಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಡಾ. ಮೆಹುಲ್ ಅವರು ರೋಗಿಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಆಕಸ್ಮಿಕ ನಿಧನದಿಂದ ರೋಗಿಗಳು ಮತ್ತು ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಸದ್ಯ ಡಾ. ಮೆಹುಲ್ ರಾಥೋಡ್ ಅವರ ಸಾವಿಗೆ ನಿಖರ ಕಾರಣ ತಿಳಿಯುವವರೆಗೂ ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗಳ ವರದಿ ಬರುವವರೆಗೂ ಕಾಯಬೇಕಿದೆ.
ಈ ದುಃಖಕರ ಘಟನೆ ವೈದ್ಯರ ಮಾನಸಿಕ ಆರೋಗ್ಯದ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ. ಯಾರಿಗಾದರೂ ಮಾನಸಿಕ ಒತ್ತಡ ಅಥವಾ ತೊಂದರೆ ಇದ್ದಲ್ಲಿ ಸಹಾಯ ಪಡೆಯುವುದು ಮುಖ್ಯ ಎಂಬ ಸಂದೇಶವನ್ನು ಇಂತಹ ಘಟನೆಗಳು ನಮಗೆ ನೀಡುತ್ತವೆ.
Jul 16, 2026 11:01 AM IST














