S Janaki: ಈಡೇರಲೇ ಇಲ್ಲ ಜಾನಕಮ್ಮನ ಈ ಒಂದು ಕೊನೆಯ ಆಸೆ, ಗಾಯಕಿ ಮನಸ್ಸಿನಲ್ಲಿತ್ತಾ ಈ ನೋವು? | | ACTPnews

News18


Last Updated:

ಮೈಸೂರಿನಲ್ಲಿ ನಾನು ಕೊನೆ ದಿನಗಳನ್ನು ಕಳೆಯಬೇಕು ಅಂತ ಜಾನಕಮ್ಮ ಹೇಳಿದ್ರು. ಅವರ ಪುತ್ರ ಕೂಡ ಇಲ್ಲಿಯೇ ತನ್ನ ಕೊನೆಯ ದಿನಗಳನ್ನು ಕಳೆದ್ರು. ಆದ್ರೆ ಜಾನಕಮ್ಮನ ಈ ಒಂದು ಆಸೆ ಮಾತ್ರ ಈಡೇರಲಿಲ್ಲ ಎಂದಿದ್ದಾರೆ.

News18
News18

ಮೈಸೂರು (ಜು.12): ಭಾರತೀಯ ಚಿತ್ರರಂಗದ ಅದ್ಭುತ ಕಂಠಸಿರಿ, ಎವರ್​​ಗ್ರೀನ್ ಗೀತೆಗಳ ಗಾಯಕಿ ಎಸ್.ಜಾನಕಿ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನಲ್ಲೇ ಎಸ್​ ಜಾನಕಿ (S Janaki) ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ತಮ್ಮ ಜೀವನದ ಕೊನೆಯ ದಿನಗಳನ್ನ ಮೈಸೂರಿನಲ್ಲಿ (Mysuru) ಕಳೆದ ಎಸ್​ ಜಾನಕಿ ಅವ್ರ ಈ ಒಂದು ಕೊನೆಯ ಆಸೆ ಈಡೇರಲಿಲ್ಲ. ಏನಿತ್ತು ಜಾನಕಮ್ಮ ಅವರ ಆಸೆ?

ಮೈಸೂರಿನಲ್ಲೇ ಕೊನೆ ದಿನ, ಕೊನೆ ಆಸೆ ಏನು?

ಎಸ್​ ಜಾನಕಿ ಕೊನೆಯ ದಿನಗಳು ಹಾಗೂ ಅವರ ಆಸೆ ಬಗ್ಗೆ ಅವರ ಕೇರ್ ಟೇಕರ್ ನವೀನ್ ಮಾತಾಡಿದ್ದು, ಮೈಸೂರಿನಲ್ಲಿ ನಾನು ಕೊನೆ ದಿನಗಳನ್ನು ಕಳೆಯಬೇಕು ಅಂತ ಜಾನಕಮ್ಮ ಹೇಳಿದ್ರು. ಅವರ ಪುತ್ರ ಕೂಡ ಇಲ್ಲಿಯೇ ತನ್ನ ಕೊನೆಯ ದಿನಗಳನ್ನು ಕಳೆದ್ರು. ಮಗನ ವಿಚಾರದಲ್ಲಿ ಜಾನಕಮ್ಮಗೆ ಈ ಒಂದು ಆಸೆ ಇತ್ತು ಎಂದು ನವೀನ್​​ ಹೇಳಿದ್ದಾರೆ.

ಈಡೇರಲಿಲ್ಲ ಜಾನಕಮ್ಮನ ಈ ಆಸೆ

ಮಗನ ಸಾವಿನ ನೋವಿನಲ್ಲೇ ಕುಗ್ಗಿದ್ದ ಎಸ್ ಜಾನಕಿ ಅವ್ರು, ಪುತ್ರನ ನೆನಪಿಗೆ ಡಿಸೆಂಬರ್​ನಲ್ಲಿ ಒಂದು ಕಾರ್ಯಕ್ರಮ ಮಾಡುವ ಯೋಜನೆ ರೂಪಿಸಿದ್ರಂತೆ. ಇದಕ್ಕಾಗಿ ಚಿತ್ರಾ, ಚರಣ್ ಬಾಲಸುಬ್ರಹ್ಮಣ್ಯ, ಸೇರಿ ದೊಡ್ಡ ದೊಡ್ಡ ಗಾಯಕರನ್ನು ಕೂಡ ಡೇಟ್ ಕೇಳಿ ಪಡೆದಿದ್ರು. ಆದ್ರೆ ಈ ಒಂದು ಕೊನೆ ಆಸೆ ಈಡೇರಲಿಲ್ಲ ಎಂದು ಕೇರ್ ಟೇಕರ್ ನವೀನ್ ಹೇಳಿದ್ದಾರೆ.

ಅಮ್ಮನ ಆಸೆಯಂತೆ ಅಂತ್ಯಕ್ರಿಯೆ

ಮೈಸೂರಿನಲ್ಲೇ ಕೊನೆ ದಿನ ಕಳೆದ ಎಸ್ ಜಾನಕಿ ಅವರು ಅಮ್ಮನ ಆಸೆಯಂತೆ ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ತೋಟದಲ್ಲೇ ಅಂತ್ಯಕ್ರಿಯೆ

ನವೀನ್,‌ ಪವನ್ ಅವರು ಸರ್ವೇ ನಂ.156 ರ ಎರಡು ಎಕರೆ ಜಾಗ ಖರೀದಿ ಮಾಡಿದ್ದರಂತೆ. ಬೆಳಗ್ಗೆಯಿಂದ ಸಂಜೆಯವರೆಗೂ ಎಸ್ ಜಾನಕಿ ಅವರು ಈ ತೋಟದಲ್ಲೇ ಇರುತ್ತಿದ್ದರಂತೆ. ಜಾಗ ವಿಡಿಯೋ ಕಾಲ್ ಮಾಡಿ ತೋರಿಸಿ ಜಾಗ ಖರೀದಿ ಮಾಡಿದ್ರು. ಈ ತೋಟದಲ್ಲಿ ಅಂತಿಮ ಸಂಸ್ಕಾರ ಮಾಡಿ ಎಂದು ನವೀನ್ ಬಳಿ ಹೇಳಿದ್ದರಂತೆ ಎಸ್ ಜಾನಕಿ.

ಎಸ್‌.ಜಾನಕಿ ಅವ್ರ ಆಸೆಯಂತೆ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು,ಆಂಧ್ರ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನರವೇರಲಿದೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ, ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.

1957ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಜಾನಕಿ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಎಂದು ಹರಿದು ಬರಲು ಪ್ರಾರಂಭವಾದವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು.  ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports