Last Updated:
US Brazil Trade Tariffs: ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಮತ್ತು ಅವರ ಸರ್ಕಾರ ಪ್ರಾಮಾಣಿಕವಾಗಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್, ಒಪ್ಪಂದಕ್ಕೆ ಬದ್ಧರಾಗುವ ಬದಲು ಲುಲಾ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್: ಇರಾನ್ ಜೊತೆ (Iran US Crisis) ನಡೆಯುತ್ತಿರುವ ಯುದ್ಧದ ಮಧ್ಯೆಯೇ ಅಮೆರಿಕವು ಬ್ರೆಜಿಲ್ ಮೇಲೆ ಸುಂಕ ಬಾಂಬ್ ಹಾಕಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬ್ರೆಜಿಲ್ ಮೇಲೆ ಶೇಕಡಾ 25 ರಷ್ಟು (US Tax on Brazil) ಸುಂಕ ವಿಧಿಸಲು ಆದೇಶಿಸಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಮತ್ತು ಅವರ ಸರ್ಕಾರ ಪ್ರಾಮಾಣಿಕವಾಗಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್, ಒಪ್ಪಂದಕ್ಕೆ ಬದ್ಧರಾಗುವ ಬದಲು ಲುಲಾ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕಾ ಸರ್ಕಾರ ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 25% ತೆರಿಗೆ (ಟ್ಯಾರಿಫ್) ಹೇರಲು ನಿರ್ಧರಿಸಿದ್ದು, ಕಳೆದ ತಿಂಗಳು ಪ್ರಸ್ತಾಪಿಸಲಾಗಿದ್ದ ಈ ತೆರಿಗೆಗಳು ಜುಲೈ 22ರಂದು ಜಾರಿಗೆ ಬರಲಿವೆ.
ಅಮೆರಿಕಾ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಈ ಕ್ರಮವು ಅಮೆರಿಕದ ಕಾರ್ಮಿಕರು ಮತ್ತು ಕಂಪನಿಗಳು ನ್ಯಾಯಯುತವಾಗಿ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಲು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ‘ಕಳೆದ ಒಂದು ವರ್ಷದಿಂದ ಬ್ರೆಜಿಲ್‌ನೊಂದಿಗೆ ನಡೆದ ವ್ಯಾಪಕ ಮಾತುಕತೆಗಳು ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ, ಆದರೆ ಈ ತನಿಖೆಯಲ್ಲಿ ಗುರುತಿಸಲಾದ ಸಮಸ್ಯೆಗಳಿಗೆ ಬಹುಕಾಲದಿಂದ ಅಗತ್ಯವಿರುವ ಬದಲಾವಣೆಗಳನ್ನು ತರಲು ನಾವು ಬ್ರೆಜಿಲ್‌ನೊಂದಿಗೆ ಮುಂದುವರೆದು ಮಾತುಕತೆ ನಡೆಸಲು ಸಿದ್ಧರಿದ್ದೇವೆ’ ಎಂದು ಹೇಳಿದರು.
ಈ ಸಂಬಂಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರೆಜಿಲ್‌ನಿಂದ ಬರುವ ಹೆಚ್ಚಿನ ಸರಕುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವಂತೆ USTR (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್) ಗೆ ನಿರ್ದೇಶನ ನೀಡಿದ್ದಾರೆ. ಈ ನಿರ್ಧಾರದ ಹಿಂದಿನ ಕಾರಣದ ಬಗ್ಗೆ ಯಾವುದೇ ಗೊಂದಲ ಇರಬಾರದು. ಅಧ್ಯಕ್ಷ ಲೂಲಾ ಮತ್ತು ಅವರ ಸರ್ಕಾರವು ಅಮೆರಿಕದೊಂದಿಗೆ ಪ್ರಾಮಾಣಿಕವಾಗಿ ಮತ್ತು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಿಲ್ಲ’ ಎಂದು ಹೇಳಿದ್ದಾರೆ.
Today, President Trump directed USTR to impose a 25% tariff on most Brazilian imports. Let there be no confusion about why: President Lula and his government have not negotiated with the US in good faith.
His economic policies are bad for Americans and bad for Brazilians. For…
— Secretary Marco Rubio (@SecRubio) July 16, 2026
ಈ ಸುಂಕದ ವಿಷಯಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ಟ್ರಂಪ್ ಮತ್ತು ಅಮೆರಿಕವನ್ನು ಟೀಕಿಸಿದೆ. ಅಧ್ಯಕ್ಷ ಲೂಲಾ ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಆ ಪೋಸ್ಟ್‌ನಲ್ಲಿ, ‘ನಮ್ಮ ದೇಶದ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳುವುದು ಸರಿಯಲ್ಲ. ಕಳೆದ 15 ವರ್ಷಗಳಲ್ಲಿ, ಅಮೆರಿಕವು ಬ್ರೆಜಿಲ್‌ನಿಂದ ಸರಕು ಮತ್ತು ಸೇವೆಗಳಲ್ಲಿ $424.5 ಬಿಲಿಯನ್ ಹೆಚ್ಚುವರಿ ಆದಾಯವನ್ನು ಗಳಿಸಿದೆ. 2025 ರಲ್ಲಿ, ಯುಎಸ್ ಆಮದುಗಳಲ್ಲಿ ಶೇಕಡಾ 76 ರಷ್ಟು ಯಾವುದೇ ಆಮದು ಸುಂಕವಿಲ್ಲದೆ ಬ್ರೆಜಿಲ್‌ಗೆ ಪ್ರವೇಶಿಸುತ್ತವೆ ಮತ್ತು ಯುಎಸ್ ಉತ್ಪನ್ನಗಳ ಮೇಲಿನ ಸರಾಸರಿ ಪರಿಣಾಮಕಾರಿ ಸುಂಕವು ಕೇವಲ ಶೇಕಡಾ 3.1 ರಷ್ಟಿರುತ್ತದೆ.’ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳ ಮೇಲೆ ಸುಂಕ ವಿಧಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಈಗ, ಅವರು ಬ್ರೆಜಿಲ್ ಮೇಲೆ ಸುಂಕ ಬಾಂಬ್ ಹಾಕಿದ್ದಾರೆ. ಈ ಅನಿಯಂತ್ರಿತ ಸುಂಕಗಳ ವಿರುದ್ಧ ‘ಪರಸ್ಪರ ಕಾನೂನು’ವನ್ನು ಅನುಸರಿಸುವುದಾಗಿ ಬ್ರೆಜಿಲ್ ಸರ್ಕಾರ ಹೇಳಿದೆ. ಬ್ರೆಜಿಲ್ ಈ ವಿವಾದವನ್ನು ವಿಶ್ವ ವ್ಯಾಪಾರ ಸಂಸ್ಥೆ (WTO) ಗೆ ಕೊಂಡೊಯ್ಯುವ ಸಾಧ್ಯತೆ ಇದೆ.
Jul 16, 2026 11:23 AM IST














