Chennamma Deve Gowda: ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧೆ ಮಾಡೋದು ಇಷ್ಟವಿಲ್ಲ ಎಂದಿದ್ದ ಚೆನ್ನಮ್ಮ; ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಚೆನ್ನಮ್ಮ, ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಪತ್ನಿ (ಸಂಗ್ರಹ ಚಿತ್ರ)


Last Updated:

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚೆನ್ನಮ್ಮ, ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಪತ್ನಿ (ಸಂಗ್ರಹ ಚಿತ್ರ)
ಚೆನ್ನಮ್ಮ, ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಪತ್ನಿ (ಸಂಗ್ರಹ ಚಿತ್ರ)

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ (HD Devegowda) ಅವರ ಧರ್ಮಪತ್ನಿ ಚೆನ್ನಮ್ಮ (Chennamma) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರಿಗೆ ಕೆಲವು ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲ ಸಮಯದಿಂದ ಅವರು ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ. ಇಂದು ಸಂಜೆ 4 ಗಂಟೆ ವೇಳೆಗೆ ಹೃದಯ ಸ್ತಂಭನದಿಂದ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ಈ ಹಿಂದೆ ನ್ಯೂಸ್​18 ಕನ್ನಡ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಚೆನ್ನಮ್ಮ ಅವರು, ಪತಿ, ಕುಟುಂಬ (Family Politics), ರಾಜಕೀಯ ಬೆಳವಣಿಗೆಗಳ ಆಸಕ್ತಿಯುತ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ಓದಿ.

ನ್ಯೂಸ್​18 ಕನ್ನಡದ ವಿಶೇಷ ಸಂದರ್ಶನ ಕಾರ್ಯಕ್ರಮ ‘ಅತಿಥಿ, ಲೀಡರ್​​ಗಳ ಕ್ಯಾಪ್ಟನ್​ಗಳು’ ಶೋದಲ್ಲಿ ಭಾಗಿಯಾಗಿ ಮಾತನಾಡಿದ್ದ ಚೆನ್ನಮ್ಮ ಅವರು, 2018ರ ಸಂದರ್ಭದ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಸಕ್ತಿಯುತ ಕಾಮೆಂಟ್​​ಗಳನ್ನು ಮಾಡಿದ್ದರು. 2018ರ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನಿತಾ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರ ಹೆಸರು ಮುನ್ನೆಲೆಗೆ ಬಂದಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಪ್ರಜ್ವಲ್ ರಾಜಕೀಯ ಪ್ರವೇಶ!

ಪ್ರಜ್ವಲ್ ಇನ್ನು ಚಿಕ್ಕ ಹುಡುಗ ಆತನಿಗೆ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಈ ಚುನಾವಣೆಯಲ್ಲಿ ಮನೆಯಿಂದ ಇಬ್ಬರೇ ನಿಂತಿದ್ದರು. ಕುಟುಂಬದಿಂದ ಮುರ್ನಾಲ್ಕು ಜನ ಇದ್ದರೆ ಅಂತ ಮಾತನಾಡುತ್ತಾರೆ. ಆದ್ದರಿಂದ ಇಬ್ಬರೇ ಚುನಾವಣೆಗೆ ನಿಲ್ಲೋದು ಸಾಕು ಎಂಬ ಅಭಿಪ್ರಾಯ ನನಗೆ ಇತ್ತು ಎಂದು ಹೇಳಿದರು.

ಆರ್​.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಹಾಗೂ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೆನ್ನಮ್ಮ ಅವರು, ಪ್ರಜ್ವಲ್ ಅವರಿಗೆ ಟಿಕೆಟ್ ನೀಡಬೇಕು ಅಂತ ನನಗೆ ಅನಿಸಲಿಲ್ಲ. ಏಕೆಂದರೆ ಇನ್ನು ರಾಜಕೀಯ ಅನುಭವ ಇಲ್ಲ. ಎಲ್ಲಾ ಮಾತನಾಡುತ್ತಾನೆ, ಓಡಾಟ ಮಾಡುತ್ತಿದ್ದ. ಬೇರೆ ಅವರಿಗೆ ಮಾತನಾಡಲು ಅವಕಾಶ ಕೊಡಬಾರದು ಎಂಬ ಉದ್ದೇಶ ನನ್ನದು. ಆದರೆ ಪ್ರಜ್ವಲ್ ಅವರಿಗೆ ಚುನಾವಣೆಗೆ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಪ್ರಜ್ವಲ್ ಹೇಳಿ ಒಪ್ಪಿಸಿದ್ದರು ಎಂದು ಚೆನ್ನಮ್ಮ ತಿಳಿಸಿದ್ದರು.

ಮನೆಯಲ್ಲಿ ರಾಜಕೀಯ ಚರ್ಚೆ ನಡೆಯುತ್ತಾ?

ದೇವೇಗೌಡ ಅವರ ಕರಡಿಯಲ್ಲಿ ಬೆಳೆದಿದ್ದ ಹಲವರು ಅವರನ್ನು ಬಿಟ್ಟು ಹೋಗಿ ಮಾತನಾಡುವಾಗ ನೋವಾಗಿತ್ತು. ನನ್ನೊಂದಿಗೆ ರಾಜಕೀಯ ಹೆಚ್ಚು ಮಾತನಾಡುತ್ತಿರಲಿಲ್ಲ. ಆರಂಭದಲ್ಲಿ ಕೆಲವು ಸಂದರ್ಭದಲ್ಲಿ ಮಾತ್ರ ರಾಜಕೀಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು. ಆದರೆ ಆ ಬಳಿಕ ನಮಗೆ ಬೇಸರ ಮಾಡೋದು ಬೇಡ ಅಂತ ಮಾತನಾಡುತ್ತಿರಲಿಲ್ಲ. ಅವರ ಜೊತೆಯಲ್ಲಿದ್ದವರೇ ತೊಂದರೆ ಕೊಟ್ಟಾಗಲೂ ಮಾತನಾಡುತ್ತಿರಲಿಲ್ಲ. ಮಕ್ಕಳೊಂದಿಗೆ ಮಾತ್ರ ರಾಜಕೀಯ ಚರ್ಚೆ ಆಗಾಗ ಮಾಡ್ತಾರೆ ಅಷ್ಟೇ ಎಂದು ಪತಿಯ ಬಗ್ಗೆ ಚೆನ್ನಮ್ಮ ಹೇಳಿದ್ದರು.

ರಾಜಕೀಯ ಆಸಕ್ತಿ ಇತ್ತಾ?

ನನಗೆ ರಾಜಕೀಯ ಇಷ್ಟ ಇಲ್ಲ. ಎಂದಿಗೂ ರಾಜಕೀಯಕ್ಕೆ ಬರಬೇಕು ಎಂದು ಅನಿಸಿರಲಿಲ್ಲ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಹೋದಾಗ ದೇವೇಗೌಡರಿಗೆ ಬೇಸರ ಆಗಿತ್ತು. ನಾವು ಯಾರು ಆಗ ಹೋಗಲಿಲ್ಲ. ನನ್ನೊಂದಿಗೆ ಕೆಲ ದಿನಗಳು ಮಾತನಾಡಿಲ್ಲ. ಆ ಬಳಿಕ ತಂದೆಗಾಗಿ ಮನೆಗೆ ಕುಮಾರಸ್ವಾಮಿ ವಾಪಸ್ ಬಂದಿದ್ದರು. ಕಾಂಗ್ರೆಸ್ ಜೊತೆಗೆ ಹೋಗಬೇಕು ಅಂತ ಇವರಿಗೆ ಇಷ್ಟ ಇತ್ತು. ಆದರೆ ಕೆಲವರು ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ಭೇಟಿ ಮಾಡಲು ಅವಕಾಶವೇ ನೀಡಲಿಲ್ಲ. ಈ ಹಿಂದೆ ಕಾಂಗ್ರೆಸ್ ಅವರು ಮೋಸ ಮಾಡಿದ್ದರಿಂದ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಿದ್ದರು ಅಷ್ಟೇ ಅಂತ ನನಗೆ ಅನಿಸುತ್ತದೆ. ನನಗೆ ಮೊದಲು ಜಾತಕ, ಜ್ಯೋತಿಷ್ಯದ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಮನೆಯಲ್ಲಿ ಜಾತಕ ಬರೆಯಿಸಿರಲಿಲ್ಲ. ದೇವೇಗೌಡರ ಜಾತಕದಲ್ಲಿ ರಾಜಕೀಯ ಬಗ್ಗೆ ಉಲ್ಲೇಖ ಇತ್ತು, 70 ವರ್ಷಗಳ ವರೆಗೂ ಅದರಲ್ಲಿ ಏನು ಬರೆದಿತ್ತೋ ಅದೇ ರೀತಿ ಆಗಿತ್ತು ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed