Last Updated:
ಮೈಸೂರಿನ ಮೇಲಿನ ಪ್ರೀತಿಗೆ ತಮ್ಮ ಊರನ್ನೇ ಬಿಟ್ಟು ಬಂದು ಇಲ್ಲಿ ನೆಲೆಸಿದ್ರು. ಎಸ್ ಜಾನಕಿ ಅವರಿಗೆ ಮೈಸೂರಿನಲ್ಲಿ ಯಾವುದೇ ಸಂಬಂಧಿಗಳಿಲ್ಲ ಅಭಿಮಾನಿಯ ಬಾಡಿಗೆ ಮನೆಯಲ್ಲೇ ಎಸ್ ಜಾನಕಿ ನೆಲೆಸಿದ್ದು ಯಾಕೆ?
ಮೈಸೂರು (ಜು.12): ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ (S Janaki) ಇಹಲೋಕ ತ್ಯಜಿಸಿದ್ದಾರೆ. ಗಾಯಕಿಗೆ 88 ವರ್ಷ ವಯಸ್ಸಾಗಿತ್ತು. ಮೂಲತಃ ಆಂಧ್ರ ಪ್ರದೇಶದವರಾದ ಎಸ್ ಜಾನಕಿ ಅವರು ಕರ್ನಾಟಕದ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ (Mysuru) ಕಳೆದ ಎರಡೂವರೆ ವರ್ಷಗಳಿಂದ ನೆಲೆಸಿದ್ರು. ಮೈಸೂರಿನಲ್ಲಿ ಹುಟ್ಟಿದವರಲ್ಲ, ಇಲ್ಲಿ ಯಾವುದೇ ಸಂಬಂಧಿಗಳು ಕೂಡ ಅವರಿಗಿಲ್ಲ. ಅಭಿಮಾನಿಯ ಬಾಡಿಗೆ ಮನೆಯಲ್ಲಿ ನೆನೆಸಿದ್ದ ಎಸ್ ಜಾನಕಿ ಅವರು, ತಮ್ಮ ಕೊನೆ ದಿನಗಳನ್ನೇ ಮೈಸೂರಿನಲ್ಲಿ ಕಳೆದಿದ್ದು ಯಾಕೆ?
ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಕೊನೆಯ ದಿನಗಳನ್ನ ತಮ್ಮ ನೆಚ್ಚಿನ ಮೈಸೂರಿನಲ್ಲಿ ಕಳೆದಿದ್ದಾರೆ. ಮೈಸೂರಿನ ಮೇಲಿನ ಪ್ರೀತಿಗೆ ತಮ್ಮ ಊರನ್ನೇ ಬಿಟ್ಟು ಬಂದು ಇಲ್ಲಿ ನೆಲೆಸಿದ್ರು. ಎಸ್ ಜಾನಕಿ ಅವರಿಗೆ ಮೈಸೂರಿನಲ್ಲಿ ಯಾವುದೇ ಸಂಬಂಧಿಗಳಿಲ್ಲ ಅಭಿಮಾನಿಯ ಬಾಡಿಗೆ ಮನೆಯಲ್ಲೇ ಎಸ್ ಜಾನಕಿ ನೆಲೆಸಿದ್ರು. ಮೈಸೂರಿನಲ್ಲೇ ತಮ್ಮ ಕೊನೇ ದಿನಗಳನ್ನ ಕಳೆದಿದ್ದಾರೆ.
ಇಲ್ಲಿನ ಬೋಗಾದಿಯ ಹರ್ಷ ಬಾರ್ ಹಿಂಭಾಗದ ಅಭಿಮಾನಿಯೊಬ್ಬರ ಮನೆಯಲ್ಲಿ ಅವ್ರು ವಾಸವಿದ್ದರು. ಈ ಮನೆಯ ಮಾಲೀಕರಾದ ಭವ್ಯಾ ಅವರು ಜಾನಕಿ ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರಂತೆ. ಮೈಸೂರಿನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಜಾನಕಿಗೆ ಇಲ್ಲಿ ದೊಡ್ಡ ಅಭಿಮಾನಿ ಬಳಗವೇ ಇತ್ತು.
ಮೈಸೂರಿನಲ್ಲಿ ಎರಡು ವರ್ಷಗಳಿಂದಲೂ ಇದ್ದ ಅವರು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೂ ಆಗಾಗ ಭೇಟಿ ನೀಡುತ್ತಿದ್ದರು. ಅಪಾರ ದೈವಭಕ್ತೆಯಾದ ಅವರು ನಂಜನಗೂಡು ನಂಜುಂಡೇಶ್ವರ, ಚಾಮುಂಡೇಶ್ವರಿ, ಯೋಗಾನರಸಿಂಹಸ್ವಾಮಿ ದೇವಾಲಯ ಸೇರಿದಂತೆ ವಿವಿಧೆಡೆ ಭೇಟಿ ಕೊಟ್ಟಿದ್ದರು.
ಪುತ್ರನ ನಿಧನದ ನಂತರ ಬಹಳ ನೊಂದಿದ್ದ ಎಸ್ ಜಾನಕಿ ಅವ್ರು ವಯೋಸಹಜ ಸಮಸ್ಯೆಗಳೂ ಅವರನ್ನು ಬಾಧಿಸುತ್ತಿತ್ತು ಎನ್ನಲಾಗ್ತಿದೆ. ಮೈಸೂರಿನಲ್ಲಿ ಅವರಿಗೆ ಸಂಬಂಧಿಕರು ಯಾರೂ ಇರಲಿಲ್ಲ. ಅಭಿಮಾನಿಗಳೇ ಎಲ್ಲವೂ ಆಗಿದ್ದರು ಎಂದು ಹೇಳಿದರು.
ನವೀನ್ ಎನ್ನುವವರು ಅವರ ಕಟ್ಟಾ ಅಭಿಮಾನಿ. ಇಲ್ಲಿನ ಬೋಗಾದಿಯ ಹರ್ಷ ಬಾರ್ ಎದುರಿರುವ ತಮ್ಮ ಪೀಠೋಪಕರಣಗಳ ಅಂಗಡಿಗೆ ಎಸ್.ಜಾನಕಿ ಫರ್ನಿಚರ್ ಅಂಡ್ ಟಿಂಬರ್ಸ್ ಅಂಗಡಿ ಎಂದೇ ಹೆಸರಿಟ್ಟಿದ್ದಾರೆ. ಜಾನಕಮ್ಮನ ಕೇರ್ ಟೇಕರ್ ಆಗಿದ್ರು.
ಮೈಸೂರು ಎಂದರೆ ಜಾನಕಮ್ಮನವರಿಗೆ ವಿಶೇಷ ಪ್ರೀತಿ. ತಮ್ಮ ಮಗನ ಅಗಲಿಕೆಯ ನಂತರ ಅವರು ಮಾನಸಿಕವಾಗಿ ಕುಗ್ಗಿದ್ದರು. ತಮ್ಮ ಕೊನೆಯುಸಿರು ಇರುವವರೆಗೂ ಮೈಸೂರಿನಲ್ಲೇ ಇರಬೇಕು ಮತ್ತು ಅಂತ್ಯಸಂಸ್ಕಾರವೂ ಅಲ್ಲೇ ನಡೆಯಬೇಕೆಂಬುದು ಜಾನಕಮ್ಮನವರ ಆಸೆಯಾಗಿತ್ತು. ಹೀಗಾಗಿ ಇಲ್ಲೇ ಅಂತ್ಯ ಸಂಸ್ಕಾರ ನೆರವೇರಲಿದೆ.














