Vijay Sethupathi: ತಲೈವಾ ಕರೆಗೆ ಇಲ್ಲ ಅಂದಿಲ್ಲ! ರಜನಿಕಾಂತ್‌ಗಾಗಿ ನಿಯಮ ಮೀರಿ ನಟಿಸಿದ ವಿಜಯ್ ಸೇತುಪತಿ | | ACTPnews

ವಿಜಯ್ ಸೇತುಪತಿ


Last Updated:

ಒಂದು ಕಾಲದಲ್ಲಿ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ವಿಜಯ್ ಸೇತುಪತಿ, ನಂತರ ಅಂತಹ ಪಾತ್ರಗಳಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು. ಇದೀಗ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಚಿತ್ರಕ್ಕಾಗಿ ತಮ್ಮದೇ ನಿಯಮವನ್ನು ಮುರಿದಿದ್ದಾರೆ.

ವಿಜಯ್ ಸೇತುಪತಿ
ವಿಜಯ್ ಸೇತುಪತಿ

ದಕ್ಷಿಣ ಭಾರತದ ಬಹುಬೇಡಿಕೆಯ ನಟ ವಿಜಯ್ ಸೇತುಪತಿ (Vijay Sethupathi) ತಮ್ಮ ಅಭಿನಯದ ಮೂಲಕ ನಾಯಕ, ಖಳನಾಯಕ ಹಾಗೂ ಪೋಷಕ ನಟನ ಪಾತ್ರಗಳಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದ ಅವರು, ಇದೀಗ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಚಿತ್ರಕ್ಕಾಗಿ ತಮ್ಮದೇ ನಿಯಮವನ್ನು ಮುರಿದಿದ್ದಾರೆ. ಈ ವಿಚಾರವನ್ನು ಸ್ವತಃ ವಿಜಯ್ ಸೇತುಪತಿ ಬಹಿರಂಗಪಡಿಸಿದ್ದು, ಅದರ ಹಿಂದಿನ ಕಾರಣವೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅತಿಥಿ ಪಾತ್ರಗಳಿಗೆ ಹಾಕಿದ್ದ ಬ್ರೇಕ್

ಒಂದು ಕಾಲದಲ್ಲಿ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ವಿಜಯ್ ಸೇತುಪತಿ, ನಂತರ ಅಂತಹ ಪಾತ್ರಗಳಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು. ಸಣ್ಣ ಹಾಗೂ ಮಧ್ಯಮ ಬಜೆಟ್ ಸಿನಿಮಾಗಳಲ್ಲಿ ತಮ್ಮ ಕೇಮಿಯೋ ಪಾತ್ರವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದರಿಂದ ನಾಯಕನಾಗಿ ನಟಿಸುವ ತಮ್ಮ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅವರು ಈ ತೀರ್ಮಾನ ಮಾಡಿದ್ದರು. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಯಾವುದೇ ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೆ ರಜನಿಕಾಂತ್ ಅಭಿನಯದ ‘ಜೈಲರ್ 2’ಗಾಗಿ ಮಾತ್ರ ತಮ್ಮ ನಿಯಮವನ್ನು ಬದಲಿಸಿಕೊಂಡಿರುವುದಾಗಿ ವಿಜಯ್ ಸೇತುಪತಿ ಹೇಳಿದ್ದಾರೆ.

ನಾನು ಈಗ ಅತಿಥಿ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದೇನೆ. ಆದರೆ ‘ಜೈಲರ್ 2’ ಮಾತ್ರ ಅದಕ್ಕೆ ವಿನಾಯಿತಿ. ಏಕೆಂದರೆ ಅದು ರಜನಿಕಾಂತ್ ಸರ್ ಅವರ ಸಿನಿಮಾ. ಆ ಚಿತ್ರದ ಪೋಸ್ಟರ್‌ನಲ್ಲಿ ನನ್ನ ಫೋಟೋ ಇದ್ದರೂ ಜನರ ಗಮನ ಹೋಗುವುದು ರಜನಿಕಾಂತ್ ಅವರ ಮೇಲೆಯೇ. ಆದ್ದರಿಂದ ಇಲ್ಲಿ ನನ್ನ ಕೇಮಿಯೋದಿಂದ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅದರ ಜೊತೆಗೆ ಕನ್ನಡದ ಶಿವರಾಜ್ ಕುಮಾರ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಕಾರಣದಿಂದ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ರಜನಿಕಾಂತ್ ಮೇಲಿನ ಗೌರವವೇ ಕಾರಣ

ತಾವು ಮಾಡಿಕೊಂಡಿದ್ದ ನಿಯಮವನ್ನು ಕೇವಲ ರಜನಿಕಾಂತ್ ಅವರ ಮೇಲಿನ ಗೌರವಕ್ಕಾಗಿ ಮಾತ್ರ ಮುರಿದಿರುವುದಾಗಿ ವಿಜಯ್ ಸೇತುಪತಿ ಸ್ಪಷ್ಟಪಡಿಸಿದ್ದಾರೆ. ತಲೈವಾ ಜೊತೆಗಿನ ಈ ವಿಶೇಷ ಸಹಯೋಗ ಇದೀಗ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದು, ಜೈಲರ್ 2 ಬಿಡುಗಡೆಯನ್ನು ಸಿನಿಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports