Last Updated:
ಅಯೋಗ್ಯ-2 ಚಿತ್ರ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಸಿನಿಮಾ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಸತೀಶ್ ನೀನಾಸಂ ನಾಯಕ.
ರಚಿತಾ ರಾಮ್ (Rachita Ram) ತುಂಬಾನೆ ಸಿಟ್ಟಾಗಿದ್ದಾರೆ. “ಏನ್ರಿ ಕಂಟೆಂಟ್” ಅಂತಲೇ ಪ್ರಶ್ನೆ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಕಂಟೆಂಟ್ ಇರೋದಿಲ್ವಾ? ನಮ್ಮ ಚಿತ್ರಗಳನ್ನ (Movies) ನೋಡಿ, ದಯವಿಟ್ಟು ನೋಡಿ ಅಂತ ಕೇಳುವ ಸ್ಥಿತಿಯಲ್ಲಿದ್ದೇವೆ. ಆದರೆ, ನೀವು ಎರಡೂವರೆ ಗಂಟೆಯಿಂದ ನಮ್ಮ ನೋಡಲು ಕಾಯ್ತಾ ನಿಂತಿದ್ದೀರಿ, ಇದನ್ನ ನೋಡಿದರೆ ನಿಜಕ್ಕೂ ಖುಷಿ ಆಗುತ್ತದೆ. ಆಗಸ್ಟ್-7 ರಂದು ನಮ್ಮ ಅಯೋಗ್ಯ-2 ಚಿತ್ರ (Ayogya-2 Movie) ಬರ್ತಿದೆ. ಇದನ್ನ ನೀವೆಲ್ಲ ನೋಡ್ತೀರಿ ಅಲ್ವೇ? ಈ ಒಂದು ಪ್ರಶ್ನೆಯನ್ನು ಕೇಳ್ತಾನೇ ಚಿತ್ರದ ಬಗ್ಗೆ ರಚಿತಾ ರಾಮ್ (Rachita Ram) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ ಪ್ರೀ-ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿಯ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್ ಅಲ್ಲಿ ಈ ಒಂದು ಇವೆಂಟ್ ನಡೆದಿದೆ.
ಏನ್ರಿ ಕಂಟೆಂಟ್, ನಮ್ಮ ಚಿತ್ರದಲ್ಲಿ ಇಲ್ವೆ?
(ಚಿತ್ರ ಕೃಪೆ: ರಚಿತಾ ರಾಮ್ ಇನ್‌ಸ್ಟಾಗ್ರಾಮ್)
ಇಲ್ಲಿ ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ರವಿಶಂಕರ್, ಅಭಿಷೇಕ್ ಅಂಬರೀಶ್ ಸೇರಿದಂತೆ ಇನ್ನು ಅನೇಕರು ಬಂದಿದ್ದರು. ಚಿತ್ರ ತಂಡವೂ ಇಲ್ಲಿ ಹಾಜರಿದ್ದರು. ಸಿನಿಮಾ ಪ್ರಚಾರಕ್ಕೇನೆ ಇವರೆಲ್ಲ ಇಲ್ಲಿ ಜಮಾ ಆಗಿದ್ದರು.
ದಯವಿಟ್ಟು ನಮ್ಮ ಚಿತ್ರ ನೋಡ್ತೀರಿ ಅಲ್ವೇ? ನೋಡಿ ಹೇಗಿದೆ ನಮ್ಮ ಪರಿಸ್ಥಿತಿ, ದಯವಿಟ್ಟು ನೋಡ್ತೀರಿ ಅಲ್ವೇ? ಅಂತಲೇ ಕೇಳುವ ಹಾಗಿದೆ ಅಂತಲೇ ರಚಿತಾ ರಾಮ್ ಬೇಸರ ಹೊರ ಹಾಕಿದ್ದಾರೆ.
ಅಯೋಗ್ಯ-2 ಚಿತ್ರ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಸಿನಿಮಾ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಸತೀಶ್ ನೀನಾಸಂ ನಾಯಕ.
ಅಯೋಗ್ಯ-2 ಪ್ರೀ-ರಿಲೀಸ್ ಇವೆಂಟ್
(ಚಿತ್ರ ಕೃಪೆ: ರಚಿತಾ ರಾಮ್ ಇನ್‌ಸ್ಟಾಗ್ರಾಮ್)
ಹೆಚ್ಚು ಕಡಿಮೆ 8 ವರ್ಷದ ಹಿಂದೆ ಅಯೋಗ್ಯ ಒನ್ ಚಿತ್ರ ಬಂದಿತ್ತು. ಅದಾದ್ಮೇಲೆ ಈಗಲೇ ಅಯೋಗ್ಯ-2 ಬರ್ತಿದೆ. ಡೈರೆಕ್ಟರ್ ಮಹೇಶ್ ಕುಮಾರ್ ಈ ಚಿತ್ರದಲ್ಲಿ ಅಯೋಗ್ಯ ಒನ್ ಸಿನಿಮಾದ ಕತೆಯನ್ನೆ ಮುಂದುವರೆಸಿದ್ದಾರೆ.
ಅಯೋಗ್ಯ-2 ಚಿತ್ರದಲ್ಲಿ ಡಬಲ್ ಎಂಟರ್‌ಟೈನಮೆಂಟ್ ಇದೆ. ಅಯೋಗ್ಯ ಒನ್ ಚಿತ್ರದ ಕತೆ ಇಲ್ಲಿ ಮುಂದುವರೆದಿದೆ. ಆದರೆ, ಈ ಸಲ ಎಂಟರ್‌ಟೈನ್‌ಮೆಂಟ್ ಡಬಲ್ ಇರುತ್ತದೆ ಅಂತ ಚಿತ್ರದ ನಾಯಕ ನಟ ಸತೀಶ್ ನೀನಾಸಂ ನ್ಯೂಸ್-18 ಕನ್ನಡದ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದಾರೆ.
ಅಯೋಗ್ಯ-2 ಚಿತ್ರಕ್ಕೆ ಕನ್ನಡದ ತಾರೆಯರು ಸಪೋರ್ಟ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ಅಭಿಷೇಕ್ ಅಂಬರೀಶ್ ಆಗಮಿಸಿದ್ದರು. ನಟಿ ಪ್ರಜ್ಞಾ ಸೇರಿದಂತೆ ಚಿತ್ರ ತಂಡದ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು.
ಈ ಪ್ರೀ-ರಿಲೀಸ್ ಇವೆಂಟ್ ಅಲ್ಲಿ ಚಿತ್ರದ ಮಿಲ್ಕಿ ಬ್ಯೂಟಿ ಹಾಡು ರಿಲೀಸ್ ಆಗಿದೆ. ಇದರಲ್ಲಿ ನಟಿ ಪ್ರಜ್ಞಾ ಗೆಸ್ಟ್ ಅಪೀಯರೆನ್ಸ್ ಮಾಡಿದ್ದಾರೆ. ಈ ಹಾಡಿನ ಮೂಲಕ ತುಂಬಾ ದಿನಗಳ ಬಳಿಕ ಪ್ರಜ್ಞಾ ಕನ್ನಡ ಚಿತ್ರ ಮಾಡಿದ್ದಾರೆ ಅಂತ ಹೇಳಬಹುದು.
Bangalore,Karnataka














