Kangana-Hrithik Roshan: ಕಂಗನಾ-ಹೃತಿಕ್ ನಡುವಿನ 13 ವರ್ಷಗಳ ಹಿಂದಿನ ವಿವಾದವೇನು? ಒಂದು ಕಾಮೆಂಟ್‌ನಿಂದ ಮತ್ತೆ ವೈರಲ್ ಆದ ಹಳೆಯ ಜಗಳ | | ACTPnews

Kangana-Hrithik Roshan: ಕಂಗನಾ-ಹೃತಿಕ್ ನಡುವಿನ 13 ವರ್ಷಗಳ ಹಿಂದಿನ ವಿವಾದವೇನು? ಒಂದು ಕಾಮೆಂಟ್‌ನಿಂದ ಮತ್ತೆ ವೈರಲ್ ಆದ ಹಳೆಯ ಜಗಳ |


2013ರಲ್ಲಿ ಶುರುವಾದ ವದಂತಿಗಳು

ಹೃತಿಕ್ ರೋಷನ್ ಮತ್ತು ಕಂಗನಾ ರಣಾವತ್ ಮೊದಲಿಗೆ 2010ರಲ್ಲಿ ಬಿಡುಗಡೆಯಾದ ಕೈಟ್ಸ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನಂತರ 2013ರಲ್ಲಿ ಬಿಡುಗಡೆಯಾದ ಕ್ರಿಶ್ 3 ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಂಡರು.

ಕ್ರಿಶ್ 3 ಬಿಡುಗಡೆಯಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸಂಬಂಧವಿದೆ ಎಂಬ ವದಂತಿಗಳು ಹರಿದಾಡತೊಡಗಿದವು. ಅದೇ ಸಮಯದಲ್ಲಿ ಹೃತಿಕ್ ರೋಷನ್ ಮತ್ತು ಅವರ ಪತ್ನಿ ಸುಸಾನೆ ಖಾನ್ ಬೇರ್ಪಟ್ಟಿದ್ದರು. ಈ ಹಿನ್ನೆಲೆ ವದಂತಿಗಳಿಗೆ ಇನ್ನಷ್ಟು ಬಲ ಸಿಕ್ಕಿತು. ಆದರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.

2016ರಲ್ಲಿ ತಾರಕಕ್ಕೇರಿದ ವಿವಾದ

2016ರಲ್ಲಿ ಕಂಗನಾ ರಣಾವತ್ ಸಂದರ್ಶನವೊಂದರಲ್ಲಿ ತಮ್ಮ ಸಿಲ್ಲಿ ಎಕ್ಸ್ ಬಗ್ಗೆ ಮಾತನಾಡಿದ್ದರು. ಅವರು ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ, ಆ ಹೇಳಿಕೆ ಹೃತಿಕ್ ರೋಷನ್ ಅವರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂಬ ಅಭಿಪ್ರಾಯ ಬಾಲಿವುಡ್‌ನಲ್ಲಿ ವ್ಯಾಪಕವಾಗಿ ವ್ಯಕ್ತವಾಯಿತು.

ಇದಾದ ಬಳಿಕ ಇಬ್ಬರ ನಡುವಿನ ವಾಕ್ಸಮರ ಬಹಿರಂಗವಾಯಿತು. ಕಂಗನಾ ಅವರ ಹೇಳಿಕೆಗಳಿಗೆ ಹೃತಿಕ್ ಆಕ್ಷೇಪ ವ್ಯಕ್ತಪಡಿಸಿ ಕಾನೂನು ನೋಟಿಸ್ ಕಳುಹಿಸಿದರು. ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.

ವಿವಾದ ಮತ್ತಷ್ಟು ತೀವ್ರವಾಗುತ್ತಿದ್ದಂತೆ, ಹೃತಿಕ್ ರೋಷನ್ ಅವರ ಕಾನೂನು ತಂಡ ಕಂಗನಾ ರಣಾವತ್ ಅವರು ಸಾವಿರಕ್ಕೂ ಹೆಚ್ಚು ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿತು. ಈ ಆರೋಪವೂ ಆ ಸಮಯದಲ್ಲಿ ಭಾರೀ ಸುದ್ದಿಯಾಗಿತ್ತು.

ಹೃತಿಕ್ ನೀಡಿದ್ದ ಸ್ಪಷ್ಟನೆ

ಪ್ಯಾರಿಸ್‌ನಲ್ಲಿ ಪ್ರಪೋಸ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್, ತಾವು 2014ರ ಜನವರಿಯಲ್ಲಿ ಪ್ಯಾರಿಸ್‌ಗೆ ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಹೇಳಿಕೆ ಪ್ರಕಟಿಸಿದ್ದ ಅವರು, ಸಂಬಂಧ ಹಲವು ವರ್ಷಗಳ ಕಾಲ ಮುಂದುವರಿದಿದ್ದರೆ ಅದರ ಬಗ್ಗೆ ಒಂದಾದರೂ ಫೋಟೋ, ಸಂದೇಶ ಅಥವಾ ಬೇರೆ ಯಾವುದೇ ಪುರಾವೆ ಏಕೆ ಇಲ್ಲ ಎಂದು ಪ್ರಶ್ನಿಸಿದ್ದರು.

ಮತ್ತೆ ಚರ್ಚೆಗೆ ಬಂದ ಹಳೆಯ ವಿವಾದ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್‌ಗೆ ಹೃತಿಕ್ ರೋಷನ್ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ಕಂಗನಾ ರಣಾವತ್ ತೀವ್ರವಾಗಿ ಉತ್ತರಿಸಿ, ತಮ್ಮ ಹೆಸರನ್ನು ಬಳಸಿಕೊಂಡು ಕಿರುಕುಳ ನೀಡುವವರನ್ನು ಮೊದಲು ಖಂಡಿಸಬೇಕು ಎಂದು ಆಗ್ರಹಿಸಿದರು.

ಜೊತೆಗೆ, ಇಂತಹ ಹೇಳಿಕೆಗಳ ಮೂಲಕ ಬೆಂಕಿಗೆ ತುಪ್ಪ ಸುರಿಯಬೇಡಿ ಎಂದು ಹೃತಿಕ್‌ಗೆ ಎಚ್ಚರಿಕೆ ನೀಡಿದರು. ಅಲ್ಲದೆ, ತಮ್ಮ ಸಂಗಾತಿಗೆ ಮುಜುಗರ ಉಂಟುಮಾಡುವ ರೀತಿಯ ವರ್ತನೆ ಬೇಡ ಎಂದು ಕೂಡ ಕಂಗನಾ ಹೇಳಿದ್ದಾರೆ.

ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್

ಈ ಬೆಳವಣಿಗೆಯೊಂದಿಗೆ 2013ರಲ್ಲಿ ಆರಂಭವಾಗಿ 2016ರಲ್ಲಿ ತಾರಕಕ್ಕೇರಿದ್ದ ಕಂಗನಾ-ಹೃತಿಕ್ ವಿವಾದ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed