Last Updated:
ಬಿಗ್ ಬಾಸ್ ಸೀಸನ್-13 ಶುರು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಪ್ರೋಮೋ ಆಗಸ್ಟ್-2 ರಂದು ಸಂಜೆ-7 ಕ್ಕೆ ರಿಲೀಸ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಸೀಸನ್-13 ರಲ್ಲಿ ಸುದೀಪ್ ಲುಕ್ (Sudeepa Look) ಹೇಗೆ ಇರುತ್ತದೆ. ಇವರ ಪ್ರೋಮೋ ಯಾವಾಗ ರಿಲೀಸ್ ಆಗುತ್ತದೆ. ಇವರ ಲುಕ್ ಅಲ್ಲಿ ಏನ್ ವಿಶೇಷ ಕಾಣಬಹುದು. ಈ ಎಲ್ಲ ಪ್ರಶ್ನೆಗಳಿದ್ದವು. ಅದಕ್ಕೆ ಭಾನುವಾರ ಆಗಸ್ಟ್-2 ರಂದು ತೆರೆ ಬೀಳ್ತಿದೆ. ಸಂಜೆ 7 ಗಂಟೆಗೆ ಬಿಗ್ ಬಾಸ್ ಸುದೀಪ್ ಪ್ರೋಮೋ (Sudeepa Promo) ರಿಲೀಸ್ ಆಗುತ್ತದೆ. ಈ ವಿಷಯವನ್ನ ಕಲರ್ಸ್ ಕನ್ನಡ (Colors Kannada) ಎರಡೂವರೆ ಗಂಟೆ ಮುಂಚೇನೆ ಹೇಳಿಕೊಂಡಿದೆ. ಅದು ಒಂದು ಇಂಟ್ರಸ್ಟಿಂಗ್ ಪ್ರೋಮೋ ಮೂಲಕವೇ ನೋಡಿ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಯಾವಾಗ
ಮಾರ್ಕ್ ಚಿತ್ರಕ್ಕಾಗಿಯೇ ಈ ಲುಕ್ ರೆಡಿ ಮಾಡಿದ್ದರು. ಅದೇ ರೂಪದಲ್ಲಿಯೇ ಇಡೀ ಬಿಗ್ ಬಾಸ್ ಶೋ ನಡೆಸಿಕೊಟ್ಟರು. ಆದರೆ, ಈ ಸಲ ಅಂದ್ರೆ ಸೀಸನ್-13 ಕ್ಕಾಗಿಯೇ ಸುದೀಪ್ ಬೇರೆ ಲುಕ್ ಟ್ರೈ ಮಾಡಿದ್ದಾರೆ.
ಆಗಸ್ಟ್-2 ಸಂಜೆ 7 ಕ್ಕೆ ಪ್ರೋಮೋ ರಿಲೀಸ್ ಆಗುತ್ತಿದೆ. ಇದನ್ನ ಕಲರ್ಸ್ ಕನ್ನಡ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದನ್ನ ಹೇಳಲಿಕ್ಕೆ ಒಂದು ಪ್ರೋಮೋ ಕೂಡ ಬಿಟ್ಟಿದೆ.
ಈ ಒಂದು ಪ್ರೋಮೋದಲ್ಲಿ ಬಾಸ್ ಈಸ್ ರೆಡಿ ಅನ್ನುವ ವಿಷಯವು ಇದೆ. ಇಲ್ಲಿವರೆಗೂ ಕಾದಿರೋದು ಮುಗಿತು. ಪ್ರೋಮೋ ಆಗಸ್ಟ್-2 ರಂದು 7 ಗಂಟೆಗೆ ಬರ್ತಿದೆ ಅನ್ನೋದನ್ನು ಇಲ್ಲಿ ಬರೆಯಲಾಗಿದೆ.
ಬಾಸ್ ಈಸ್ ರೆಡಿ
ಸಂಜೆ-7ಕ್ಕೆ ಬರ್ತಿರೋ ಈ ಪ್ರೋಮೋದಲ್ಲಿ ಸುದೀಪ್ ಏನು ಹೇಳ್ತಾರೆ. ಇವರ ಮಾತುಗಳಲ್ಲಿ ಬಿಗ್ ಬಾಸ್ ಯಾವ ವಿಚಾರ ರಿವೀಲ್ ಆಗುತ್ತದೆ. ಈ ಎಲ್ಲ ಕುತೂಹಲಗಳು ಇವೆ.
ಬಿಗ್ ಬಾಸ್ ಶುರು ಆಗುತ್ತದೆ ಅನ್ನುವ ಸುದ್ದಿ ಇದ್ದೇ ಇದೆ. ಸೆಪ್ಟೆಂಬರ್ ಅಲ್ಲಿಯೇ ಇದು ಪ್ರಸಾರ ಆಗುತ್ತದೆ ಅನ್ನುವ ನ್ಯೂಸ್ ಇದೆ. ಆದರೆ, ಸುದೀಪ್ ಲುಕ್ ಹೇಗೆ ಇರ್ತದೆ ಅನ್ನುವ ಪ್ರಶ್ನೆನೂ ಇತ್ತು. ಇದಕ್ಕೆ ಸದ್ಯ ಉತ್ತರ ಸಿಗುತ್ತಿದೆ.
ಆದರೆ, ಈ ಸಂಜೆ ರಿಲೀಸ್ ಆಗುತ್ತಿರೋ ಪ್ರೋಮೋದಲ್ಲಿ ಬಹುಶಃ ಬಿಗ್ ಬಾಸ್ ಪ್ರಸಾರದ ಡೇಟ್ ಕೂಡ ಅನೌನ್ಸ್ ಆಗಬಹುದು. ಇನ್ನುಳಿದಂತೆ ಬಿಗ್ ಬಾಸ್ ಸೀಸನ್-12 ಅನ್ನ ಗಿಲ್ಲಿ ನಟ ಗೆದ್ದು ಕೊಂಡು ಹೋಗಿದ್ದಾರೆ. ಈ ಸೀಸನ್ ಅಲ್ಲಿ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಅನ್ನುವ ಕುತೂಹಲ ಈಗಲೇ ಶುರು ಆಗಿದೆ ಅಂತ ಹೇಬಹುದು.
Bangalore [Bangalore],Bangalore,Karnataka














