Senior Actor: ದುರಂತ ಅಂತ್ಯ ಕಂಡಿದ್ದ ‘ನೀಲಾಂಬರಿ’ ಸಿನಿಮಾ ಪೋಷಕ ನಟ! ಮನೆಕೆಲಸದವಳಿಗೆ ಆಸ್ತಿ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದ ಕಲಾವಿದ! | | ACTPnews

ತೆಲುಗಿನ ಖ್ಯಾತ ನಟ


Last Updated:

Senior Actor: ಸಾಯುವ ಮುನ್ನ ಆ ನಟ ತನ್ನ ಎಲ್ಲಾ ಸಂಪತ್ತನ್ನು ಯಾರೂ ನಿರೀಕ್ಷಿಸದ ವ್ಯಕ್ತಿಗೆ ನೀಡಬೇಕೆಂದು ಕೇಳಿಕೊಂಡು ಸಂದೇಶವನ್ನು ಬರೆದಿಟ್ಟು ಹೋಗಿದ್ದರು! ಅಂದಹಾಗೆ ಅವರ ಅಂತಿಮ ಸಂದೇಶ ಹೀಗಿತ್ತು, “ಇದನ್ನು ಅವಳಿಗೆ ಕೊಡಿ. ಅವಳಿಗೆ ತೊಂದರೆ ಕೊಡಬೇಡಿ.”

ತೆಲುಗಿನ ಖ್ಯಾತ ನಟ
ತೆಲುಗಿನ ಖ್ಯಾತ ನಟ

ಇದು 11 ವರ್ಷಗಳ ಹಿಂದಿನ ಘಟನೆ. 2015, ಡಿಸೆಂಬರ್ 19ರಂದು ತೆಲುಗು ಚಿತ್ರರಂಗದ ಖ್ಯಾತ ನಟ (famous actor) ಜೀವ ಕಳೆದುಕೊಂಡಿದ್ದರು. ಬರೀ ಜೀವ ಕಳೆದುಕೊಂಡಿರಲಿಲ್ಲ, ಬದಲಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ನಟ, ಪೋಷಕನಟ, ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ (Telugu film industry) 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಅಲ್ಲದೇ ಕನ್ನಡದ ನೀಲಾಂಬರಿ (Neelambari) ಸೇರಿದಂತೆ ಕೆಲ ಸಿನಿಮಾಗಳಲ್ಲಿ, ತಮಿಳು, ಹಿಂದಿ ಸೇರಿ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. ಬಳಿಕ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಇವರು ಮನೆಮಾತಾಗಿದ್ದರು. ಇವರ ಆತ್ಮಹತ್ಯೆ ವಿಚಾರ ತಿಳಿದು ಭಾರತೀಯ ಚಿತ್ರರಂಗ ಶಾಕ್‌ಗೆ ಒಳಗಾಗಿತ್ತು. ಆದರೆ ಆ ದುರಂತವನ್ನು ಇನ್ನಷ್ಟು ಹೃದಯವಿದ್ರಾವಕವಾಗಿಸಿದ ಅಂಶ ಅವರ ಅಂತಿಮ ಆಶಯವಾಗಿತ್ತು.!

ಮನೆ ಕೆಲಸದವಳಿಗೆ ನನ್ನ ಆಸ್ತಿ ಕೊಡಿ

ಸಾಯುವ ಮುನ್ನ ಆ ನಟ ತನ್ನ ಎಲ್ಲಾ ಸಂಪತ್ತನ್ನು ಯಾರೂ ನಿರೀಕ್ಷಿಸದ ವ್ಯಕ್ತಿಗೆ ನೀಡಬೇಕೆಂದು ಕೇಳಿಕೊಂಡು ಸಂದೇಶವನ್ನು ಬರೆದಿಟ್ಟು ಹೋಗಿದ್ದರು! ಈ ಕಠಿಣ ಹೆಜ್ಜೆ ಇಡುವ ಮುನ್ನ, ಅವನು ತನ್ನ ಮನೆಯ ಗೋಡೆಯ ಮೇಲೆ ಕಪ್ಪು ಮಾರ್ಕರ್‌ನಿಂದ ಒಂದು ಟಿಪ್ಪಣಿ ಬರೆದಿದ್ದರು ಎಂದು ವರದಿಯಾಗಿತ್ತು. ತನ್ನ ಆಸ್ತಿಯನ್ನು ತನ್ನ ಕುಟುಂಬಕ್ಕೆ ಬಿಟ್ಟುಕೊಡುವ ಬದಲು, ಎಲ್ಲವನ್ನೂ ತನ್ನ ಮನೆಯ ಸಹಾಯಕರಿಗೆ ನೀಡುವಂತೆ ಕೇಳಿಕೊಂಡಿದ್ದರು. ಅಂದಹಾಗೆ ಅವರ ಅಂತಿಮ ಸಂದೇಶ ಹೀಗಿತ್ತು, “ಇದನ್ನು ಅವಳಿಗೆ ಕೊಡಿ. ಅವಳಿಗೆ ತೊಂದರೆ ಕೊಡಬೇಡಿ.”

66ನೇ ವಯಸ್ಸಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟ

ಅಂದಹಾಗೆ ಆ ಖ್ಯಾತ ನಟನ ಹೆಸರು ತಿರುಮಲ ಸುಂದರ ಶ್ರೀ ರಂಗನಾಥ್. ಇವರು ತೆಲುಗು ಚಿತ್ರರಂಗದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪ್ರಸಿದ್ಧ ಮುಖ. ಅವರು ಡಿಸೆಂಬರ್ 19, 2015 ರಂದು ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ 66 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಇಂದು ಬದುಕಿದ್ದಿದ್ದರೆ ಕಳೆದ ಜುಲೈ 17ರಂದು 77 ವರ್ಷ ಪೂರೈಸುತ್ತಿದ್ದರು.

ಮಗಳು ಬರುವ ಮುನ್ನವೇ ಆತ್ಮಹತ್ಯೆಗೆ ಶರಣು

ವರದಿಗಳ ಪ್ರಕಾರ, ಅವರ ಮಗಳು ನೀರಜಾ ಆ ಸಂಜೆ ಅವರನ್ನು ಭೇಟಿ ಮಾಡಲು ಹೋಗಿದ್ದರು. ಪದೇ ಪದೇ ಬಾಗಿಲು ಬಡಿದರೂ ಅವರು ಬಾಗಿಲು ತೆರೆಯದಿದ್ದಾಗ, ಕುಟುಂಬದವರು ಬಾಗಿಲು ಒಡೆದು ನೋಡಿದಾಗ ಅವರು ಒಳಗೆ ಆತ್ಮಹತ್ಯೆ ಮಾಡಿಕೊಂಡಿರೋದು ಕಂಡುಬಂದಿದೆ. ಆ ಕಾಲದ ವರದಿಗಳ ಪ್ರಕಾರ ರಂಗನಾಥ್ ದೀರ್ಘಕಾಲದವರೆಗೆ ಖಿನ್ನತೆ ಮತ್ತು ಒಂಟಿತನದಿಂದ ಬಳಲುತ್ತಿದ್ದರು. ನಂತರ ಅವರ ಮಗಳು, ಅವರು ಈ ಹಿಂದೆ ಹಲವಾರು ಬಾರಿ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದರು ಮತ್ತು ಸಮಾಲೋಚನೆಗಾಗಿಯೂ ಹೋಗಿದ್ದರು ಎಂದು ಹೇಳಿಕೊಂಡಿದ್ದರು.

ಗೋಡೆ ಮೇಲೆ ಕೊನೆ ಆಸೆ ಬರೆದಿದ್ದ ನಟ

ಅವರ ಕೊನೆಯ ಸಂದೇಶವು ಅವರ ಸ್ನೇಹಿತ ಬಿ ದೇವದಾಸ್ ಅವರಿಗೆ ಮಧ್ಯಾಹ್ನ 3.30 ಕ್ಕೆ “ವಿದಾಯ” ಹೇಳುವ SMS ಮೂಲಕ ಬಂದಿತ್ತು. ಆ ದಿನ ಅವನ ಮನೆಕೆಲಸದಾಕೆ ಮಿನಾಕ್ಷಿ ಎಂಬುವರು ಅವರಿಗೆ ಅಡುಗೆ ಮಾಡಿ ಮನೆಯಿಂದ ಹೊರಟು ಹೋಗಿದ್ದಳು. ಅವರು ತನ್ನ ಎಲ್ಲಾ ಸಂಪತ್ತನ್ನು ಅವಳಿಗೆ ಕೊಟ್ಟು ಹೋಗಲು ಆಯ್ಕೆ ಮಾಡಿಕೊಂಡಿದ್ದಾನೆಂದು ಅವಳಿಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ. ಸಾಯೋಮುನ್ನ ರಂಗನಾಥ್ ಗೋಡೆಯ ಮೇಲೆ ತನ್ನ ಆಸ್ತಿಗಳ ವಿವರಗಳನ್ನು ಸಹ ಬರೆದಿದ್ದರಂತೆ.

ಕನ್ನಡದಲ್ಲೂ ನಟಿಸಿದ್ದ ರಂಗನಾಥ್

ಅವರ ಸಾವಿನ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅವರ ನಿರ್ಧಾರದ ಹಿಂದಿನ ನಿಖರವಾದ ಕಾರಣವನ್ನು ಅಧಿಕೃತವಾಗಿ ಎಂದಿಗೂ ದೃಢಪಡಿಸಲಾಗಿಲ್ಲ. ಆದರೆ ಶವಪರೀಕ್ಷೆ ಮತ್ತು ಹೆಚ್ಚಿನ ಪುರಾವೆಗಳ ನಂತರ ಆತ್ಮಹತ್ಯೆ ಎಂದು ಘೋಷಿಸಲಾಯ್ತು. ಅಂದಹಾಗೆ 46 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ರಂಗನಾಥ್ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದ ನೀಲಾಂಬರಿ ಹಾಗೂ ಧರ್ಮದೇವತೆ ಸಿನಿಮಾದಲ್ಲೂ ರಂಗನಾಥ್ ನಟಿಸಿದ್ದರು.

ಸಹಾಯವಾಣಿ

ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಕಷ್ಟಪಡುತ್ತಿದ್ದರೆ, ದಯವಿಟ್ಟು ವೃತ್ತಿಪರ ಸಹಾಯವನ್ನು ಪಡೆಯಿರಿ. ರಾಷ್ಟ್ರೀಯ ಸಹಾಯವಾಣಿ: 1056. ಇತರ ಸಹಾಯವಾಣಿಗಳು — ಪ್ರತಿಷ್ಠಾ (ಕೊಚ್ಚಿ): 0484-2448830, ಮೈತ್ರಿ (ಕೊಚ್ಚಿ): 0484-2540530, ಆಶ್ರ (ಮುಂಬೈ): 022-27546669, ಸ್ನೇಹ (ಚೆನ್ನೈ): 044-24640050, ಜೀವನ್ (ಜಮ್ಶೆಡ್ಪುರ) 065-76453841, ಸುಮೈತ್ರಿ (ದೆಹಲಿ): 011-23389090, ಕೂಜ್ (ಗೋವಾ): 0832-2252525, ರೋಶ್ನಿ (ಹೈದರಾಬಾದ್): 040-66202000, ಲೈಫ್‌ಲೈನ್ 033-64643267 (ಕೋಲ್ಕತ್ತಾ).



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed