ಬಹು ಭಾಷೆಯಲ್ಲಿ ರಿಲೀಸ್
(ಚಿತ್ರ ಕೃಪೆ: ಟಾಕ್ಸಿಕ್ ದಿ ಮೂವಿ ಇನ್‌ಸ್ಟಾಗ್ರಾಮ್)
ಆದರೆ, ಈ ಚಿತ್ರ ಶುರು ಆಗಿ ಇದೀಗ 2 ವರ್ಷವೇ ಆಗಿದೆ. ಆಗಸ್ಟ್-8, 2024 ರಂದು ಗುರುವಾರ ಈ ಚಿತ್ರ ಲಾಂಚ್ ಆಗಿತ್ತು. ಈ ಲೆಕ್ಕದಂತೆ ಈ ಚಿತ್ರದ ಮುಹೂರ್ತ ಆಗಿ 2 ವರ್ಷಗಳೇ ಆಗಿವೆ ನೋಡಿ.
ಎರಡು ವರ್ಷದ ಬಳಿಕ ಆಗಸ್ಟ್-8 ರಂದು ಶನಿವಾರ ಈ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಚಿತ್ರ ಶುರುವಾದ ದಿನವೇ ಟ್ರೈಲರ್ ರಿಲೀಸ್ ಮಾಡ್ಬೇಕು ಅನ್ನುವ ಕಾರಣಕ್ಕೇನೆ ಈ ದಿನ ಟ್ರೈಲರ್ ರಿಲೀಸ್‌ಗೆ ಡೇಟ್ ಫಿಕ್ಸ್ ಮಾಡಿದ್ದಾರೆ ಅಂತಲೂ ಹೇಳಬಹುದು.
ಟಾಕ್ಸಿಕ್ ಚಿತ್ರ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಸಾವಿರ ಕೋಟಿ ವೆಚ್ಚದ ಈ ಚಿತ್ರವನ್ನ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ಕತೆಯನ್ನ ಯಶ್ ಹಾಗೂ ಗೀತು ಮೋಹನ್‌ದಾಸ್ ಜೊತೆಗೂಡಿಯೇ ಬರೆದಿದ್ದಾರೆ.
ರಾಯ ಮತ್ತು ಟಿಕೆಟ್ ರೋಲ್
(ಚಿತ್ರ ಕೃಪೆ: ಟಾಕ್ಸಿಕ್ ದಿ ಮೂವಿ ಇನ್‌ಸ್ಟಾಗ್ರಾಮ್)
ಕೆವಿಎನ್ ಹಾಗೂ ಯಶ್ ಜಂಟಿ ಆಗಿಯೇ ಇದನ್ನ ಪ್ರೊಡ್ಯೂಸ್ ಮಾಡಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಮಾಡಿದ್ದಾರೆ. ರಾಜೀವ್ ರವಿ ಕ್ಯಾಮರಾವರ್ಕ್ ಮಾಡಿದ್ದಾರೆ.
ಟಾಕ್ಸಿಕ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು , ತಮಿಳು, ಹಿಂದಿ, ಮಲೆಯಾಳಂ ಹೀಗೆ ಆಯಾ ಭಾಷೆಯಲ್ಲಿ ಇದು ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ತಯಾರಾಗಿದೆ.
ಯಶ್ ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ. ರಾಯ ಅನ್ನುವ ಪಾತ್ರವು ಇಲ್ಲಿದೆ. ಟಿಕೆಟ್ ಅನ್ನುವ ಇನ್ನು ಒಂದು ಪಾತ್ರವೂ ಇದೆ. ಈ ಎರಡೂ ಪಾತ್ರದಲ್ಲಿ ಯಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ.
ಈ ಎರಡೂ ಪಾತ್ರದ ಮೂಲಕ ಯಶ್ ಅಪ್ಪ ಮತ್ತು ಮಗನ ರೋಲ್ ಮಾಡ್ತಿದ್ದಾರೆ. ಹಾಗಾಗಿಯೇ ಈ ಚಿತ್ರದಲ್ಲಿ ಈ ಸೆಂಟಿಮೆಂಟ್ಸ್ ಕೂಡ ಇದೆ. ಆದರೆ, ಇದು ಒಂದು ಗ್ಯಾಂಗ್‌ಸ್ಟರ್ ಚಿತ್ರವೇ ಆಗಿದೆ.
ಮಹಿಳಾ ನಿರ್ದೇಶಕಿಯ ದೃಷ್ಟಿಕೋನದಲ್ಲಿಯೇ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಕತೆಯನ್ನ ಹೇಳಲಾಗುತ್ತಿದೆ. ಈ ವಿಷಯವನ್ನ ಸ್ವತಃ ಯಶ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













