Hardik Pandya: ಅದೊಂದು ಕಾರಣಕ್ಕೆ ನನ್ನನ್ನ ತಂಡದಿಂದ ಹೊರಗಿಡಲಾಗಿತ್ತು! ಶಾಕಿಂಗ್ ಮಾಹಿತಿ ಹಂಚಿಕೊಂಡ ಹಾರ್ದಿಕ್ ಪಾಂಡ್ಯ | ಕ್ರೀಡಾ ಸುದ್ದಿ | ACTPnews

ಹಾರ್ದಿಕ್ ಪಾಂಡ್ಯ


Last Updated:

ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ” ನಾನು ಎಂದಿಗೂ ನಾಯಕತ್ವಕ್ಕಾಗಿ ಆಡಲಿಲ್ಲ, ನಾನು ತಂಡಕ್ಕಾಗಿ ಆಡಿದ್ದೇನೆ. ನಾಯಕತ್ವದ ವಿಷಯಕ್ಕೆ ಬಂದಾಗ ನಾನು ಎಂದಿಗೂ ನನ್ನನ್ನು ಅನುಮಾನಿಸಿಲ್ಲ. ಏಕೆಂದರೆ ನಾನು ಪದವಿಗಾಗಿ ಅಥವಾ ತಂಡದಲ್ಲಿ ಅವಕಾಶಕ್ಕಾಗಿ ಆಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ತಮ್ಮ ಆಟಕ್ಕಿಂತ ಹೆಚ್ಚಾಗಿ ತಮ್ಮ ವರ್ತನೆ ಇಷ್ಟಪಡದ ಕಾರಣ ನನ್ನನ್ನು ತಂಡದಿಂದ ಕೈಬಿಡಲಾಗುತ್ತಿತ್ತು ಎಂದು ಅಚ್ಚರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಗಾಯದ ಕಾರಣ ಹಾರ್ದಿಕ್ ಪಾಂಡ್ಯ ಭಾರತ ತಂಡದಿಂದ (Team India) ಹೊರಗುಳಿದಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಪಡೆಯುತ್ತಿದ್ದಾರೆ. ಭಾರತದ ಮುಂದಿನ ವೈಟ್ ಬಾಲ್ ಸರಣಿಗೆ ಅವರು ಸಜ್ಜಾಗುತ್ತಿದ್ದಾರೆ.

ನಾನು ಎಂದಿಗೂ ನಾಯಕತ್ವಕ್ಕಾಗಿ ಆಡಿಲ್ಲ

ಕ್ರಿಕ್‌ಇನ್ಫೋಗೆ ನೀಡಿದ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ” ನಾನು ಎಂದಿಗೂ ನಾಯಕತ್ವಕ್ಕಾಗಿ ಆಡಲಿಲ್ಲ, ನಾನು ತಂಡಕ್ಕಾಗಿ ಆಡಿದ್ದೇನೆ. ನಾಯಕತ್ವದ ವಿಷಯಕ್ಕೆ ಬಂದಾಗ ನಾನು ಎಂದಿಗೂ ನನ್ನನ್ನು ಅನುಮಾನಿಸಿಲ್ಲ. ಏಕೆಂದರೆ ನಾನು ಪದವಿಗಾಗಿ ಅಥವಾ ತಂಡದಲ್ಲಿ ಅವಕಾಶಕ್ಕಾಗಿ ಆಡಿಲ್ಲ. ನಾಯಕನಲ್ಲದಿದ್ದರೂ ತಂಡದಲ್ಲಿ ನನಗೆ ಅನನ್ಯವಾದ, ಪರಿಣಾಮಕಾರಿ ಪಾತ್ರವಿದೆ ಎಂದು ನನಗೆ ತಿಳಿದಿದೆ. ತಂಡದಲ್ಲಿ 11 ಆಟಗಾರರು ನನ್ನ ಮಾತನ್ನು ಕೇಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ನೀವು ಒಬ್ಬ ಲೀಡರ್ ಆಗಲು ತಂಡದ ನಾಯಕನಾಗಬೇಕಾಗಿಲ್ಲ ಎಂದು ನಾನು ನಂಬುತ್ತೇನೆ. ಒಬ್ಬ ಆಟಗಾರನು ನಾಯಕನೂ ಆಗಬಹುದು. ನಾನು ಎಂದಿಗೂ ನಾಯಕತ್ವಕ್ಕಾಗಿ ಆಡಿಲ್ಲ. ಪ್ರತಿಯೊಬ್ಬ ಕ್ರಿಕೆಟಿಗನೂ ದೇಶವನ್ನು ಪ್ರತಿನಿಧಿಸುವ ಕನಸು ಕಾಣುತ್ತಾನೆ. ಆ ಅವಕಾಶ ಸಿಕ್ಕಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ ಮತ್ತು ಕೃತಜ್ಞನಾಗಿದ್ದೇನೆ. ಆದರೆ ನಾಯಕತ್ವ ಒಂದು ಹೆಚ್ಚುವರಿ ಗೌರವವಾಗಿದೆ. ಆದರೆ ಆ ಸಂತೋಷ ಕೆಲವೇ ನಿಮಿಷಗಳ ಕಾಲ ಮಾತ್ರ ಉಳಿದಿತ್ತು. ಏಕೆಂದರೆ ಆ ವೇಳೆ ನಾನು ನಾಯಕತ್ವದ ಗರ್ವಕ್ಕಿಂತ ತಂಡವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಹೆಚ್ಚು ಯೋಚಿಸುತ್ತಿದ್ದೆ. ನಾನು ಆ ಸಮಯವನ್ನು ಆನಂದಿಸಿದ್ದೇನೆ. ಆದರೆ ನಾನು ನಾಯಕತ್ವವನ್ನು ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರು ಯಾವುದೇ ಕ್ಷಣದಲ್ಲಿ ನಮ್ಮನ್ನು ತೊರೆಯಬಹುದು ಎಂಬ ಅರಿವು ನನಗಿತ್ತು ಎಂದು ತಿಳಿಸಿದ್ದಾರೆ.

ನಾನು ಯಾರಿಗೂ ಉತ್ತರಿಸಲು ಹೋಗುವುದಿಲ್ಲ

ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ನನಗೆ ಮುಖ್ಯವಲ್ಲ. ಏಕೆಂದರೆ ನನಗೆ ಅದರ ಅಗತ್ಯವಿಲ್ಲ. ನನ್ನ ಕೆಲಸದಿಂದ ನಾನು ಸಂತೋಷವಾಗಿದ್ದೇನೆಯೇ ಅಥವಾ ಇಲ್ಲವೇ? ಅದು ನನಗೆ ಮುಖ್ಯವಾಗಿದೆ. ನಾನು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ಮುಖ್ಯ ಕಾರಣವೆಂದರೆ ನನ್ನ ಮನಸ್ಸನ್ನು ರಿಫ್ರೆಶ್ ಮಾಡುವುದು ಮತ್ತು ಆ ಹಳೆಯ ಉತ್ಸಾಹವನ್ನು ಮರಳಿ ಪಡೆಯುವುದು. ನಾನು ಆಟವನ್ನು ಆನಂದಿಸಲು ಪ್ರಯತ್ನಿಸುತ್ತೇನೆ.

ನಾನು ಕೆಲಸ ಮಾಡುವುದು ನನಗಾಗಿ ಮಾತ್ರ. ನನ್ನ ಸಂತೋಷವು ಮನಸ್ಸಿನ ಶಾಂತಿಗಾಗಿ, ಇತರರಿಗಾಗಿ ಅಲ್ಲ. ಎಲ್ಲವೂ ಚೆನ್ನಾಗಿ ನಡೆದಾಗ ನಾನು ವಿಮರ್ಶಕರ ಮೇಲೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಎಲ್ಲರೂ ಹೇಳಬಹುದು. ಆದರೆ ಅದು ನನ್ನ ಉದ್ದೇಶವಲ್ಲ. ನನ್ನ ಏಕೈಕ ಗುರಿ ನನ್ನನ್ನು ತೃಪ್ತಿಪಡಿಸಿಕೊಳ್ಳುವುದು. ನಾನು ಬಂದ ಹಿನ್ನೆಲೆಯೇ ಆಗಿದೆ. ನನ್ನ ಪ್ರಯಾಣದ ಆಧಾರದ ಮೇಲೆ ನಾನು ಎದ್ದು ಕಾಣಬೇಕಾಗಿತ್ತು. ನನ್ನ ವ್ಯಕ್ತಿತ್ವ ಮೊದಲಿನಿಂದಲೂ ಸಂಪೂರ್ಣವಾಗಿ ಭಿನ್ನವಾಗಿತ್ತು. ಅದಕ್ಕಾಗಿಯೇ ನಾನು ಬೆಳೆಯುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ ಎಂದು ತಿಳಿಸಿದ್ದಾರೆ.

ನನ್ನ ವರ್ತನೆಯಿಂದಾಗಿ ಅವಕಾಶ ಕಳೆದಿಕೊಂಡಿದ್ದೆ

ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ‘ಆಟಿಟ್ಯೂಡ್’ (ಅಹಂಕಾರದ ನಡವಳಿಕೆ) ಕಾರಣಕ್ಕಾಗಿ ತಂಡದಿಂದ ಹೊರಬಿದ್ದಿದ್ದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಜೂನಿಯರ್ ಕ್ರಿಕೆಟ್ ಆಡುತ್ತಿದ್ದಾಗ, ಅಂದರೆ ತಮ್ಮ 16ನೇ ವಯಸ್ಸಿನಲ್ಲಿ ಬರೋಡಾ ತಂಡದಲ್ಲಿದ್ದರು. ಆ ಸೀಸನ್‌ನಲ್ಲಿ ಅವರು ಬರೋಡಾ U-16 ತಂಡಕ್ಕಾಗಿ ಬರೋಬ್ಬರಿ 800 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರೂ, ಅವರ ‘ಆಟಿಟ್ಯೂಡ್ ಸಮಸ್ಯೆ’ಯನ್ನು ಮುಂದಿಟ್ಟುಕೊಂಡು ಕೋಚ್ ಅವರನ್ನು ತಂಡದಿಂದ ಹೊರಹಾಕಿದ್ದರು.

ಇದನ್ನೂ ಓದಿ: Vaibhav Sooryavanshi vs Gayle: ಬೇಬಿ ಬಾಸ್​ vs ಯೂನಿವರ್ಸಲ್ ಬಾಸ್! ಮೊದಲ 6 ಪಂದ್ಯಗಳಲ್ಲಿ ಬೆಸ್ಟ್ ಯಾರು?

ತಮ್ಮ ಬಾಲ್ಯದ ದಿನಗಳಿಂದಲೂ ತಮಗೆ ಬಣ್ಣಬಣ್ಣದ ವಸ್ತುಗಳು, ವಿಭಿನ್ನ ಹೇರ್‌ಸ್ಟೈಲ್ ಹಾಗೂ ಮೈದಾನದಲ್ಲಿ ಸದಾ ಲವಲವಿಕೆಯಿಂದ ಇರುವುದು ಇಷ್ಟವಾಗಿತ್ತು. ತಾವು ಸಾಂಪ್ರದಾಯಿಕ ಕ್ರಿಕೆಟಿಗರಂತೆ ಇರದೆ ಸ್ವಲ್ಪ ವಿಭಿನ್ನವಾಗಿದ್ದರಿಂದ, ಜನರು ಮತ್ತು ತರಬೇತುದಾರರು ಅದನ್ನು ತಪ್ಪು ತಿಳುವಳಿಕೆಯಿಂದ ‘ಆಟಿಟ್ಯೂಡ್ ಸಮಸ್ಯೆ’ ಎಂದು ಬಿಂಬಿಸಿದರು ಎಂದು ಪಾಂಡ್ಯ ಸ್ಪಷ್ಟಪಡಿಸಿದ್ದಾರೆ.

ಆ ಸಮಯದಲ್ಲಿ ನನಗೆ ಆಟಿಟ್ಯೂಡ್ ಎಂದರೇನು ಎಂದೇ ತಿಳಿದಿರಲಿಲ್ಲ. ನಾನು ಕೇವಲ ನನ್ನ ಆಟವನ್ನು ಆನಂದಿಸುತ್ತಿದ್ದೆ ಮತ್ತು ನನ್ನ ಸ್ವಂತ ಸಂತೋಷಕ್ಕಾಗಿ ಕಷ್ಟಪಡುತ್ತಿದ್ದೆ. ಆದರೆ ನನ್ನ ನಡವಳಿಕೆಯನ್ನು ತಪ್ಪಾಗಿ ಗ್ರಹಿಸಿ ತಂಡದಿಂದ ಕೈಬಿಡಲಾಗುತ್ತಿತ್ತು” ಎಂದು ಹಾರ್ದಿಕ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports