Sonam Wangchuk: 26 ದಿನಗಳ ಬಳಿಕ ಉಪವಾಸ ಕೈಬಿಟ್ಟ ಸೋನಮ್‌ ವಾಂಗ್ಚುಕ್, ಸರ್ಕಾರ ಕೊಟ್ಟ ಭರವಸೆ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಪ್ರಮುಖ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಗುರುವಾರ ಮಧ್ಯರಾತ್ರಿಯ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

News18
News18

ನವದೆಹಲಿ (ಜು.24): ನೀಟ್‌ ಪ್ರಶ್ನೆಪತ್ರಿಕೆ (NEET Question Paper) ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಹಾರಗಳನ್ನು ವಿರೋಧಿಸಿ ಜೂ.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸಾಮಾಜಿಕ ಹೋರಾಟಗಾರ ಸೋನಮ್‌ ವಾಂಗ್ಚುಕ್‌ (Sonam Wangchuk) ನಿನ್ನೆ (ಜು.23) ರಾತ್ರಿ ತಮ್ಮ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹ ಸೋನಮ್ ವಾಂಗ್ಚುಕ್ ನಡೆಸುತ್ತಿದ್ದರು.

26 ದಿನಗಳ ಉಪವಾಸ ಕೈ ಬಿಟ್ಟ ಸೋನಮ್

ಪ್ರಮುಖ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಗುರುವಾರ ಮಧ್ಯರಾತ್ರಿಯ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ರು. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಮತ್ತು ಲಡಾಖ್ ಅಪೆಕ್ಸ್ ಬಾಡಿ ಹಿರಿಯ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಾಯಕರ ಜೊತೆಗಿನ ಚರ್ಚೆಗಳ ನಂತರ, ಕೇಂದ್ರ ಸಚಿವರು ನೀಡಿದ ಪಾನೀಯವನ್ನು ಸ್ವೀಕರಿಸುವ ಮೂಲಕ ಸೋನಮ್ ವಾಂಗ್ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ರು.

ಸೋನಮ್ ವಾಂಗ್ಚುಕ್ ಸುದೀರ್ಘ ಪೋಸ್ಟ್​  

“ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಮತ್ತು ಲಡಾಖ್ ಅಪೆಕ್ಸ್ ಬಾಡಿ ಹಿರಿಯ ನಾಯಕರ ಸಮ್ಮುಖದಲ್ಲಿ 26 ದಿನಗಳ ನಂತರ ನಾನು ನನ್ನ ಉಪವಾಸವನ್ನು ಕೊನೆಗೊಳಿಸಿದೆ. ಇದಕ್ಕೂ ಮೊದಲು, ವಿವಿಧ ರಾಜಕೀಯ ಪಕ್ಷಗಳ 65 ಸಂಸತ್ ಸದಸ್ಯರು ನನ್ನನ್ನು ಭೇಟಿಯಾಗಿ ಅಥವಾ ಉಪವಾಸವನ್ನು ಕೊನೆಗೊಳಿಸುವಂತೆ ಪತ್ರಗಳನ್ನು ಬರೆದು ವಿನಂತಿಸಿದರು. ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಸುದೀರ್ಘ ಚರ್ಚೆಯ ನಂತರ, ದೇಶದಲ್ಲಿ ಎಲ್ಲಿಯೂ ಯಾವುದೇ ಅಶಾಂತಿ ಅಥವಾ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡೆ ಎಂದು ಬರೆದಿದ್ದಾರೆ.

ವಿಶೇಷ ವೀಡಿಯೊ ಮೂಲಕ ಹಂಚಿಕೊಳ್ಳುವೆ

ಉಪವಾಸವನ್ನು ಕೊನೆಗೊಳಿಸುವ ಸಂಪೂರ್ಣ ಷರತ್ತುಗಳು ಮತ್ತು ವಿವರಗಳನ್ನು ನಾನು ಶೀಘ್ರದಲ್ಲೇ ನಿಮ್ಮೆಲ್ಲರೊಂದಿಗೆ ವಿಶೇಷ ವೀಡಿಯೊ ಮೂಲಕ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ, ನೀವು ಅತ್ಯಂತ ಜಾಗರೂಕರಾಗಿರಿ ಮತ್ತು ಎಲ್ಲಿಯೂ ಯಾವುದೇ ಹಿಂಸಾಚಾರದಲ್ಲಿ ತೊಡಗಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಗುರುವಾರ ರಾತ್ರಿಯ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ್ದು, ಈ ವೇಳೆ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಹಾಗೂ ವಾಂಗ್ಚುಕ್‌ ಪತ್ನಿ ಗೀತಾಂಜಲಿ ಕೂಡ ಉಪಸ್ಥಿತಿಯಲ್ಲಿದ್ದರು.

ವಾಂಗ್ಚುಕ್‌ ನಿರ್ಧಾರದ ಬಗ್ಗೆ ಮೋದಿ ಪೋಸ್ಟ್​

ಸೋನಮ್‌ ವಾಂಗ್ಚುಕ್‌ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದಂತೆ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ X ಪೋಸ್ಟ್‌ ಹಂಚಿಕೊಂಡಿದ್ದು, ವಾಂಗ್ಚುಕ್‌ ವೈದ್ಯರ ಸಲಹೆಯನ್ನು ಅನುಸರಿಸಿ ಬೇಗ ಮರಳಿ ತಮ್ಮ ಹಳೆಯ ಆರೋಗ್ಯವನ್ನು ಪಡೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed