Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews

ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು?


Last Updated:

ಸುದೀಪ್ ಪತ್ನಿ ಪ್ರಿಯಾ ಅವರಿಗೆ ಭಯ ಪಡ್ತಾರಾ? ಪ್ರಿಯಾ ಅವರಿಗೆ ಸುದೀಪ್ ಕಂಡ್ರೆ ಭಯ ಇದಿಯಾ? ಸಂಚಿತ್ ಇವರನ್ನ ಕಂಡ್ರೆ ಹೆದರುತ್ತಾರಾ? ಇದಕ್ಕೆ ಸ್ವತಃ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಕೊಟ್ಟಿದ್ದಾರೆ? ಇನ್ನು ಏನೆಲ್ಲ ಹೇಳಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ.

 ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು?
ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು?

ಕಿಚ್ಚ ಸುದೀಪ್ (Kichcha Sudeep) ಮತ್ತು ಪ್ರಿಯಾ ಸುದೀಪ್ (Priya Sudeepa) ಅವರಲ್ಲಿ ಯಾರಿಗೆ ಹೆಚ್ಚಿಗೆ ಭಯ ಇದೆ. ಅಂದ್ರೆ ಪರಸ್ಪರ ಯಾರು ಯಾರಿಗೆ ಭಯ ಪಡ್ತಾರೆ? ಈ ಒಂದು ಪ್ರಶ್ನೆಗೆ ಪ್ರಿಯಾ ಸುದೀಪ್ (Priya Sudeepa) ಸಿಟ್ಟು ಮಾಡಿಕೊಳ್ಳಲಿಲ್ಲ. ನಗ್ತಾನೇ ಉತ್ತರ ಕೊಟ್ಟಿದ್ದಾರೆ. ಇವರ ಕೊಟ್ಟ ಉತ್ತರ ತುಂಬಾನೆ ಚೆನ್ನಾಗಿದೆ. ಸುದೀಪ್ ಮತ್ತು ಪ್ರಿಯಾ ಅವರ ನಡುವಿನ ಬಾಂಡಿಂಗ್ (Bonding) ಹೇಗಿದೆ ಅನ್ನೋದನ್ನು ಇದು ಹೇಳುತ್ತದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ನಾವು ಸ್ನೇಹಿತರು

ಪ್ರಿಯಾ ಸುದೀಪ್ ಮೇ-2 ರಂದು ಡಿಜಿಟಲ್ ಮೀಟ್ ಪ್ಲಾನ್ ಮಾಡಿದ್ದರು. ಈ ಒಂದು ಮೀಟ್‌ಗೂ ಆಗಮಿಸಿದ್ದರು. ಇಲ್ಲಿರೋ ಯುಟ್ಯೂಬರ್‌ಗಳನ್ನ ನೋಡಿಯೇ ಇವರು ಗಾಬರಿ ಕೂಡ ಆದರು.
Is Kichcha Sudeep afraid of his wife What does Priya Sudeep have to say

ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು?

ಆದರೂ ಒಂದು ಬ್ಯೂಟಿಫುಲ್ ಸ್ಮೈಲ್‌ನೊಂದಿಗೆ ಒಳಗೆ ಎಂಟ್ರಿಕೊಟ್ರು. ಇಲ್ಲಿ ಎದುರಾದ ಅಷ್ಟು ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಹಾಗೆ ಮನೆಯಲ್ಲಿ ಇದೀಗ ಇಬ್ಬರು ಸ್ಟಾರ್‌ ನಟರಾದರು. ಹಾಗಾಗಿ ಸಡನ್ ಆಗಿಯೇ ಯಾರಿಗಾದರೂ ಬೈಯೋವಾಗ ಯೋಚನೆ ಮಾಡ್ತೀರಾ? ಭಯ ಇದಿಯಾ ಅನ್ನುವ ಪ್ರಶ್ನೆ ಕೂಡ ಇಲ್ಲಿ ಬಂತು.

ನನಗೆ ಭಯ ಏನೂ ಇಲ್ಲ…

ಸುದೀಪ್ ನನಗೆ ಭಯ ಪಡ್ತೀರಬೇಕು. ಅದಕ್ಕೂ ಹೆಚ್ಚಾಗಿ ನಾನು ಮತ್ತು ಸುದೀಪ್ ಒಳ್ಳೆ ಸ್ನೇಹಿತರೆ ಆಗಿದ್ದೇವೆ. ಮದುವೆ ಮುಂಚೆ ಒಳ್ಳೆ ಸ್ನೇಹಿತರೇ ಆಗಿದ್ದೇವು. ತುಂಬಾ ವರ್ಷದ ಸ್ನೇಹದ ಬಳಿಕ ನಾವು ಮದುವೆ ಆಗಿದ್ದೇವೆ.

ನಮ್ಮ ನಡುವೆ ಯಾವುದೇ ರೀತಿಯ ಭಯ ಪರಸ್ಪರ ಇಲ್ಲವೇ ಇಲ್ಲ. ಕಮ್ಯೂನಿಕೇಷನ್ ಚೆನ್ನಾಗಿ ಇರಬೇಕು. ಅದು ಇದ್ದರೆ ಏನು ತೊಂದರೆ ಇಲ್ಲ. ನಮ್ಮ ನಡುವೆ ಕಮ್ಯೂನಿಕೇಷನ್ ಚೆನ್ನಾಗಿದೆ. ಹಾಗಾಗಿ ಭಯ ಏನೂ ಇಲ್ಲ.

ಸಂಚಿತ್‌ಗೆ ಭಯ ಇರ್ಬೇಕು

ಸಂಚಿತ್ ನಮ್ಮ ಮಗನೇ ಆಗಿದ್ದಾನೆ. ಈತನ ಬಗ್ಗೆ ನಂಬಿಕೆ ಇದೆ. ಹಾಗೆ ನಮ್ಮ ಬಗ್ಗೆ ಸಂಚಿತ್‌ಗೆ ಭಯ ಇರ್ಬೇಕು. ಅದು ಬಿಟ್ಟರೆ ನಮ್ಮ ನಡುವೆ ಆ ರೀತಿಯ ಭಯ ಏನೂ ಇಲ್ಲ ಅಂತಲೇ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.

Is Kichcha Sudeep afraid of his wife What does Priya Sudeep have to say

ನನಗೆ ಭಯ ಏನೂ ಇಲ್ಲ…

ಜಿಮ್ಮಿ ಚಿತ್ರ ಬದಲು ಮ್ಯಾಂಗೋ ಪಚ್ಚ ಯಾಕೆ ಬಂತು. ಈ ಒಂದು ಪ್ರಶ್ನೆ ಕೂಡ ಇಲ್ಲಿ ಬಂತು. ಇದಕ್ಕೂ ಪ್ರಿಯಾ ಸುದೀಪ್ ತುಂಬಾನೆ ಚೆನ್ನಾಗಿಯೇ ಉತ್ತರ ಕೊಟ್ಟಿದ್ದಾರೆ.

ಇದು ಒಳ್ಳೆ ಕಥೆಯ ಚಿತ್ರ

ಜಿಮ್ಮಿ ಚಿತ್ರದ ಟೀಸರ್ ಮಾತ್ರ ನಾವು ಶೂಟ್ ಮಾಡಿದ್ದೇವು. ಆ ಚಿತ್ರ ಇನ್ನು ಸ್ಕ್ರಿಪ್ಟ್ ಹಂತದಲ್ಲಿಯೇ ಇತ್ತು. ಆದರೆ, ಮ್ಯಾಂಗೋ ಪಚ್ಚ ಚಿತ್ರದ ಕತೆನೂ ಚೆನ್ನಾಗಿದೆ.

Is Kichcha Sudeep afraid of his wife What does Priya Sudeep have to say

ನಾವು ಸ್ನೇಹಿತರು
ಮೇ-5 ರಂದು ಚಿತ್ರ ರಿಲೀಸ್

ಮ್ಯಾಂಗೋ ಪಚ್ಚ ಮೇ-5 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಇದು ತೆರೆ ಕಾಣುತ್ತಿದೆ. ಸಂಚಿತ್ ಚಿತ್ರ ಜೀವನದಲ್ಲಿ ಇದು ಅಷ್ಟೆ ವಿಶೇಷ ಚಿತ್ರವೇ ಆಗಿದೆ.

ಈ ಚಿತ್ರದಲ್ಲಿ ಸುದೀಪ್ ಅವರಿಗೆ ವಿಶೇಷವಾದ ಸರ್ಪ್ರೈಸ್ ಕೂಡ ಇದೆ. ಚಿತ್ರದ ಪೋಸ್ಟರ್ ಅಲ್ಲಿ ಸಂಚಿತ್ ಸ್ಟೈಲ್ ಸುದೀಪ್ ಹೋಲುತ್ತವೆ. ಹುಚ್ಚ ಚಿತ್ರವನ್ನ ನೆನಪಿಸುತ್ತವೆ. ಇದನ್ನ ಬೇಕು ಅಂತಲೇ ಪ್ಲಾನ್ ಮಾಡಲಾಗಿದೆ. ಇದು ಪ್ರಿಯಾ ಸುದೀಪ್ ಅವರ ಐಡಿಯಾನೇ ಆಗಿದೆ.

ಬೆಳಗ್ಗೇನೆ ಚಿತ್ರ ನೋಡ್ತಾರೆ ಕಿಚ್ಚ

ಕಿಚ್ಚ ಸುದೀಪ್ ಬೆಳಗ್ಗೇನೆ ಮ್ಯಾಂಗೋ ಪಚ್ಚ ಚಿತ್ರ ನೋಡ್ತಿದ್ದಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ ಅಲ್ಲಿ ಬೆಳಗ್ಗೆ 8.15ಕ್ಕೇನೆ ಚಿತ್ರ ನೋಡೋಕೆ ಬರ್ತಿದ್ದಾರೆ.

ಇನ್ನುಳಿದಂತೆ ಮ್ಯಾಂಗೋ ಪಚ್ಚ ಚಿತ್ರಕ್ಕೆ ಫಸ್ಟ್ ಡೇ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ ನೋಡ್ಬೇಕು. ಈ ಚಿತ್ರಕ್ಕೆ ರಿವ್ಯೂ ಹೇಗೆಲ್ಲ ಬರ್ತದೆ ಅನ್ನುವ ಕುತೂಹಲವು ಈಗಲೇ ಮೂಡಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports