Darshan Case: ಮಾಫಿ ಸಾಕ್ಷಿ ಅರ್ಜಿಗೆ ಅಂಗೀಕಾರ, ಆದ್ರೆ ಪ್ರದೋಷ್​​ಗೆ ಕೋರ್ಟ್ ಹಾಕಿರೋ 3 ಕಂಡೀಷನ್ಸ್ ಇವು | Renukaswamy case darshan latest update 3 conditions | | ACTPnews

ಪ್ರದೋಷ್


Last Updated:

Darshan Case: ಪ್ರದೋಷ್ ಹೆಸರು ಚಾರ್ಜ್​ಶೀಟ್​ನಿಂದ ಆರೋಪಿ 14 ಎಂದು ಡಿಲೀಟ್ ಆಗಲಿದೆ. ಆದರೆ ಮಾಫಿ ಸಾಕ್ಷಿಯಾಗಿರೋ ಪ್ರದೋಷ್​​ಗೆ ಕೋರ್ಟ್ ಹಾಕಿರೋ ಕಂಡೀಷನ್ಸ್ ಏನು?

ಪ್ರದೋಷ್
ಪ್ರದೋಷ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿ ಪ್ರದೂಷ್ ಅಪ್ರೂವರ್ ಆಗಿದ್ದು, ಆ ಮೂಲಕ ಆರೋಪಿ ನಟ ದರ್ಶನ್ (Darshan) ಸೇರಿದಂತೆ ಇತರರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಕೊಲೆ ಆರೋಪಿ ನಟ ದರ್ಶನ್, ಪವಿತ್ರಾಗೌಡಗೆ ಬಿಗ್ ಶಾಕ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಳಾದ ನಟ ದರ್ಶನ್ ಹಾಗೂ ಇತರರಿಗೆ ಭಾರಿ ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು 14ನೇ ಆರೋಪಿ ಪ್ರದೂಷ್ ಸಲ್ಲಿಸಿದ ಅರ್ಜಿಯನ್ನ ಕೋರ್ಟ್ ಅಂಗೀಕರಿಸಿದೆ. ಈ ಮೂಲಕ ನಟ ದರ್ಶನ್ ಅಂಡ್ ಗ್ಯಾಂಗ್ ಬಿಗ್ ಶಾಕ್ ಎದುರಾಗಿದೆ.

ಪ್ರದೂಷ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿ ಜೈಲು ಸೇರಿದ್ದ. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು 59ನೇ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆರೋಪಿ ಪ್ರದೂಷ್ ಅರ್ಜಿ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಇಂದು ಪ್ರದೂಷ್ ಅರ್ಜಿಯನ್ನ ಅಂಗೀಕರಿಸಿದ 59ನೇ ಸೆಷನ್ಸ್ ಕೋರ್ಟ್ ಮಾಫಿ ಸಾಕ್ಷಿಯಾಗಿ ಸಾಕ್ಷ್ಯ ನುಡಿಯಲು ಸಮ್ಮತಿಸಿ ಆದೇಶಿಸಿದೆ.

ಪ್ರದೋಷ್​ಗೆ 3 ಕಂಡೀಷನ್ಸ್

ಇನ್ನೂ ಆರೋಪಿ ಪ್ರದೂಷ್ ಮಾಫಿ ಸಾಕ್ಷಿಯಾಗಿ ಸಾಕ್ಷ್ಯ ನುಡಿಯಲು ಕೋರ್ಟ್ ಮೂರು ಷರತ್ತುಗಳನ್ನ ವಿಧಿಸಿದೆ. ಆರೋಪಿ ಪ್ರದೂಷ್ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಬೇಕು. ಪ್ರಕರಣದ ವಿಚಾರಣೆ ಟ್ರಯಲ್ ಮುಗಿಯುವವರೆಗೂ ಆರೋಪಿ ನ್ಯಾಯಾಂಗ ಬಂಧನದಲ್ಲೆ ಇರಬೇಕು. ಒಂದು ವೇಳೆ ವಿಚಾರಣೆ ಸಮಯದಲ್ಲಿ ಸರಿಯಾದ, ಸಂಪೂರ್ಣ ಮಾಹಿತಿ ಹೇಳದಿದ್ದಲ್ಲಿ ಮತ್ತೆ ಆರೋಪಿ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಕೋರ್ಟ್ ಆದೇಶಿಸಿದೆ.

16 ಆರೋಪಿಗಳಿಗೆ ಸಂಕಷ್ಟ

ಇನ್ನೂ ಪ್ರದೂಷ್ ಮಾಫಿ ಸಾಕ್ಷಿ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದ್ದರಿಂದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಉಳಿದ 16 ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.

ಮುನಿರಾಜು, ಕ್ರೈಮ್ ಬ್ಯೂರೋ ನ್ಯೂಸ್ 18 ಬೆಂಗಳೂರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed