Darshan Case: ಇನ್ಮುಂದೆ ಪ್ರದೋಷ್ ಆರೋಪಿ 14 ಅಲ್ಲ, ಚಾರ್ಜ್​ಶೀಟ್​​ನಿಂದ ಹೆಸರು ಡಿಲೀಟ್ | Renukaswamy case pradosh is not more a14 in the case | | ACTPnews

ರೇಣುಕಾಸ್ವಾಮಿ -ಪ್ರದೋಷ್


Last Updated:

Darshan Case: ದರ್ಶನ್ ಪ್ರಕರಣದಲ್ಲಿ ಆರೋಪಿ 14 ಆಗಿದ್ದ ಪ್ರದೋಷ್ ಹೆಸರು ಚಾರ್ಜ್​ಶೀಟ್​ನಿಂದ ಡಿಲೀಟ್ ಆಗಲಿದೆ. ಪ್ರದೋಷ್ ಇನ್ನು ಮುಂದೆ ಮಾಫಿಸಾಕ್ಷಿ.

ರೇಣುಕಾಸ್ವಾಮಿ -ಪ್ರದೋಷ್
ರೇಣುಕಾಸ್ವಾಮಿ -ಪ್ರದೋಷ್

ಚಿತ್ರದುರ್ಗ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ಮುಂದೆ ಆರೋಪಿ 14 ಆಗಿದ್ದ ಪ್ರದೋಷ್ (Pradosh) ಪ್ರಾಸಿಕ್ಯೂಷನ್ ವಿಟ್ನೆಸ್ ಸಾಕ್ಷಿಯಾಗಲಿದ್ದಾನೆ. ಚಾರ್ಜ್ ಶೀಟ್ ನಲ್ಲಿ ಆರೋಪಿ ಸ್ಥಾನದಿಂದ ಪ್ರದೂಷ್ ಹೆಸರು ತೆಗೆಯಲು ಸೂಚನೆ ನೀಡಲಾಗಿದೆ.

ಎ14 ಆರೋಪಿ ಎಂಬುದನ್ನು ಡಿಲಿಟ್ ಮಾಡಲು ಕೋರ್ಟ್ ಸೂಚನೆ ನೀಡಿದ್ದು, ಇನ್ಮುಂದೆ ಪ್ರದೋಷ್ ಪ್ರಕರಣದ ಸಾಕ್ಷಿಯಾಗಲಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್​​ನನ್ನು ಮಾಫಿ ಸಾಕ್ಷಿಯನ್ನಾಗಿ ಪ್ರದೂಷ್ ಪರಿಗಣಿಸಿದ ಹಿನ್ನಲೆ ಆರೋಪಿ ಎಂದಿರುವ ಹೆಸರು ಡಿಲೀಟ್ ಮಾಡಲು ಪ್ರದೋಷ್ ಲಾಯರ್ ಮನವಿ ಮಾಡಿದ್ದರು.

ಚಾರ್ಜ್ ಶೀಟ್ ನಲ್ಲಿ ಆರೋಪಿ 14 ಪ್ರದೂಷ್ ಎಂದಿರುವ ಹೆಸರು ಡಿಲೀಟ್ ಆಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸಂಖ್ಯೆ 14 ಆಗಿರುವ ಪ್ರದೋಷ್ ಎಸ್. ರಾವ್ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರ ಈಗಾಗಲೇ ನ್ಯಾಯಾಲಯದ ಹಂತ ತಲುಪಿದೆ. ಸೆಷನ್ಸ್ ಕೋರ್ಟ್ ಪ್ರದೋಷ್ ನ ಮಾಫಿ ಅರ್ಜಿಯನ್ನು ಅಂಗೀಕರಿಸಿ ಅಭಿಯೋಜನೆಯ ಸಾಕ್ಷಿಯಾಗಿ ಪರಿಗಣಿಸಿದೆ. ಇದೀಗ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿಯಾಗಿರುವುದು ಪ್ರಕರಣದ ಪ್ರಮುಖ ಬೆಳವಣಿಗೆಯಾಗಿದೆ.

ಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ

ಪ್ರದೋಷ್ ನ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 23ರಂದು ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಕಾನೂನುಬಾಹಿರತೆ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: Darshan Case: ಪವಿತ್ರಾ ಗೌಡಗೆ ಬಿಗ್​ ಡೇ, ರೇಣುಕಾಸ್ವಾಮಿ ಕೇಸ್​​ನ A1 ಆರೋಪಿಗೆ ಸಿಗುತ್ತಾ ಜಾಮೀನು?

ಇದೀಗ ಸೆಪ್ಟೆಂಬರ್ 28ರಂದು ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ ಎಂಬ ಬೆಳವಣಿಗೆ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ಪ್ರದೋಷ್ ನ್ಯಾಯಾಲಯದ ಮುಂದೆ ಯಾವ ರೀತಿಯ ಹೇಳಿಕೆ ನೀಡುತ್ತಾರೆ, ಅದನ್ನು ವಿಚಾರಣೆಯಲ್ಲಿ ಹೇಗೆ ಪರಿಗಣಿಸಲಾಗುತ್ತದೆ ಮತ್ತು ನಂತರ ದರ್ಶನ್ ಪರ ವಕೀಲರು ಯಾವ ರೀತಿಯ ಪ್ರತಿಪ್ರಶ್ನೆ ನಡೆಸುತ್ತಾರೆ ಎಂಬುದು ಮುಂದಿನ ಹಂತದಲ್ಲಿ ತಿಳಿಯಬೇಕಿದೆ.

ಮುನಿರಾಜು. ಕೆಜಿ. ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports