Last Updated:
ಬಿಗ್ ಬಾಸ್ ವಾರಾಂತ್ಯದಲ್ಲಿ ಡಬಲ ಧಮಾಕಾ ಇದೆ. ಅದೇನು ಅನ್ನೋ ಕುತೂಹಲವು ಇದೆ. ಕಿಚ್ಚನ ಸಂಚಿಕೆಗಳು ಮೂರು ಗಂಟೆಗಳ ಇರುತ್ತದೆ ಅನ್ನುವ ನ್ಯೂಸ್ ಕೂಡ ಇದೆ.ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಮನೆಯಿಂದ ಅಚ್ಚರಿಯ ರೀತಿಯಲ್ಲಿ ತಾಂಡವ್ ರಾಮ್ (Thandav Ram) ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಈ ಒಂದು ಎಮರ್ಜೆನ್ಸಿ ಎಕ್ಸಿಟ್ ಅಲ್ಲಿ ಇನ್ನೂ ಒಬ್ಬರು ಹೋಗ್ತಾರೆ ಅನ್ನೋದು ಇದೆ. ಅದು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ವಾರದ ಕತೆ ಕಿಚ್ಚನ (Kichcha) ಜೊತೆಯಲ್ಲಿ ಡಬಲ್ ಧಮಾಕಾ (Double Dhamaka) ಇದೆ. ಈ ವಾರ ಮೂರು ಮೂರು ಗಂಟೆ ಸಂಚಿಕೆಗಳು ಇರುತ್ತವೆ. ಇದನ್ನು ಕಲರ್ಸ್ ಕನ್ನಡ ಪ್ರೋಮೋದಲ್ಲಿ ರಿವೀಲ್ ಮಾಡಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮೂರು ಮೂರು ಗಂಟೆಗಳ ಕಿಚ್ಚನ ಸಂಚಿಕೆಗಳು
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಮೊದಲ ದಿನ ಶನಿವಾರ ಕಿಚ್ಚನ ಪಂಚಾಯ್ತಿ ಇರುತ್ತದೆ. ಈ ಪಂಚಾಯ್ತಿಯಲ್ಲಿ ಯಾರಿಗೆ ಕಿಚ್ಚನ ಚಪ್ಪಾಳೆ ಬೀಳುತ್ತೆ ಅನ್ನುವ ಕುತೂಹಲವೂ ಇದೆ. ಮತ್ಯಾರಿಗೆ ಕ್ಲಾಸ್ ಅನ್ನುವ ಕ್ವಶ್ಚನ್ ಕೂಡ ಇದೆ.
ಭಾನುವಾರ ಮನಂಜನೆ ಇರುತ್ತದೆ. ಕಿಚ್ಚ ಸುದೀಪ್ ಎಲ್ಲರನ್ನು ನಗಿಸುತ್ತಾರೆ. ತಾವು ನಕ್ಕು ನಲಿಯುತ್ತಾರೆ. ಇದರ ನಡುವೆ ಈ ವಾರ ಡಬಲ್ ಧಮಾಕಾ ಅಂತಲೇ ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ಹೇಳಿದೆ. ಅದೇನು ಅನ್ನುವ ಕುತೂಹಲ ಇದೆ.
ಈಗಾಗಲೇ ಮನೆಯಿಂದ ತಾಂಡವರ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಆದರೆ, ಮತ್ತೊಬ್ಬರು ಮನೆಗೆ ಹೋಗ್ತಾರೆ ಅನ್ನೋದು ಇದೆ. ಅದು ಯಾರು ಅನ್ನುವ ಪ್ರಶ್ನೆ ಕೂಡ ಇದೆ.
ದೊಡ್ಮನೆಗೆ ಮೊದಲ ದಿನ ಬರೋಬ್ಬರಿ 16 ಜನ ಹೋಗಿದ್ದರು. ಆದರೆ, ಇದರಲ್ಲಿ ಮೊದಲು ಪ್ರಥಮಾ ಪ್ರಸಾದ್ ಎಲಿಮಿನೇಟ್ ಆದರು. ಇವರಾದ್ಮೇಲೆ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಹೊರ ಬಂದರು. ಅನಾರೋಗ್ಯದ ಕಾರಣ ಇವರು ಆಟವನ್ನ ಅರ್ಧಕ್ಕೆ ಬಿಟ್ಟು ಬಂದರು.
ಈ ವಾರ ಬಿಗ್ ಬಾಸ್ ಡಬಲ್ ಧಮಾಕಾ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಇದೀಗ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಇದರೊಟ್ಟಿಗೆ ಮತ್ತೊಬ್ಬರು ಯಾರು ಅನ್ನುವ ಕುತೂಹಲವು ಹೆಚ್ಚಾಗಿದೆ.
ದೊಡ್ಮನೆಯಿಂದ ಸದ್ಯ ಮೂರು ಜನ ಹೊರಗೆ ಬಂದಿದ್ದಾರೆ. ಆದರೆ, ವೈಲ್ಡ್ ಕಾರ್ಡ್ ಎಂಟ್ರಿನೂ ಇದ್ದೇ ಇರುತ್ತದೆ. ಈ ಸಲ ಕಿಶನ್ ಬೆಳಗಲಿ ಹೋಗ್ತಾರೆ ಅನ್ನುವ ಸುದ್ದಿ ಇದೆ.
ಈ ಹಿಂದೆ ಕಿಶ್ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದರು. ಸೀಸನ್-7 ರಲ್ಲಿಯೇ ಕಿಶನ್ ಎಂಟ್ರಿ ಆಗಿದ್ದರು. ಈಗ ಮತ್ತೊಮ್ಮೆ ದೊಡ್ಮನೆಗೆ ಹೋಗ್ತಾರೆ ಅನ್ನುವ ನ್ಯೂಸ್ ಇದೆ.
ಈ ಸಲದ ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲಿ ಒಬ್ಬರೇ ಹೋಗೋದಾ? ಇಬ್ಬರು ಹೋಗ್ತಾರೆ ಅನ್ನುವ ಪ್ರಶ್ನೆನೂ ಇದೆ. ಆದರೆ, ಸದ್ಯ ಕಿಶನ್ ಹೆಸರು ಕೇಳಿ ಬರ್ತಿದೆ. ಮತ್ತೊಬ್ಬರು ಯಾರು ಹೋಗ್ತಾರೆ ಅನ್ನುವ ಪ್ರಶ್ನೆ ಕೂಡ ಇದೆ ಅಂತ ಹೇಳಬಹುದು.














