Last Updated:
Rajnath Singh: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭದ್ರತಾ ವ್ಯವಸ್ಥೆ ಬಗ್ಗೆ ಹೇಳಿದ್ದೇನು? ಭವಿಷ್ಯದ ರಾಷ್ಟ್ರೀಯ ಭದ್ರತೆ ಬಗ್ಗೆ ಏನಂದ್ರು?
ಐತಿಹಾಸಿಕ ರಕ್ಷಣಾ ನೀತಿಗಾಗಿ ಮಾಡಬೇಕಾಗಿರುವ ರಚನಾತ್ಮಕ ಕೆಲಸಕ್ಕೆ ರಾಜತಾಂತ್ರಿಕತೆಯೊಂದಿಗೆ (Diplomacy) ಶಸ್ತ್ರ ಸನ್ನದ್ಧತೆ ಮಾಡುವುದು ತುಂಬಾನೆ ಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಹೇಳಿದ್ದಾರೆ. ಗುರುವಾರ DEFCON 2026ನಲ್ಲಿ ಮಾತನಾಡಿದ ಅವರು ರಕ್ಷಣಾ ರಾಜತಾಂತ್ರಿಕತೆಯನ್ನು ವಿಸ್ತರಿಸುವ ಬಗ್ಗೆ ಮಾತನಾಡಿ ನಾವು ನಮ್ಮ ರೀತಿಗಳನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.
ನಮಗೆ ಯಾವಾಗಲೂ ಇರೋ ಒಂದು ಸಮಸ್ಯೆ ಏನೆಂದರೆ ನಾವು ತುಂಬಾ ಸಮಸ್ಯೆಗಳಿಗೆ ಗಮನ ಕೊಡುತ್ತೇವೆ. ನಾವು ನಮ್ಮನ್ನು ಬಲಿಷ್ಠಗೊಳಿಸಬೇಕೆಂದರೆ ನಾವು ಎಲ್ಲಾ ವಿಚಾರಗಳನ್ನು ಮತ್ತೊಮ್ಮೆ ನೋಡಬೇಕು ಎಂದರು.
ರಾಷ್ಟ್ರೀಯ ಭದ್ರತೆ ಬಗ್ಗೆ ಮಾತನಾಡಿದ ಅವರು, ಭಾರತ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ, ಮೊದಲು ಅದು ನಮ್ಮ ದೇಶಕ್ಕಿರುವ ಭದ್ರತಾ ಸವಾಲುಗಳು ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಜನರು ಈಗ ದೇಶದ ಭದ್ರತಾ ಸಲಕರಣೆಗಳು ಬಗ್ಗೆ, ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ರಕ್ಷಣಾ ವ್ಯವಸ್ಥೆ ಹಾಗೂ ಭದ್ರತೆ ಈಗ ಮಾಧ್ಯಮದಲ್ಲಿ ಮುಖ್ಯವಾಹಿನಿಯ ವಿಷಯವಾಗಿ ಬದಲಾಗಿದೆ ಎಂದರು. ದೇಶದ ರಕ್ಷಣೆಗೆ ಹಾನಿಯಾಗುವಂತೆ ವರ್ತಿಸುವವರು ಭದ್ರತಾ ವ್ಯವಸ್ಥೆಯನ್ನು ಗುರಿಯಾಗಿಸುವುದಲ್ಲದೆ ಮುಂಬರುವ ಸಮಸ್ಯೆಗಳಿಗೆ ನಾವು ಸಿದ್ಧರಾಗಬೇಕಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಯ ವ್ಯಾಕ್ತಿ ದೊಡ್ಡದಾಗಿದೆ. ಹಾಗಾಗಿ ನಾವು ರಕ್ಷಣಾ ವ್ಯವಸ್ಥೆಯನ್ನು ಒಂದೊಂದಾಗಿ ನೋಡುವ ಬದಲು ಒಟ್ಟಾಗಿ ನೋಡುವ ಅಗತ್ಯವಿದೆ ಎಂದರು.
ಭಾರತಕ್ಕೆ ಎಂದೂ ಬುದ್ಧಿವಂತಿಕೆ ಕೊರತೆಯಾಗಿಲ್ಲ ಎಂದ ಅವರು ಭವಿಷ್ಯದ ರಕ್ಷಣಾ ಸವಾಲುಗಳಿಗೆ ಸಿದ್ಧರಾಗಿರಬೇಕಾದ ಮಹತ್ವವನ್ನು ಹೇಳಿದರು. ನಾವು ಭವಿಷ್ಯದ ರಕ್ಷಣಾ ಸವಾಲುಗಳಿಗೆ ರೆಡಿಯಾಗಬೇಕಾಗಿದೆ ಎಂದಿದ್ದಾರೆ.
ಆಧುನಿಕ ಯುದ್ಧ ಎನ್ನುವುದು ಭೂಮಿ, ಆಕಾಶ, ಸಮುದ್ರಕ್ಕೆ ಸೀಮಿತವಾಗಿಲ್ಲ. ಇದು ಸೈಬರ್, ಬಾಹ್ಯಾಕಾಶಕ್ಕೂ ವಿಸ್ತರಿಸಿದೆ ಎಂದಿದ್ದಾರೆ. ಯುದ್ಧದ ಈ ಬದಲಾಗುತ್ತಿರುವ ಸ್ವರೂಪದಿಂದಾಗಿ ತಾಂತ್ರಿಕತೆ ಹಾಗೂ ಅಭಿವೃದ್ಧಿ ಮೇಲೆ ಗಮನಹರಿಸುವುದು ಅಗತ್ಯ ಎಂದು ಅವರು ಹೇಳಿದರು. ನಾವು ಈಗ ಮನುಷ್ಯ ಅಗತ್ಯವಿಲ್ಲದ ದೇಶೀಯ ಏರಿಯಲ್ ವೆಹಿಕಲ್ಸ್ಗಳಾದ ರುಸ್ತುಂ, ಘಟಕ್, ನಾಗಾಸ್ತ್ರ ಅಭಿವೃದ್ಧಿಪಡಿಸಿದ್ದೇವೆ ಎಂದರು.














