Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್‌ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ.

News18
News18

ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ರೈತರ ಸಾಲ ಮನ್ನಾಗೆ (Farmer Loan Waiver) ಅನುಮೋದನೆ ನೀಡಿದೆ.

ಹೌದು.. ಮಹಾರಾಷ್ಟ್ರ ರಾಜ್ಯದ ರೈತರಿಗೆ ಇಂದಿನ ಸಚಿವ ಸಂಪುಟ ಸಭೆಯಿಂದ ಐತಿಹಾಸಿಕ ಮತ್ತು ಬಹಳ ಮಹತ್ವದ ಸುದ್ದಿ ಹೊರಬಿದ್ದಿದೆ. ಬಜೆಟ್‌ನಲ್ಲಿ ಘೋಷಿಸಲಾದ ಸಾಲ ಮನ್ನಾ ಭರವಸೆ ಇಂದು ಈಡೇರಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯದಲ್ಲಿ ರೈತ ಸಾಲ ಮನ್ನಾ ಪ್ರಸ್ತಾವನೆಯನ್ನು ಅಂತಿಮವಾಗಿ ಅನುಮೋದಿಸಲಾಗಿದೆ.

36,585 ಕೋಟಿ ರೂಪಾಯಿಗಳ ಐತಿಹಾಸಿಕ ನಿರ್ಧಾರ

ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. ಸರ್ಕಾರದ ಈ ಒಂದೇ ನಿರ್ಧಾರದಿಂದ, ಮಹಾರಾಷ್ಟ್ರದ 56 ಲಕ್ಷ ರೈತ ಕುಟುಂಬಗಳು ಸಾಲದ ಹೊರೆಯಿಂದ ಭಾರಿ ಪರಿಹಾರ ಪಡೆಯಲಿವೆ.

ಅನುಮೋದನೆ ಸಿಕ್ಕಿತು, ಆದರೆ ಏಕೆ ಘೋಷಣೆ ಮಾಡಿಲ್ಲ?

ಸಚಿವ ಸಂಪುಟದಿಂದ ಅನುಮೋದನೆ ಪಡೆದಿದ್ದರೂ, ಮುಖ್ಯಮಂತ್ರಿಗಳು ಇಂದು ಸಾರ್ವಜನಿಕ ಘೋಷಣೆ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ವಿಧಾನ ಪರಿಷತ್ತಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರ ಈ ಘೋಷಣೆ ಮಾಡಲಿಲ್ಲ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮಾದರಿ ನೀತಿ ಸಂಹಿತೆಯ ಸಮಯದಲ್ಲಿ ಸರ್ಕಾರವು ಇಷ್ಟು ದೊಡ್ಡ ಪ್ಯಾಕೇಜ್ ಅನ್ನು ನೇರವಾಗಿ ಘೋಷಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸರ್ಕಾರವು ಎಲ್ಲಾ ಆಡಳಿತಾತ್ಮಕ ಅನುಮೋದನೆಗಳನ್ನು ಪೂರ್ಣಗೊಳಿಸಿದೆ ಎಂದು ವರದಿಯಾಗಿದೆ.

ರೈತರ ಸಾಲವನ್ನು ತಕ್ಷಣ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳ ಒತ್ತಾಯ

ರೈತ ಸಂಘಟನೆಗಳು ರೈತ ಸಾಲ ಮನ್ನಾವನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿವೆ. ಸರ್ಕಾರ ಚುನಾವಣಾ ಆಯೋಗಕ್ಕೆ ನೀಡಿರುವ ಕಾರಣ ಸಂಪೂರ್ಣವಾಗಿ ಸುಳ್ಳು. ಸಾಲ ಮನ್ನಾ ಯೋಜನೆಯು ವಿಧಾನ ಪರಿಷತ್ ಚುನಾವಣೆಯ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಏಕೆಂದರೆ ಅವರು ಸಾಲ ಮನ್ನಾ ಫಲಾನುಭವಿಗಳಲ್ಲ ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ನಾಯಕ ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.

ಸಾಲ ಮನ್ನಾ ಘೋಷಣೆಯನ್ನು ಈಗಾಗಲೇ ಮಾಡಲಾಗಿದೆ, ಆದ್ದರಿಂದ ವಿಧಾನ ಪರಿಷತ್ ಚುನಾವಣೆಗೂ ಸಾಲ ಮನ್ನಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಖಿಲ ಭಾರತೀಯ ಕಿಸಾನ್ ಸಭಾ ನಾಯಕ ಡಾ. ಅಜಿತ್ ನವಲೆ ಹೇಳಿದರು. ಸಾಲ ಮನ್ನಾ ಯೋಜನೆಯ ಮಾನದಂಡಗಳು ಮತ್ತು ಷರತ್ತುಗಳ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕು ಮತ್ತು ರೈತರ ಹಿತದೃಷ್ಟಿಯಿಂದ ನಿರ್ಧಾರವನ್ನು ಜಾರಿಗೆ ತರಬೇಕು ಎಂದು ಡಾ. ಅಜಿತ್ ನವಲೆ ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed