Prema: ಸಿಎಂ ಮನೆಗೆ ಬಂದ ನಟಿ ಪ್ರೇಮಾಗೆ ನೋ ಎಂಟ್ರಿ! ಗೇಟ್‌ನಲ್ಲೇ ತಡೆದಿದ್ದೇಕೆ ಸೆಕ್ಯೂರಿಟಿ? | | ACTPnews

ನಟಿ ಪ್ರೇಮ


Last Updated:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ.

ನಟಿ ಪ್ರೇಮ
ನಟಿ ಪ್ರೇಮ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ ಒಳಪ್ರವೇಶಕ್ಕೆ ಅವಕಾಶ ನೀಡದ ವಿಡಿಯೋ ವೈರಲ್ ಇದೀಗ ವೈರಲ್ ಆಗಿದೆ.

ಹೌದು ಇಂದು ನಟಿ ಪ್ರೇಮಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ನಟಿ ಪ್ರೇಮಾ ಅವರನ್ನು ಮನೆ ಒಳಗೆ ಬರಲು ಬಿಡದೆ, ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕಾದರೆ ‘ಕೃಷ್ಣಾ’ ಕಚೇರಿಗೆ ಆಗಮಿಸುವಂತೆ ನಟಿ ಪ್ರೇಮಾ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಘಟನೆಯ ಕುರಿತು ನಟಿ ಪ್ರೇಮಾ ಯಾವುದೇ ಹೇಳಿಕೆ ನೀಡಿಲ್ಲ. ಜೊತೆಗೆ ಪ್ರೇಮಾ ಅವರು ಯಾವ ಉದ್ದೇಶಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಂದಿದ್ದರು ಎಂಬುದೂ ಸ್ಪಷ್ಟವಾಗಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports