Bengaluru South: ಬಿಡದಿಯಲ್ಲಿ ಸರ್ವೇ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್; ಮಂಡಲಹಳ್ಳಿಯ 20ಕ್ಕೂ ಹೆಚ್ಚು ರೈತರ ಮೇಲೆ FIR | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Bengaluru South: ಬಿಡದಿಯಲ್ಲಿ ಸರ್ವೇ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್; ಮಂಡಲಹಳ್ಳಿಯ 20ಕ್ಕೂ ಹೆಚ್ಚು ರೈತರ ಮೇಲೆ FIR | ಬೆಂಗಳೂರು ನಗರ ನ್ಯೂಸ್ (Bengaluru Urban News)


ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿದ್ದು, ಕಾರು ಚಾಲಕ‌ ಮೊಹಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಠಾಣೆಯ ಇನ್​ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎರಡು ಎಫ್​ಐಆರ್ಗಳು ದಾಖಲಾಗಿದೆ. ಕಾರು ಚಾಲಕ ನೀಡಿದ ದೂರಿನ ಮೇರೆಗೆ ರೈತರಾದ ಪ್ರಕಾಶ್, ನಾಗರಾಜ್, ಕೃಷ್ಣ, ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. BNS 189(2), 126(2), 352, 351(2), 109(1), 115(2), 118(1), 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಇನ್ಸ್ ಪೆಕ್ಟರ್ ಮುರುಳಿ ನೀಡಿದ ದೂರಿನ ಅನ್ವಯ ಪ್ರಕರಣ, ಅಪರಿಚಿತ ರೈತರ ವಿರುದ್ಧ BNS 189(2), 126(2), 352, 351(2), 109(1), 115(2), 118(1) 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿದೆ.

ಬೈರಮಂಗಲ ಸರ್ಕಲ್​ ಬಳಿ ರೈತರ ಪ್ರತಿಭಟನೆ

ಇತ್ತ ಟೌನ್​ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಸರ್ಕಲ್​ನಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. JMC ಸರ್ವೇ ವಿರೋಧಿಸಿ ಪ್ರತಿಭಟನೆ ಮಾಡಲಾಗ್ತಿದೆ. ಟೌನ್ ಶಿಪ್ ಸಂಬಂಧ ಅವ್ರವ್ರೇ ನಿರ್ಧಾರ ಮಾಡ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದು ಕಡೆ ಟೌನ್​​​ಶಿಪ್​ಗೆ ಬೆಂಬಲ ವ್ಯಕ್ತಪಡಿಸಿ ರೈತರು ಸಭೆ ಮಾಡಿದ್ದಾರೆ. ಅಲ್ಲದೇ ಬೈರಮಂಗಲ ಸರ್ಕಲ್​ ಬಳಿಯೇ ರೈತರು ಪ್ರೊಟೆಸ್ಟ್​ ಮಾಡಿದ್ದಾರೆ.

ಶಾಸಕರು, ಜಿಲ್ಲಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ!

ಟೌನ್​ಶಿಪ್ ವಿರೋಧಿಸಿ ಬೈರಮಂಗಲ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತಿರುವ ರೈತರು ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟುಕೊಡಲ್ಲ. ಸರ್ವೆ ಮಾಡೋದಕ್ಕೆ ನಾವು ಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಶಾಸಕ ಮಾಗಡಿ ಬಾಲಕೃಷ್ಣ ಹಾಗೂ ಜಿಲ್ಲಾಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಅಷ್ಟೆಲ್ಲಾ ಆದರೂ ಶಾಸಕರು, ಜಿಲ್ಲಾಧಿಕಾರಿಗಳು ಬಂದಿಲ್ಲ. ಕೆಲ ಗ್ರಾಮಗಳಿಗೆ ಮಾತ್ರ ನೊಟೀಸ್ ನೀಡಿ ಸರ್ವೆ ಮಾಡ್ತಿದ್ದಾರೆ. ಮೊದಲ ಹಂತ ಅಂತಾ ರೈತರ ತಾಳ್ಮೆ ಚೆಕ್ ಮಾಡ್ತಿದ್ದಾರೆ. ಬೇಕಾದರೆ ನಮ್ಮ ಪ್ರಾಣ ಬಿಡುತ್ತೇವೆ. ಆದರೆ ಜಮೀನು ಮಾತ್ರ ಬಿಡೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಎಂಸಿ ಸರ್ವೇ ತಾತ್ಕಾಲಿಕ ಬ್ರೇಕ್?

ಇಂದು ಸರ್ವೆಯನ್ನು ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಮುಂದುವರಿಸುತ್ತಾರೆ ಎನ್ನಲಾಗಿತ್ತು. ಆದರೆ ಟೌನ್ ಶಿಪ್ ವಿರೋಧಿಸಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಜೆಎಂಸಿ ಸರ್ವೇ ತಾತ್ಕಾಲಿಕ ಸ್ಥಗಿತ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರೈತರ ಜೊತೆ ಮಾತುಕತೆ ನಡೆಸಿ, ಭೂ ಸ್ವಾಧೀನದ ಸರ್ವೇ ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬಿವೈವಿ ಆಕ್ರೋಶ

ಬಿಡದಿ ಟೌನ್ ಶಿಪ್​ ವಿರೋಧಿಸಿದ ರೈತರ ಮೇಲೆ ಕೇಸ್​​ ದಾಖಲಿಸಿರೋದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿ, ರೈತರ ಮೇಲೆ ಕೇಸ್ ದಾಖಲಿಸಿ, ಬೆದರಿಸಿ, ಹೆದರಿಸಿ, ಬೀದಿಗೆ ತಂದು ಜಮೀನು ಕಸಿದುಕೊಳ್ಳುವ ಭ್ರಮೆಯಲ್ಲಿ ಸಿಎಂ ಇದ್ದಾರೆ. ಇದು ಅಸಾಧ್ಯ, ಸಿಎಂ ತಮ್ಮ ಈ ಭ್ರಮೆಯಿಂದ ಹೊರಗಡೆ ಬರಬೇಕು. ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಅವರು, ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಗುಂಡಾಗಿರಿ ಮಾಡಿ ಟೌನ್ ಶಿಪ್ ಮಾಡ್ತಿನಿ ಅಂದರೆ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. (ವರದಿ: ಎಟಿ ವೆಂಕಟೇಶ್ ಪ್ರಭು, ನ್ಯೂಸ್18 ಕನ್ನಡ, ಬೆಂಗಳೂರು ದಕ್ಷಿಣ)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports