ಹೊಸಬರನ್ನ ನಾನು ನಂಬುತ್ತೇನೆ
ಶ್ರೀಮುರಳಿ ಅವರ ಈ ಚಿತ್ರದ ಟೀಸರ್ ಸಖತ್ ಆಗಿಯೇ ಇದೆ. ಆ್ಯಕ್ಷನ್ ಪ್ಯಾಕ್ ಸಿನಿಮಾನೇ ಇದಾಗಿದೆ. ಈ ಸಿನಿಮಾದಲ್ಲಿ ಹೊಸ ರೀತಿಯ ವಿಷಯಗಳೇ ಇವೆ. ಕತೆಯ ವಿಚಾರದಲ್ಲೂ ಶ್ರೀಮುರಳಿ ಇನ್ವಾಲ್ವ್ ಆಗಿದ್ದಾರೆ.
ಪರಾಕ್ ಚಿತ್ರದ ಕತೆಯ ಮೇಲೆ ಸಾಕಷ್ಟು ವರ್ಕ್ ಆಗಿದೆ. ಚರ್ಚೆಗಳೂ ಸಿಕ್ಕಾಪಟ್ಟೇನೆ ಆಗಿವೆ. ಡೈರೆಕ್ಟರ್ ಹಾಲೇಶ್ ಕೋಗುಂಡಿ ಅವರ ಜೊತೆಗೆ ಶ್ರೀಮುರಳಿ ಸಾಕಷ್ಟು ಡಿಸ್ಕಷನ್ ಮಾಡಿದ್ದಾರೆ.
ಎಲ್ಲವೂ ಓಕೆ ಆದ್ಮೇಲೇನೆ ಪರಾಕ್ ಚಿತ್ರದ ಟೀಸರ್ ಶೂಟಿಂಗ್ ಆಗಿದೆ. ಈ ಒಂದು ಟೀಸರ್ ಹೊರಗೆ ತರೋಕೇನೆ ಮೂರುವರೆ ವರ್ಷ ಆಗಿದೆ. ಆದರೆ, ಇನ್ಮುಂದೆ ತಡ ಆಗೋದಿಲ್ಲ. ಸದ್ಯಕ್ಕೆ ಈ ಟೀಸರ್ ಮಾಡಿದ್ದೇವೆ.
ಪರಾಕ್ ಚಿತ್ರದ ಟೀಸರ್ ಮಾಡಿದ್ದೇವೆ. ಆದಷ್ಟು ಬೇಗ ಈ ಸಿನಿಮಾದ ಶೂಟಿಂಗ್ ಶುರು ಮಾಡ್ತೀವಿ. ಇಷ್ಟು ಬಿಟ್ಟರೆ, ಈ ಚಿತ್ರದ ಬಗ್ಗೆ ಸದ್ಯ ಇಷ್ಟೆ ಹೇಳೋಕೆ ಆಗೋದು. ಸಿನಿಮಾ ಮುಗಿಸಿಕೊಂಡು ನಿಮ್ಮ ಮುಂದೆ ಬರ್ತೀವಿ.
ಈ ಚಿತ್ರವನ್ನ ನಾವು ಕನ್ನಡದಲ್ಲಿಯೇ ಮಾಡುತ್ತೇವೆ. ಪರ ಭಾಷೆಯವರನ್ನ ಗಮನದಲ್ಲಿ ಇಟ್ಟುಕೊಂಡು ಈ ಚಿತ್ರವೇನೂ ಮಾಡ್ತಾ ಇಲ್ಲ. ಮೊದಲು ಕನ್ನಡಕ್ಕೇನೆ ಮಹತ್ವ ಕೊಡ್ತೀವಿ ಅಂತಲೂ ಶ್ರೀಮುರಳಿ ಹೇಳಿಕೊಂಡಿದ್ದಾರೆ.
ಪರಾಕ್ ಅನ್ನುವ ಪದ ಸಂಸ್ಕೃತದಿಂದಲೇ ಬಂದಿದೆ. ಪರಾಕ್ ಅಂದರೆ ರಾಜಮಹಾರಾಜರಿಗೆ ಹೇಳ್ತಿದ್ದ ಅದೇ ಪರಾಕ್ ಅನ್ನ ಇಲ್ಲಿ ಇಟ್ಟಿದ್ದೇವೆ.
ಇದರ ಹೊರತಾಗಿ ಈ ಪದಕ್ಕೆ ಬೇರೆ ಬೇರೆ ಅರ್ಥವು ಇದೆ. ನಾವು ಇಲ್ಲಿ ಪರಾಕ್ ಅಂತ ಇಟ್ಟಿರೋದು ಸ್ವಾಗತ ಅನ್ನುವ ಅರ್ಥದಲ್ಲಿಯೇ ಅಂತಲೇ ಶ್ರೀಮುರಳಿ ಹೇಳಿಕೊಂಡಿದ್ದಾರೆ.
ಹಾಲೇಶ್ ಕೋಗುಂಡಿ ಡೈರೆಕ್ಷನ್
ಈ ಚಿತ್ರದಲ್ಲಿ ಹೊಸಬರೇ ಇದ್ದಾರೆ. ಇವರನ್ನ ನಾನು ನಂಬುತ್ತೇನೆ. ಹೊಸ ರೀತಿ ಯೋಚನೆ ಮಾಡೋರನ್ನ ಗೌರವಿಸುತ್ತೇನೆ. ಅವರ ಜೊತೆಗೆ ಕೆಲಸ ಮಾಡೋಕೆ ಇಷ್ಟಪಡುತ್ತೇನೆ.
ಹಾಗೆ ಬರುವ ಹೊಸಬರಲ್ಲಿ ನಾನು ಒಂದಷ್ಟು ಪ್ರಶ್ನೆಗಳನ್ನ ಕೇಳುತ್ತೇನೆ. ಆ ಪ್ರಶ್ನೆಗಳಿಗೆ ಕರೆಕ್ಟ್ ಆಗಿ ಉತ್ತರ ಸಿಗದೇ ಇದ್ದರೆ ಆಯಿತು. ನಾನು ಆ ರೀತಿಯ ಚಿತ್ರಗಳನ್ನ ಮಾಡೋದೇ ಇಲ್ಲ ಅಂತಲೂ ಹೇಳಿಕೊಂಡಿದ್ದಾರೆ.
ಪರಾಕ್ ಚಿತ್ರವನ್ನ ಹಾಲೇಶ್ ಕೋಗುಂಡಿ ಡೈರೆಕ್ಷನ್ ಮಾಡಿದ್ದಾರೆ. ಇವರ ಆಲೋಚನೆಯನ್ನ ಮೆಚ್ಚಿಕೊಂಡೆ ಶ್ರೀಮುರಳಿ ಈ ಚಿತ್ರ ಮಾಡಿದ್ದಾರೆ.
ಈ ಸಿನಿಮಾದ ನಾಯಕ ಆ ರೀತಿ ಯಾಕೆ ಮಲಗಿಕೊಂಡಿದ್ದಾನೆ. ಫೈಟ್ ಮಾಡಿದ್ಮೇಲೆ ಮತ್ತೆ ಯಾಕೆ ಹಾಗೆ ಫ್ಯಾನ್ ಕೆಳಗೆ ಹೋಗಿ ಮಲಗಿಕೊಂಡಿದ್ದಾನೆ. ಆ ಟೇಪ್ ರೆಕಾರ್ಡ್‌ರ್ ಯಾಕೆ ಅಲ್ಲಿದೆ. ಈ ಎಲ್ಲ ಪ್ರಶ್ನೆಗಳು ಇವೆ.
ಆದರೆ, ಅದಕ್ಕೆ ಉತ್ತರ ಕೊಡ್ತೀವಿ. ಚಿತ್ರದ ಶೂಟಿಂಗ್ ಶುರು ಮಾಡುತ್ತೇವೆ. ಎಲ್ಲ ಮುಗಿಸಿಕೊಂಡು ಬರ್ತೀವಿ ಅಂತಲೂ ಶ್ರೀಮುರಳಿ ಚಿತ್ರದ ಟೀಸರ್ ರಿಲೀಸ್ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.













