Last Updated:
ದಿಲ್ ಚಾಹ್ತಾ ಹೈ ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಂವಾದದಲ್ಲಿ ಚಿತ್ರತಂಡ ಶೂಟಿಂಗ್ ದಿನಗಳ ಹಲವು ಕುತೂಹಲಕಾರಿ ಘಟನೆಗಳನ್ನು ಹಂಚಿಕೊಂಡಿದೆ.
ಬಾಲಿವುಡ್ನ ಎವರ್ಗ್ರೀನ್ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಿಲ್ ಚಾಹ್ತಾ ಹೈ (Dil Chahta Hai) ಸಿನಿಮಾ ಬಿಡುಗಡೆಯಾಗಿ 25 ವರ್ಷಗಳನ್ನು ಪೂರೈಸಿದೆ. ಯುವಜನತೆಯ ನೆಚ್ಚಿನ ಸಿನಿಮಾಗಳಲ್ಲಿ ಒಂದಾಗಿರುವ ಈ ಚಿತ್ರ ಇಂದಿಗೂ ತನ್ನ ಕಥೆ, ಪಾತ್ರಗಳು ಮತ್ತು ಸ್ನೇಹದ ಕುರಿತಾದ ನಿರೂಪಣೆಯಿಂದ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡದ ಹಲವು ಸದಸ್ಯರು ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಶೂಟಿಂಗ್ ಸಂದರ್ಭದಲ್ಲಿ ನಡೆದಿದ್ದ ಅಚ್ಚರಿಯ ಘಟನೆಯೊಂದನ್ನು ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಮತ್ತು ನಟ ಆಮಿರ್ ಖಾನ್ (Aamir Khan) ನೆನಪಿಸಿಕೊಂಡಿದ್ದಾರೆ.














