Last Updated:
ಬಿಗ್ ಬಾಸ್ ಫೇಮ್ ನಿವೇದಿತಾ ಗೌಡ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ. ನ್ಯೂಯಾರ್ಕ್ ಸಿಟಿಯ ರಸ್ತೆ ಮೇಲೆ ಸಖತ್ ಆಗಿಯೇ ವಾಕ್ ಮಾಡಿಕೊಂಡು ಬರ್ತಿದ್ದಾರೆ. ಈ ವಿಡಿಯೋದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಫೇಮ್ ನಿವೇದಿತಾ ಗೌಡ (Niveditha Gowda) ಹೊರ ದೇಶಕ್ಕೆ ಹೋಗಿದ್ದಾರೆ. ಇವರಿಗೆ ಟ್ರಾವೆಲಿಂಗ್ ಅಂದ್ರೆ ತುಂಬಾನೆ ಇಷ್ಟ ಆಗುತ್ತದೆ. ಅದಕ್ಕೇನೆ ಆಗಾಗ ಹೊರಗೆ ಹೋಗ್ತಾನೇ ಇರ್ತಾರೆ. ಹಾಗೆ ಈ ಸಲ ನ್ಯೂಯಾರ್ಕ್ ದೇಶಕ್ಕೆ ಹೋಗಿದ್ದಾರೆ. ಇಲ್ಲಿಯ ಚೆಂದದ ರಸ್ತೆ ಮೇಲಿನ ಝೀಬ್ರಾ ಕ್ರಾಸಿಂಗ್ (Zebra Crossing) ಮೇಲೆ ವಾಕ್ ಮಾಡಿಕೊಂಡು ಬಂದಿದ್ದಾರೆ. ಹೀಗೆ ಬರೋ ಒಂದು ವಿಡಿಯೋ (Video) ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ ಬ್ಲ್ಯಾಕ್ ಆಂಡ್ ವೈಟ್ ಪೋಲ್ಕಾ ಡಾಟ್ ಮ್ಯಾಕ್ಸಿ ಡ್ರೆಸ್ ತೊಟ್ಟಿದ್ದಾರೆ. ಇದರಲ್ಲಿ ಅಷ್ಟೆ ಚೆಂದ ಕೂಡ ಕಾಣಿಸುತ್ತಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














