ಮಸ್ತ್ ಲಂಗಾ ಚೋಲಿ
(ಚಿತ್ರ ಕೃಪೆ: ನಿವೇದಿತಾ ಗೌಡ ಇನ್ಸ್ಟಾಗ್ರಾಮ್)
ಇದರ ನಡುವೆ ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಇಂಟ್ರಸ್ಟಿಂಗ್ ಆಗಿವೆ. ವಿಂಟೇಜ್ ಫೀಲ್ ಕೂಡ ಕೊಡುತ್ತವೆ. ಆದರೆ, ಇ ಒಂದು ಫೋಟೋ ಶೂಟ್ ಅಲ್ಲಿ ಲಂಗಾ ಚೋಲಿ ಧರಿಸಿದ್ದಾರೆ.
ಈ ಫೋಟೋ ಶೂಟ್ ಅಲ್ಲಿ ಹೊಗೆ ಸ್ಪರ್ಶ ಇದೆ. ಮನೆಯಲ್ಲಿ ಅಲಂಕಾರ ಮಾಡಿಕೊಳ್ಳುವ ಹೆಣ್ಣುಮಗಳು ಆಗ ಹೇಗೆಲ್ಲ ಕಾಣಿಸುತ್ತಿದ್ದರು. ಮನೆಯಲ್ಲಿ ಯಾವ ರೀತಿ ವಾತಾವರಣ ಇರ್ತಾ ಇತ್ತು ಅನ್ನೋದು ಈ ಫೋಟೋ ಶೂಟ್ ಅಲ್ಲಿ ಕಾಣಿಸುತ್ತದೆ.
ರೆಟ್ರೋ ಫೀಲ್ ಅಂದ್ರು ತಪ್ಪಿಲ್ಲ. ಆ ಒಂದು ಕಾನ್ಸೆಪ್ಟ್ ಮೇಲೇನೆ ಈ ಫೋಟೋ ಶೂಟ್ ಮಾಡಿದ್ದಾರೆ. ಇದನ್ನ ಸುಹಾಸ್ ಸಪ್ತಗಿರಿ ಮಾಡಿದ್ದಾರೆ. ಇದರ ಪ್ರತಿ ಫೋಟೋ ಕೂಡ ಅಷ್ಟೆ ಚೆನ್ನಾಗಿ ಬಂದಿವೆ.
ನಿವೇದಿತಾ ಗೌಡ ಇಲ್ಲಿ ಒಳ್ಳೆ ಪೋಸ್ಗಳನ್ನ ಕೊಟ್ಟಿದ್ದಾರೆ. ಅಷ್ಟೆ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. ಪ್ರತಿ ಫೋಟೋದಲ್ಲೂ ಹೊಸ ಹೊಸ ಭಾವಗಳನ್ನ ವ್ಯಕ್ತಪಡಿಸಿದ್ದಾರೆ.
ಈ ಫೋಟೋಗಳಲ್ಲಿ ಹೊಗೆಯ ನಡುವೆ ಕೊಟ್ಟಿರೋ ಆ ಸುಂದರ ನೋಟದ ಪೋಸ್, ಕೇಶರಾಶಿಯನ್ನ ಹಿಡಿದಿರೋ ಶೈಲಿ, ಎಲ್ಲವೂ ಅಷ್ಟೆ ಚೆಂದ ಕಾಣಿಸುತ್ತದೆ.
ಹೊಗೆ ಮತ್ತು ಹೊಳಪು
(ಚಿತ್ರ ಕೃಪೆ: ನಿವೇದಿತಾ ಗೌಡ ಇನ್ಸ್ಟಾಗ್ರಾಮ್)
ನಿವೇದಿತಾ ಗೌಡ ಕನ್ನಡಿ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಕೂಡ ಅಷ್ಟೆ ಚೆನ್ನಾಗಿ ಬಂದಿವೆ. ತಮ್ಮ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಿವೇದಿತಾ ಗೌಡ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಫೋಟೋ ಮತ್ತು ಕೆಲವು ವಿಡಿಯೋಗಳು ಇವೆ. ಫೋಟೋಗ್ರಾಫರ್ ಸುಹಾಸ್ ಸಪ್ತಗಿರಿ ಕೂಡ ಈ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ನಿವೇದಿತಾ ಗೌಡ ಅವರ ಈ ಒಂದು ಫೋಟೋಗಳನ್ನ ನೋಡಿದವರು ಒಳ್ಳೆ ಮಾತುಗಳನ್ನೆ ಹಾಕಿದ್ದಾರೆ. ಕೆಟ್ಟ ಕಾಮೆಂಟ್ಗಳು ಎಲ್ಲೂ ಕಾಣಿಸುವುದಿಲ್ಲ.
‘ಮುದ್ದು ಮದ್ದು ರಾಜಕುಮಾರಿ’ ಅನ್ನುವ ಒಂದು ಕಾಂಪ್ಲಿಮೆಂಟ್ ಹಲವು ಕಾಂಪ್ಲಿಮೆಂಟ್ಗಳಲ್ಲಿ ಗಮನ ಸೆಳೆಯುತ್ತದೆ. ಬ್ಯೂಟಿಫುಲ್ ಮತ್ತು ಏಂಜಲ್ ಅಂದಿರೋ ಕಾಂಪ್ಲಿಮೆಂಟ್ಸ್ ಕೂಡ ಇವೆ.
ರವಿಚಂದ್ರನ್ ಅವರ “ಕಲಾವಿದರ ” ಚಿತ್ರದ ಹಾಡಿಗೆ ಡ್ಯಾನ್ಸರ್ ಕಿಶನ್ ಮತ್ತು ನಿವೇದಿತಾ ಗೌಡ ಅವರು ರೀಲ್ಸ್ ಮಾಡಿದ್ದರು. ಹೇ ನಿವಲೇ ಅನ್ನುವ ಈ ಹಾಡಿಗೆ ನಿಜವಾದ ನವಿಲು ಗರಿಗಳನ್ನ ಬಾಡಿಗೆಗೆ ತಂದು ಬಳಸಿದ್ದರು.
ಆದರೆ, ಅರಣ್ಯ ಇಲಾಖೆಗೆ ದೂರು ಹೋದ್ಮೇಲೆ ಇವರು ಆ ವಿಡಿಯೋ ಡಿಲೀಟ್ ಮಾಡಿದರು. ವಿಡಿಯೋ ಮೂಲಕ ಎಲ್ಲರಿಗೂ ಕ್ಷಮೆ ಕೇಳಿರೋದು ಇದೆ. ಮುಂದೆ ನಡೆಯುವ ತನಿಖೆಗೆ ಸಹಕರಿಸುವುದಾಗಿಯೂ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.












