Last Updated:
ಅಮೆಜಾನ್ ತನ್ನ ಜಾಲತಾಣದಲ್ಲಿ ಸಾಮಾನ್ಯ ಸಿಹಿತಿಂಡಿಗಳಾದ ‘ತುಪ್ಪದ ಲಾಡು’, ‘ಖೋವಾ ಪೇಡಾ’ ಮತ್ತು ‘ಮಿಲ್ಕ್ ಪೇಡಾ’ ಮುಂತಾದ ಉತ್ಪನ್ನಗಳನ್ನು ಶ್ರೀ ರಾಮಮಂದಿರ ಅಯೋಧ್ಯೆ ಪ್ರಸಾದ್ (Sri Ram Mandir Ayodhya Prasad) ಎಂಬ ಹೆಸರಿನಲ್ಲಿ ಲಿಸ್ಟ್ ಮಾಡಿ ಮಾರಾಟಕ್ಕಿಟ್ಟಿತ್ತು.
ಅಯೋಧ್ಯೆಯ ರಾಮಮಂದಿರದ (Shri Ram Mandir Ayodhya Prasad) ಹೆಸರಿನಲ್ಲಿ ಸಾಮಾನ್ಯ ಸಿಹಿತಿಂಡಿಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ದಾರಿತಪ್ಪಿಸಿದ ಆರೋಪದ ಮೇಲೆ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಕಂಪನಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) ₹1 ಲಕ್ಷ ದಂಡ ವಿಧಿಸಿದೆ. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಭಕ್ತರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ವ್ಯಾಪಾರ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.














