Niveditha Gowda: ಚೋಲಿ ಧರಿಸಿ ಗೊಂಬೆಯಂತೆ ಕಂಡ ಬಿಗ್​ಬಾಸ್ ಚೆಲುವೆ | | ACTPnews

bigg boss fame niveditha gowda share latest photos on social media


ಮಸ್ತ್ ಲಂಗಾ ಚೋಲಿ

ನಿವೇದಿತಾ ಗೌಡ ಇನ್ನು ಬೇಬಿ ಡಾಲ್ ತರವೇ ಕೆಲವೊಮ್ಮೆ ಕಾಣಿಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಅದೇ ತರವೇ ಇದ್ದರು. ಇತ್ತೀಚಿಗೆ ಕೊಂಚ ದಪ್ಪ ಆಗಿರೋದು ಇದೆ.
ಮಸ್ತ್ ಲಂಗಾ ಚೋಲಿ

(ಚಿತ್ರ ಕೃಪೆ: ನಿವೇದಿತಾ ಗೌಡ ಇನ್‌ಸ್ಟಾಗ್ರಾಮ್)

ಇದರ ನಡುವೆ ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಇಂಟ್ರಸ್ಟಿಂಗ್ ಆಗಿವೆ. ವಿಂಟೇಜ್ ಫೀಲ್ ಕೂಡ ಕೊಡುತ್ತವೆ. ಆದರೆ, ಇ ಒಂದು ಫೋಟೋ ಶೂಟ್ ಅಲ್ಲಿ ಲಂಗಾ ಚೋಲಿ ಧರಿಸಿದ್ದಾರೆ.

ಹೊಗೆ ಮತ್ತು ಹೊಳಪು

ಈ ಫೋಟೋ ಶೂಟ್ ಅಲ್ಲಿ ಹೊಗೆ ಸ್ಪರ್ಶ ಇದೆ. ಮನೆಯಲ್ಲಿ ಅಲಂಕಾರ ಮಾಡಿಕೊಳ್ಳುವ ಹೆಣ್ಣುಮಗಳು ಆಗ ಹೇಗೆಲ್ಲ ಕಾಣಿಸುತ್ತಿದ್ದರು. ಮನೆಯಲ್ಲಿ ಯಾವ ರೀತಿ ವಾತಾವರಣ ಇರ್ತಾ ಇತ್ತು ಅನ್ನೋದು ಈ ಫೋಟೋ ಶೂಟ್ ಅಲ್ಲಿ ಕಾಣಿಸುತ್ತದೆ.

ರೆಟ್ರೋ ಫೀಲ್ ಅಂದ್ರು ತಪ್ಪಿಲ್ಲ. ಆ ಒಂದು ಕಾನ್ಸೆಪ್ಟ್ ಮೇಲೇನೆ ಈ ಫೋಟೋ ಶೂಟ್ ಮಾಡಿದ್ದಾರೆ. ಇದನ್ನ ಸುಹಾಸ್ ಸಪ್ತಗಿರಿ ಮಾಡಿದ್ದಾರೆ. ಇದರ ಪ್ರತಿ ಫೋಟೋ ಕೂಡ ಅಷ್ಟೆ ಚೆನ್ನಾಗಿ ಬಂದಿವೆ.

ನಿವೇದಿತಾ ಸೂಪರ್ ಲುಕ್

ನಿವೇದಿತಾ ಗೌಡ ಇಲ್ಲಿ ಒಳ್ಳೆ ಪೋಸ್‌ಗಳನ್ನ ಕೊಟ್ಟಿದ್ದಾರೆ. ಅಷ್ಟೆ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. ಪ್ರತಿ ಫೋಟೋದಲ್ಲೂ ಹೊಸ ಹೊಸ ಭಾವಗಳನ್ನ ವ್ಯಕ್ತಪಡಿಸಿದ್ದಾರೆ.

ಈ ಫೋಟೋಗಳಲ್ಲಿ ಹೊಗೆಯ ನಡುವೆ ಕೊಟ್ಟಿರೋ ಆ ಸುಂದರ ನೋಟದ ಪೋಸ್, ಕೇಶರಾಶಿಯನ್ನ ಹಿಡಿದಿರೋ ಶೈಲಿ, ಎಲ್ಲವೂ ಅಷ್ಟೆ ಚೆಂದ ಕಾಣಿಸುತ್ತದೆ.

bigg boss fame niveditha gowda share latest photos on social media

ಹೊಗೆ ಮತ್ತು ಹೊಳಪು

(ಚಿತ್ರ ಕೃಪೆ: ನಿವೇದಿತಾ ಗೌಡ ಇನ್‌ಸ್ಟಾಗ್ರಾಮ್)

ಕನ್ನಡಿ ಮುಂದೆ ನಿಂತ ಚೆಲುವೆ

ನಿವೇದಿತಾ ಗೌಡ ಕನ್ನಡಿ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಕೂಡ ಅಷ್ಟೆ ಚೆನ್ನಾಗಿ ಬಂದಿವೆ. ತಮ್ಮ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿವೇದಿತಾ ಗೌಡ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಫೋಟೋ ಮತ್ತು ಕೆಲವು ವಿಡಿಯೋಗಳು ಇವೆ. ಫೋಟೋಗ್ರಾಫರ್ ಸುಹಾಸ್ ಸಪ್ತಗಿರಿ ಕೂಡ ಈ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ರಿಯಾಕ್ಷನ್ ಹೇಗಿವೆ

ನಿವೇದಿತಾ ಗೌಡ ಅವರ ಈ ಒಂದು ಫೋಟೋಗಳನ್ನ ನೋಡಿದವರು ಒಳ್ಳೆ ಮಾತುಗಳನ್ನೆ ಹಾಕಿದ್ದಾರೆ. ಕೆಟ್ಟ ಕಾಮೆಂಟ್‌ಗಳು ಎಲ್ಲೂ ಕಾಣಿಸುವುದಿಲ್ಲ.

‘ಮುದ್ದು ಮದ್ದು ರಾಜಕುಮಾರಿ’ ಅನ್ನುವ ಒಂದು ಕಾಂಪ್ಲಿಮೆಂಟ್ ಹಲವು ಕಾಂಪ್ಲಿಮೆಂಟ್‌ಗಳಲ್ಲಿ ಗಮನ ಸೆಳೆಯುತ್ತದೆ. ಬ್ಯೂಟಿಫುಲ್ ಮತ್ತು ಏಂಜಲ್ ಅಂದಿರೋ ಕಾಂಪ್ಲಿಮೆಂಟ್ಸ್‌ ಕೂಡ ಇವೆ.

ನವಿಲಗಾಗಿ ಕ್ಷಮೆ

ರವಿಚಂದ್ರನ್ ಅವರ “ಕಲಾವಿದರ ” ಚಿತ್ರದ ಹಾಡಿಗೆ ಡ್ಯಾನ್ಸರ್ ಕಿಶನ್ ಮತ್ತು ನಿವೇದಿತಾ ಗೌಡ ಅವರು ರೀಲ್ಸ್ ಮಾಡಿದ್ದರು. ಹೇ ನಿವಲೇ ಅನ್ನುವ ಈ ಹಾಡಿಗೆ ನಿಜವಾದ ನವಿಲು ಗರಿಗಳನ್ನ ಬಾಡಿಗೆಗೆ ತಂದು ಬಳಸಿದ್ದರು.

ಆದರೆ, ಅರಣ್ಯ ಇಲಾಖೆಗೆ ದೂರು ಹೋದ್ಮೇಲೆ ಇವರು ಆ ವಿಡಿಯೋ ಡಿಲೀಟ್ ಮಾಡಿದರು. ವಿಡಿಯೋ ಮೂಲಕ ಎಲ್ಲರಿಗೂ ಕ್ಷಮೆ ಕೇಳಿರೋದು ಇದೆ. ಮುಂದೆ ನಡೆಯುವ ತನಿಖೆಗೆ ಸಹಕರಿಸುವುದಾಗಿಯೂ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed