ಜಾಕಿ-42 ಸಿನಿಮಾ ರಿಲೀಸ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು 20 ರಂದು ಇದು ತೆರೆ ಕಾಣುತ್ತಿದೆ. ಇದನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ.
ಚಿತ್ರದಲ್ಲಿ 3 ಹಾಡುಗಳು
(ಚಿತ್ರ ಕೃಪೆ: ಸಿನಿಮಾ ಟೀಮ್)
ಈ ಸಿನಿಮಾವನ್ನ ಪ್ರೇಮದ ಊರಲಿ ಚಿತ್ರದ ವಿತರಕ ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ರಾಜ್ಯದೆಲ್ಲೆಡೆ ಈ ಸಿನಿಮಾ ತೆರೆ ಕಾಣುತ್ತಿದೆ.
ಈ ಚಿತ್ರದಲ್ಲಿ ಕುದುರೆ ರೇಸ್ ಇದೆ. ಇದರ ಹಿನ್ನೆಲೆಯಲ್ಲಿ ಕಥೆ ನಡೆಯುತ್ತದೆ. ಕೌಟುಂಬಿಕ ಮೌಲ್ಯಗಳೂ ಈ ಚಿತ್ರದಲ್ಲಿವೆ. ಸಿನಿಮಾದ 2 ಹಾಡು ರಿಲೀಸ್ ಆಗಿವೆ.
ಜಾಕಿ-42 ಚಿತ್ರದಲ್ಲಿ ಮೂರೇ ಹಾಡಿವೆ. ಒಂದು ಆ್ಯಕ್ಷನ್ ಸನ್ನಿವೇಶ ಇದೆ. ಫ್ಯಾಮಿಲಿ ಎಮೋಷನ್ಸ್ ಕೂಡ ಇವೆ. ಹಾಸ್ಯದ ಹೊನಲು ಇದೆ.
ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನೆಲೆ ಇರೋ ಭಾರತದ ಮೊದಲ ಸಿನಿಮಾ ಆಗಿದೆ. ಈ ವಿಷಯವನ್ನ ಡೈರೆಕ್ಟರ್ ಗುರುತೇಜ್ ಶೆಟ್ಟಿ ಹೇಳಿಕೊಂಡಿದ್ದಾರೆ.
200 ಥಿಯೇಟರ್ ಅಲ್ಲಿ….
(ಚಿತ್ರ ಕೃಪೆ: ಸಿನಿಮಾ ಟೀಮ್)
ಜಾಕಿ-42 ಸಿನಿಮಾ ದೊಡ್ಡಮಟ್ಟದಲ್ಲಿಯೇ ತೆರೆ ಕಾಣುತ್ತಿದೆ. ಈ ಚಿತ್ರ 200 ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ರಿಲೀಸ್ ಆಗುತ್ತಿದೆ. ಈ ಮ್ಯಾಟರ್ ಅನ್ನ ಚಿತ್ರದ ನಿರ್ಮಾಪಕ ಭಾರತಿ ಸತ್ಯನಾರಾಯಣ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ನಾಯಕಿ ಅಂತ ಬಂದ್ರೆ, ಹೃತಿಕಾ ಶ್ರೀನಿವಾಸ್ ಅಭಿನಯಿಸಿದ್ದಾರೆ. ಯುಕ್ತ, ರಾಜೇಂದ್ರ ಕಾರಂತ್, ಬಲ ರಾಜ್ ವಾಡಿ, ಗಿರೀಶ್ ಹೆಗ್ಡೆ, ಅರುಣ್ ಆಚಾರ್, ಯಶ್ ಶೆಟ್ಟಿ, ದೀಪಕ್ ರೈ ಪಣಜೆ, ಶಾಂತಲಾ ಕಾಮತ್ ಇತರ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಮೂಲಕ ಕಿರಣ್ ರಾಜ್ ಹೊಸ ಭರವಸೆ ಮೂಡಿಸಿದ್ದಾರೆ. ಕುದುರೆ ರೇಸ್ ಕತೆಯಲ್ಲಿ ಎರಡು ರೋಲ್ ಮಾಡ್ತಾನೇ ತಮ್ಮ ಅಭಿನಯದ ಎರಡು ರೂಪ ತೋರಿಸಿದ್ದಾರೆ ಅಂತಲೂ ಹೇಳಬಹುದು.













