ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾ ಗ್ರಾಂ, ಎಕ್ಸ್ ಗೆ ನೋಟಿಸ್ ಕಳುಹಿಸಲಾಗಿದೆ. ನೇರವಾಗಿ ಇದೇ ಮೊದಲ ಬಾರಿಗೆ ಕೋರ್ಟ್ ನಿಂದ ನೋಟಿಸ್ ಕಳುಹಿಸಲಾಗಿದ್ದು ಇಷ್ಟು ದಿನ ಪೊಲೀಸರು ಪ್ರಕರಣ ದಾಖಲಿಸಿ ಪತ್ರ ಬರೆಯುತ್ತಿದ್ದರು.
ಅಕೌಂಟ್ ಮಾಹಿತಿ ಕೊಟ್ಟು ವಿಡಿಯೋ ಡಿಲಿಟ್ ಮಾಡುವಂತೆ ಕೇಳುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ನೇರವಾಗಿ ಕೋರ್ಟ್‌ನಿಂದ ನೋಟಿಸ್ ಜಾರಿಯಾಗಿದೆ. ಎಲ್ಲೆಡೆ ಲೈವ್ ರೆರ್ಕಾಡಿಂಗ್ ಮಾಡಿದ ವಿಡಿಯೋಗಳು ಈಗ ಡಿಲಿಟ್ ಆಗಿವೆ.
ಕೋರ್ಟ್ ನೋಟಿಸ್ ಬೆನ್ನಲ್ಲೇ ಸಾಮಾಜಿಕ ಜಾಲಾತಣದಲ್ಲಿ ವಿಡಿಯೋ ಹಾಗೂ ಪೋಟೋಸ್ ಡಿಲೀಟ್ ಆಗುತ್ತಿವೆ. ಕೋರ್ಟ್ ವಿಚಾರಣೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ರೆಕಾರ್ಡಿಂಗ್‌ಗಳನ್ನು ಅಳಿಸುವಂತೆ ಸೂಚನೆ ನೀಡಲಾಗಿದ್ದು ಕೋರ್ಟ್ ವಿಚಾರಣೆಯ ದೃಶ್ಯಗಳನ್ನು ಮರುಪ್ರಸಾರ ಅಥವಾ ಶೇರ್ ಮಾಡದಂತೆ ಸೂಚನೆ ನೀಡಲಾಗಿದೆ.
ವಿಚಾರಣೆ ಗೌಪ್ಯತೆ ಮತ್ತು ನ್ಯಾಯಾಂಗ ಪ್ರಕ್ರಿಯೆ ನಿಯಮಗಳನ್ನು ಪಾಲಿಸುವಂತೆ ಕೋರ್ಟ್ ನಿರ್ದೇಶನ ಕೊಟ್ಟಿದೆ. ಇನ್ಮುಂದೆಯೂ ಕೋರ್ಟ್ ಲೈವ್ ಪ್ರೋಸಿಡಿಂಗ್ ರೆಕಾರ್ಡ್ ಮಾಡಿದಲ್ಲಿ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕೋರ್ಟ್ ನಿಂದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸದ್ಯ ಪೊಲೀಸ್ ಕಮಾಂಡ್ ಸೆಂಟರ್ ಸೋಷಿಯಲ್ ಮೀಡಿಯಾ ಮೇಲೆ ಕಣ್ಣಿಟ್ಟಿದೆ.
ಪ್ರದೋಷ್ ಮಾಫಿ ಸಾಕ್ಷಿ ವಿಡಿಯೋ ದುರ್ಬಳಕೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿತ್ತು. ನ್ಯಾಯಾಲಯ ಕೋರ್ಟ್ ಕಲಾಪಗಳ ಕಂಟೆಂಟ್ ಪೋಸ್ಟ್ ಮಾಡಿದ್ದ ಯೂಟ್ಯೂಬರ್ಸ್, ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಗೆ ಶಾಕ್ ಕೊಟ್ಟಿತ್ತು.
ಸ್ಕ್ರೀನ್ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಲಾಗಿ ಯೂಟ್ಯೂಬರ್ಸ್ ಹಾಗೂ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿತ್ತು.
ವರದಿ: ಮುನಿರಾಜು ಕೆ.ಜಿ. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು













