Pradosh: ಮಾಫಿ ಸಾಕ್ಷಿ ಪ್ರದೋಷ್​ನಿಂದ ಹೊಸ ಡಿಮ್ಯಾಂಡ್! | Renukaswamy darshan case pradosh request permission talk to family | | ACTPnews

ಪ್ರದೋಷ್


Last Updated:

ಮಾಫಿ ಸಾಕ್ಷಿ ಪ್ರದೋಷ್ ಹೊಸ ಡಿಮ್ಯಾಂಡ್ ಏನು? ಕೋರ್ಟ್ ಮುಂದೆ ಅಪ್ರೂವರ್ ಪ್ರದೋಷ್ ಕೇಳಿದ್ದೇನು? ಕೋರ್ಟ್ ಅಸ್ತು ಎನ್ನುತ್ತಾ?

ಪ್ರದೋಷ್
ಪ್ರದೋಷ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗುತ್ತೇನೆ ಎಂದು ಬಂದಾಗಿನಿಂದ ಕೇಸ್​ನಲ್ಲಿ (Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೇಸ್​ನಲ್ಲಿ ಪ್ರದೋಷ್ ಎಲ್ಲಾ ವಿಚಾರಗಳನ್ನು ರಿವೀಲ್ ಮಾಡಿದ್ದು, ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ಕೂಡಾ ನಡೆದಿದೆ.

ಮಾಫಿ ಸಾಕ್ಷಿ ಪ್ರದೋಷ್ ಗೆ ಸಿಗುತ್ತಾ ಕುಟುಂಬಸ್ಥರ ಜೊತೆ ವಿಸಿ ಮೂಲಕ ಮಾತನಾಡುವ ಅವಕಾಶ?

ಪ್ರದೋಷ್ ಕುಟುಂಬಸ್ಥರು ಭೇಟಿಗೆ ಅವಕಾಶ ನೀಡದ ಸಂಬಂಧ ಕೋರ್ಟ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ಜೈಲು ಅಧಿಕಾರಿಗಳಿಂದ ಕೋರ್ಟ್ ವರದಿ ಕೇಳಿತ್ತು. ನಿನ್ನೆ ವರದಿ‌ ಸಲ್ಲಿಕೆಯಾಗಿದ್ದು ಈ ಸಂಬಂಧ ಇಂದು ಆದೇಶ ಪ್ರಕಟ ಮಾಡುವುದಾಗಿ ಕೋರ್ಟ್ ತಿಳಿಸಿದೆ.

ದರ್ಶನ್ ಕಡೆಯಿಂದ ಪ್ರದೋಷ್​ನ ಕಟ್ಟಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ಈಗ ಸಲ್ಲಿಸಿರೋ ಅರ್ಜಿಯಲ್ಲಿ ಹೇಳಿಕೆ ಬದಲಾಯಿಸಿ ತಿರುಚಿ ಹೇಳದಂತೆ ಮೊದಲೇ ಅರ್ಜಿ ಸಲ್ಲಿಸಲಾಗಿತ್ತು.

ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಮಾಫಿ ಸಾಕ್ಷಿ ವಿಚಾರದಲ್ಲಿ ದರ್ಶನ್ ಅರ್ಜಿ ಪ್ರದೋಶ್ ನ ನ್ಯಾಯಾಲಯಕ್ಕೆ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಎಂದು ಕೋರಿ ದರ್ಶನ್ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Darshan Case: ಮಾಫಿ ಸಾಕ್ಷಿಯಿಂದ ಸಿಗುತ್ತಾ ಮುಕ್ತಿ? ದರ್ಶನ್​ಗೆ ಬಿಗ್​ ಡೇ! ಸುಪ್ರೀಂನಲ್ಲಿಂದು ವಿಚಾರಣೆಲ

ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 267 ಹಾಗೂ ಬಿಎನ್‌ಎಸ್‌ಎಸ್ ಸೆಕ್ಷನ್ 302 ಅಡಿಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು. ಮತ್ತೊಂದು ಅರ್ಜಿಯಲ್ಲೇನಿತ್ತು? ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವ ವೇಳೆ ಹಿಂದಿನ ದಿನ ಮರೆತುಹೋದ ವಿಚಾರವನ್ನು ಮರುದಿನ ಸೇರಿಸಲು ಅವಕಾಶ ನೀಡಬಾರದು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು. ಎರಡೂ ಅರ್ಜಿಗಳ ಕುರಿತು ವಾದ-ಪ್ರತಿವಾದ ಆಲಿಸಿದ 59ನೇ ಸಿಸಿಹೆಚ್ ನ್ಯಾಯಾಲಯ, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ವರದಿ: ಮಂಜುನಾಥ್ ಎನ್, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *