ಪೂಜಾ ಗಾಂಧಿ ಮಾತ್ ಆಡ್ತಾರೆ. ಆದರೆ, ಇವರ ಮಾತುಗಳಲ್ಲಿ ಕುತೂಹಲ ಇರುತ್ತದೆ. ಪ್ರಶ್ನೆಗಳು ಅಡಗಿರುತ್ತವೆ. ರಮೇಶ್ ಅರವಿಂದ್ ಅವರು ಇವರನ್ನ ಪೂಚಾ ಗಾಂಧಿ ಅಂತ ಹೇಳ್ತಾ ಇದ್ದರು.
ಮಳೆ ಹುಡುಗಿ ಪೂಜಾ ಗಾಂಧಿ ಜನ್ಮ ದಿನ; ಸಣ್ಣ ಆಗಿದ್ದು ಯಾಕೆ?
(ಚಿತ್ರ ಕೃಪೆ: ಪೂಜಾ ಗಾಂಧಿ ಇನ್ಸ್ಟಾಗ್ರಾಮ್)
ಇವರು ಅಷ್ಟೊಂದು ಪ್ರಶ್ನೆಗಳನ್ನ ಕೇಳ್ತಾ ಇದ್ದರು. ಎಲ್ಲದರ ಬಗ್ಗೆನೂ ಪೂಜಾ ಗಾಂಧಿ ಕುತೂಹಲ ಹೊಂದಿದ್ದರು. ಅದಕ್ಕೆ ಪ್ರಶ್ನೆಗಳನ್ನ ಕೇಳ್ತಾ ಇದ್ದರು. ಪೂಜಾ ಗಾಂಧಿ ಉತ್ತರ ಭಾರತದವರು ಅಂತ ಗೊತ್ತೇ ಇದೆ. ಆದರೆ, ಯೋಗರಾಜ್ ಭಟ್ರ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿರು.
ಪೂಜಾ ಗಾಂಧಿ ಕನ್ನಡ ಪ್ರೀತಿಯನ್ನ ಮೆಚ್ಚಲೇ ಬೇಕು. ಪರ ಭಾಷೆಯ ಕಲಾವಿದೆಯರು ಕನ್ನಡಕ್ಕೆ ಬರ್ತಾರೆ. ಕನ್ನಡ್ ಕಲೀತಿನಿ ಅಂತಾರೆ.
ಪೂಜಾ ಗಾಂಧಿ ಒಂದು ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ ಮಿನುಗು ತಾರೆ ಕಲ್ಪನಾ ಕಲ್ಪನಾ ಕತೆ ಹೇಳಿದ್ದರು. ಇದನ್ನ ತಾವೇ ನಿರ್ಮಾಣ ಕೂಡ ಮಾಡಿದ್ದರು.
ನಿಜಕ್ಕೂ ಈ ಚಿತ್ರ ಇವರ ಜೀವನದ ಮಹತ್ವದ ಚಿತ್ರವೇ ಆಗಿದೆ. ಮಿಲನ ಚಿತ್ರದಲ್ಲಿ ವಿಶೇಷ ರೋಲ್ ಮಾಡಿದ್ದರು. ನಿನ್ನಿಂದಲೇ ಅನ್ನುವ ಇವರ ಮೇಲಿನ ಹಾಡು ಇಂದಿಗೂ ಜನರ ಮನದಲ್ಲಿ ಇದೆ.
ಮಳೆ ಹುಡುಗಿ ಪೂಜಾ ಗಾಂಧಿ ಜನ್ಮ ದಿನ
(ಚಿತ್ರ ಕೃಪೆ: ಪೂಜಾ ಗಾಂಧಿ ಇನ್ಸ್ಟಾಗ್ರಾಮ್)
ಪೂಜಾ ಗಾಂಧಿ ಚಿತ್ರ ಜೀವನದಲ್ಲಿ ಬಂದ ತಾಜ್ ಮಹಲ್ ಕೂಡ ಒಳ್ಳೆ ಹೆಸರು ತಂದು ಕೊಡ್ತು. ಕೃಷ್ಣ ಕೂಡ ಹಿಟ್ ಚಿತ್ರವೇ ಆಗಿದೆ. ಉಪೇಂದ್ರ ಅವರ ಜೊತೆಗೆ ಬುದ್ಧಿವಂತ ಸಿನಿಮಾ ಮಾಡಿದರು. ಇದು ಇವರಿಗೆ ಹೆಸರು ತಂದು ಕೊಡ್ತು.
ದಂಡುಪಾಳ್ಯ ಇವರ ಮತ್ತೊಂದು ಚಿತ್ರವೇ ಆಗಿತ್ತು. ಆದರೆ, ಇದರಲ್ಲಿ ಇವರ ಅಭಿನಯ ನಿಜಕ್ಕೂ ಆಶ್ಚರ್ಯ ಮೂಡಿಸಿತ್ತು. ಮಳೆ ಹುಡುಗಿ ಪೂಜಾ ಗಾಂಧಿ ಈ ಸಿನಿಮಾದಲ್ಲಿ ರಗಡ್ ರೋಲ್ ಮಾಡಿದ್ದರು.
ಪೂಜಾ ಗಾಂಧಿ ದೊಡ್ಮನೆಗೂ ಬಂದಿದ್ದರು. ಕನ್ನಡ ಬಿಗ್ ಬಾಸ್ ಸೀಸನ್-3 ರಲ್ಲಿಯೇ ಪೂಜಾ ಗಾಂಧಿ ಸ್ಪರ್ಧಿ ಆಗಿದ್ದರು. ಟಾಪ್-5 ರೌಂಡ್ ಕೂಡ ತಲುಪಿದ್ದರು.
ಮನೆಯಲ್ಲಿಯೇ ಹುಟ್ಟಿದ ಹಬ್ಬ ಆಚರಣೆ ಮಾಡ್ತೀವಿ ಅಂತಲೇ ಪೂಜಾ ಗಾಂಧಿ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿದ್ದಾರೆ. ಹಂಚಿಕೊಂಡಿದ್ದಾರೆ.
ಮುಂಗಾರು ಮಳೆ ಚಿತ್ರದಲ್ಲಿ ಇದ್ದ ರೀತಿನೇ ಈಗ ಕಾಣಿಸುತ್ತಿದ್ದೀರಿ. ಸಣ್ಣ ಕೂಡ ಆಗಿದ್ದೀರಿ. ಇದು ನಿಮ್ಮ ಮುಂದಿನ ಚಿತ್ರದ ತಯಾರಿನಾ ಅಂತ ಕೇಳಿದ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ.
ಇವರ ಉತ್ತರ ಏನು ಗೊತ್ತಾ? ಹೌದು, ಒಂದು ಸ್ಮಲಿ ಕಳಿಸಿದ್ದಾರೆ. ಥ್ಯಾಂಕ್ಸ್ ಜೊತೆಗೆ ಈ ಒಂದು ಹ್ಯಾಪಿ ಸ್ಮೈಲ್ ಹಾಕಿದ್ದಾರೆ.
ಉದ್ಯಮಿ ವಿಜಯ್ ಗೋರ್ಪಡೆ ಅವರನ್ನ ಇವರು ಮದುವೆ ಆಗಿದ್ದಾರೆ. ಮಂತ್ರ ಮಾಂಗಲ್ಯ ಪದ್ಧತಿ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಲ್ಲರ ಗಮನ ಕೂಡ ಸೆಳೆದಿದ್ದಾರೆ.













