Bail Movie Review: ಬೇಲ್ ಸಿನಿಮಾದ ತ್ರಿಮೂರ್ತಿಗಳು! ಇವರೇ ಚಿತ್ರದ ಪಿಲ್ಲರ್ಸ್ | | ACTPnews

shiva rajkumar pawan wadeyar bail movie public review


ಮಾಡಿದ್ದಾರೆ. ಅಮರ್ ಅಕ್ಬರ್ ಆಂಥೋನಿ ಥರವೇ ಈ ಪಾತ್ರಗಳಿಗೆ ರಾಬರ್ಟ್, ವಿಜಯ್, ಅಲಿ ಅಂತಲೇ ಹೆಸರಿಟ್ಟಿದ್ದಾರೆ. ಈ ಮೂರು ಪಾತ್ರಗಳ (Three Role) ಸುತ್ತ ಕತೆ ಇದೆ.

ಬೇಲ್ ಚಿತ್ರದ ತ್ರಿಮೂರ್ತಿಳು…

ಬೇಲ್ ಸಿನಿಮಾದಲ್ಲಿ ಸುಮಾರು ವಿಚಾರಗಳಿವೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರದ ಕತೆನೂ ಇಲ್ಲಿದೆ. ಇಡೀ ಹಳ್ಳಿ ಒಂದರ ಮಾರಣ ಹೋಮದ ಕತೆನೂ ಇದೆ.
ಬೇಲ್ ಸಿನಿಮಾದ ತ್ರಿಮೂರ್ತಿಗಳು; ಇವರೇ ಚಿತ್ರದ ಪಿಲ್ಲರ್.!

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ಈ ಚಿತ್ರದಲ್ಲಿ ಅಮ್ಮಾವರ ಗಂಡ ಪೊಲೀಸ್ ಕಮಿಷನರ್ ರೋಲ್ ಕೂಡ ಇದೆ. ವಿಜಯ್ ಅನ್ನೋದು ಈ ಪಾತ್ರದ ಹೆಸರು.ಇದನ್ನ ಶಿವರಾಜ್ ಕುಮಾರ್ ತುಂಬಾನೆ ಚೆನ್ನಾಗಿ ಮಾಡಿದ್ದಾರೆ.

ಅಲಿ-ರಾಬರ್ಟ್ ಸಾಥ್

ಈ ಚಿತ್ರದಲ್ಲಿ ಅಲಿ ಅನ್ನುವ ಪಾತ್ರ ಇದೆ. ಈ ಒಂದು ಪಾತ್ರವನ್ನ ಸಾಯಿ ಕುಮಾರ್ ಮಾಡಿದ್ದಾರೆ. ಇವರು ಈ ಚಿತ್ರದಲ್ಲಿ ನಿವೃತ್ತ ಜಡ್ಜ್ ರೋಲ್ ಮಾಡಿದ್ದಾರೆ.

ರಾಬರ್ಟ್ ಅನ್ನುವ ಪಾತ್ರದಲ್ಲಿ ಜಯರಾಮ್ ನಟಿಸಿದ್ದಾರೆ. ಇವರು ಸೈಬರ್ ಲೋಕದ ಬುದ್ಧಿವಂತ ಅಂತಲೇ ಹೇಳಬಹುದು. ಚಿತ್ರದ ಈ ಮೂರು ಪಾತ್ರಗಳು ಇಡೀ ಚಿತ್ರದ ಫಿಲ್ಲರ್‌ಗಳೇ ಆಗಿವೆ.

ದೀಕ್ಷಿತ್-ಸಂಜನಾ

ದೀಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ಸಂಜನಾ ಆನಂದ್ ಇಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ. ಈ ಎರಡೂ ಪಾತ್ರಗಳು ಇಲ್ಲಿ ಲವ್ ಬರ್ಡ್ಸ್ ಆಗಿದ್ದಾರೆ.

ಈ ಒಂದು ಚಿತ್ರದಲ್ಲಿ ಹಾಗೆ ಸುಮ್ಮನೆ ನಟ ಕಿರಣ್ ಇದ್ದಾರೆ. ಇವರೂ ಇಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ಆದರೆ, ಈ ಪಾತ್ರಕ್ಕೆ ನೆಗೆಟಿವ್ ಟಚ್ ಇದೆ.

ಧರ್ಮಶಾಲಾ ವಿಶೇಷ

ಈ ಒಂದು ಚಿತ್ರದಲ್ಲಿ ಪವನ್ ಒಡೆಯರ್ ಒಂದು ಕೆಲಸ ಮಾಡಿದ್ದಾರೆ. ಹಿಮಾಚಲದಲ್ಲಿರೋ ಧರ್ಮಶಾಲಾದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿಯೇ ಜೀವಂತ ದೇವಿಯ ಮಹತ್ವ ಹೇಳಿದ್ದಾರೆ.

director pawan wadeyar bail movie Sai Kumar Jayaram Shivarajkumar review

ಬೇಲ್-2 ಲಿಂಕ್

(ಚಿತ್ರ ಕೃಪೆ: ಡೈರೆಕ್ಟರ್ ಪವನ್ ಒಡೆಯರ್)

ಈ ಒಂದು ಜೀವಂತ ದೇವಿಯ ಕತೆಯನ್ನು ತಮ್ಮ ಚಿತ್ರಕ್ಕೂ ಕನೆಕ್ಟ್ ಮಾಡಿದ್ದಾರೆ. ಶಿವಣ್ಣನ ಮಗಳ ಪಾತ್ರಧಾರಿ ಈ ದೇವಿಗೆ ನಡೆದುಕೊಳ್ಳುವ ವಿಷಯವನ್ನು ಕನೆಕ್ಟ್ ಮಾಡಿಯೇ ಕತೆ ಹೇಳಿದ್ದಾರೆ.

ಯೋಗಿ ಧಮಾಕಾ

ಲೂಸ್ ಮಾದ ಯೋಗಿ ಧಮಾಕಾ ಮಾಡಿದ್ದಾರೆ. ವಿಲನ್ ಪಾತ್ರದ ಮೂಲಕ ಅಬ್ಬರಿಸಿದ್ದಾರೆ. ಸೈಕ್ ಯೋಗಿ ರೆಡ್ಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಶಿವಣ್ಣನ ಜೊತೆಗೆ ಫೈಟ್ ಮಾಡುವ ದೃಶ್ಯಗಳೂ ಅಷ್ಟೆ ಚೆನ್ನಾಗಿ ಬಂದಿವೆ. ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಒಳ್ಳೆ ಅಭಿನಯ ತೋರಿದ್ದಾರೆ. ಸಖತ್ ಸ್ಕೋರ್ ಮಾಡಿದ್ದಾರೆ.

ಬೇಲ್-2 ಲಿಂಕ್

ಈ ಚಿತ್ರದ ಕತೆ ಇಲ್ಲಿಗೆ ಮುಗಿದಿಲ್ಲ. ಇದು ಮುಂದುವರೆಯುತ್ತದೆ. ಅದರ ಹಿಂಟ್ ಅನ್ನು ಡೈರೆಕ್ಟರ್ ಪವನ್ ಒಡೆಯರ್ ಈ ಚಿತ್ರದಲ್ಲಿ ಬಿಟ್ಟಿದ್ದಾರೆ.

ಬೇಲ್-2 ಸಿನಿಮಾ ಮಾಡುವ ಐಡಿಯಾ ಇದೆ. ಬೇಲ್ ಸಕ್ಸಸ್ ಯಾತ್ರೆ ಮುಗಿದ್ಮೇಲೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಸಿನಿಮಾ ಮಡುವ ಪ್ಲಾನ್ ಇದೆ ಅಂತ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಡೈರೆಕ್ಟರ್ ಪವನ್ ಹೇಳಿಕೊಂಡಿದ್ದಾರೆ. ಇನ್ನು ಈ ಚಿತ್ರದ ವಿಚಾರಕ್ಕೆ ಬಂದ್ರೆ ಇದು ಚೆನ್ನಾಗಿದೆ. ಇದನ್ನ ನೋಡಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports