Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews

ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ!


Last Updated:

ದೃಶ್ಯಂ-3 ಚಿತ್ರ ಕನ್ನಡದಲ್ಲಿ ರೀಮೇಕ್ ಯಾಕೆ ಆಗೋದಿಲ್ಲ? ಡೈರೆಕ್ಟರ್ ಜೀತು ಜೋಸೆಫ್ ಹೇಳಿರೋದು ಏನು? ಹಿಂದಿ ಬಿಟ್ಟು ಇತರ ಭಾಷೆಯವರು ರೀಮೇಕ್ ಮಾಡ್ತಿಲ್ಲ ಅಂತ ಹೇಳಿದ್ಯಾಕೆ? ಈ ವಿವರ ಇಲ್ಲಿದೆ ಓದಿ.

ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ!
ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ!

ದೃಶ್ಯಂ-3 ಚಿತ್ರವನ್ನ (Drishyam-3 Movie) ದಕ್ಷಿಣದ ಇತರ ಭಾಷೆಯವರು ರೀಮೇಕ್ (Remake) ಮಾಡುತ್ತಿಲ್ಲ. ಅದಕ್ಕೇನೆ ನಾವು ಈ ಸಲ ಈ ಚಿತ್ರದ ಡಬ್ಬಿಂಗ್ (Remake) ಮಾಡಿದ್ದೇವೆ. ಆಯಾ ಭಾಷೆಯಲ್ಲಿ ಈ ಚಿತ್ರ ಡಬ್ ಆಗುತ್ತಿದೆ. ಈ ಒಂದು ಮಾತನ್ನ ಚಿತ್ರದ ಡೈರೆಕ್ಟರ್ ಜೀತು ಜೋಸೆಫ್ (Jeethu Joseph) ಹೇಳಿಕೊಂಡಿದ್ದಾರೆ. ಆದರೆ, ಈ ಚಿತ್ರವನ್ನ ಯಾಕೆ ರೀಮೇಕ್ ಮಾಡ್ತಿಲ್ಲ ಅನ್ನುವ ಕ್ವಶ್ಚನ್ ಕೂಡ ಇದೆ. ಅದರ ಸುತ್ತ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.

ದೃಶ್ಯಂ-3 ರೀಮೇಕ್ ಮ್ಯಾಟರ್

ದೃಶ್ಯಂ-3 ಚಿತ್ರ ರೀಮೇಕ್ ಆಗುತ್ತಿಲ್ಲ. ಇದು ಹಿಂದಿಯಲ್ಲಿ ಮಾತ್ರ ರೀಮೇಕ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಇದು ರೀಮೇಕ್ ಆಗುತ್ತಿಲ್ಲ.
No one is remaking our movie this time we are dubbing it Jeethu Joseph

ಜಾರ್ಜ್ ಕುಟ್ಟಿ ಮೇಲೆ ಫೋಕಸ್

ಈ ಒಂದು ಮಾತನ್ನ ಡೈರೆಕ್ಟರ್ ಜೀತು ಜೋಸೆಫ್‌ ಹೇಳಿಕೊಂಡಿದ್ದಾರೆ. Galatta Plus ಸಂದರ್ಶನದಲ್ಲಿಯೇ ಜೀತು ಜೋಸೆಫ್ ಇದನ್ನ ಹೇಳಿಕೊಂಡಿದ್ದಾರೆ.

ಜಾರ್ಜ್ ಕುಟ್ಟಿ ಮೇಲೆ ಫೋಕಸ್

ಜೀತು ಜೋಸೆಫ್ ಈ ಸಲ ಇಡೀ ಕತೆಯನ್ನ ಜಾರ್ಜ್ ಕುಟ್ಟಿ ಮೇಲೆ ಫೋಕಸ್ ಮಾಡಿದ್ದಾರೆ. ಗಿಲ್ಟ್ ಫೀಲ್ ಅಲ್ಲಿಯೇ ಇರೋ ಜಾರ್ಜ್ ಕುಟ್ಟಿಯ ಮನಸ್ಥಿತಿ ಮತ್ತು ಮಾನಸಿಕ ತೊಳಲಾಟವೇನು ಅನ್ನೊದನ್ನು ಕಟ್ಟಿಕೊಟ್ಟಿದ್ದಾರೆ.

ಈ ಸಲ ಜಾರ್ಜ್ ಕುಟ್ಟಿಯ ಕ್ಲೈಮ್ಯಾಕ್ಸ್ ಬೇರೆನೆ ಇದೆ. ಈ ಹಿಂದಿ ದೃಶ್ಯಂ-1 ಮತ್ತು ದೃಶ್ಯಂ-2 ಚಿತ್ರಕ್ಕಿಂತಲು ಮೂರನೇಯದ್ದು ಬೇರೆ ಇದೆ. ಇದರಲ್ಲಿರುವ ಕ್ಲೈಮ್ಯಾಕ್ಸ್ ಇತರ ಭಾಷೆಯ ಸ್ಟಾರ್ ನಟರಿಗೆ ಸೂಕ್ತವಾಗಿಲ್ಲ. ಅದಕ್ಕೇನೆ ಈ ಸಲ ಕನ್ನಡ, ತೆಲುಗು,ತಮಿಳು ಭಾಷೆಯಲ್ಲಿ ಈ ಚಿತ್ರ ರೀಮೇಕ್ ಆಗ್ತಿಲ್ಲ ಅನ್ನೋ ಮಾತುಗಳ ಇವೆ.

ಹಿಂದಿಯಲ್ಲಿ ದೃಶ್ಯಂ-3 ರೀಮೇಕ್

ಆದರೆ, ಇದೇ ದೃಶ್ಯಂ-3 ಚಿತ್ರ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಅಜಯ್ ದೇವಗನ್ ನಟನೆಯ ಈ ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ.

No one is remaking our movie this time we are dubbing it Jeethu Joseph

ದೃಶ್ಯಂ-4 ಬರುತ್ತಾ

ಈ ಮೂಲಕ ಬಾಲಿವುಡ್ ಅಲ್ಲಿ ಈ ಚಿತ್ರ ರೀಮೇಕ್ ಆಗುತ್ತಿದೆ. ಆದರೆ, ಕನ್ನಡದಲ್ಲೂ ಈ ಚಿತ್ರ ರೀಮೇಕ್ ಆಗೋದಿಲ್ಲ. ತೆಲುಗು ಮತ್ತು ತಮಿಳು ಭಾಷೆಯಲ್ಲೂ ಇದು ರೀಮೇಕ್ ಆಗೋದಿಲ್ಲ ನೋಡಿ.

ನಾವೇ ಡಬ್ಬಿಂಗ್ ಮಾಡ್ತಿದ್ದೇವೆ

ಈ ಚಿತ್ರವನ್ನ ಈ ಸಲ ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ ನಾವೇ ಡಬ್ ಮಾಡುತ್ತಿದ್ದೇವೆ. ಅವರು ಈ ಚಿತ್ರವನ್ನ ಈ ಬಾರಿ ರೀಮೇಕ್ ಮಾಡ್ತಿಲ್ಲ ಅನ್ನೋದನ್ನ ಜೀತು ಜೋಸೆಫ್ ಒತ್ತಿ ಹೇಳಿದ್ದಾರೆ.

ದೃಶ್ಯಂ-4 ಬರುತ್ತಾ

ದೃಶ್ಯಂ-4 ಚಿತ್ರ ಬರುತ್ತಾ ಅನ್ನುವ ಪ್ರಶ್ನೆನೂ ಬರುತ್ತದೆ. ಇದರ ಹಿಂಟ್ ಅನ್ನ ಇದೇ Galatta Plus ಸಂದರ್ಶನದಲ್ಲಿಯೇ ಮೋಹನ್‌ಲಾಲ್ ಕೊಟ್ಟಿದ್ದಾರೆ.

ಅದು ಬಿಟ್ಟರೆ, ಜೀತು ಜೋಸೆಫ್ ದೃಶ್ಯಂ-4 ಬಗ್ಗೆ ಏನು ಹೇಳಿಕೊಂಡಿಲ್ಲ. ಆದರೆ, ಆ ರೀತಿ ಕತೆ ಸಿಕ್ಕರೆ ಪಕ್ಕ ಮಾಡುವೆ ಅಂತ ಹೇಳಿರುವ ಸುದ್ದಿನೂ ಇದೆ.

ಒಟ್ಟಾರೆ, ದೃಶ್ಯಂ-4 ಚಿತ್ರ ದಕ್ಷಿಣದ ಇತರ ಭಾಷೆಯಲ್ಲಿ ರೀಮೇಕ್ ಆಗುತ್ತಿಲ್ಲ. ಡಬ್ಡ್ ವರ್ಶನ್ ಇಲ್ಲಿ ಬರುತ್ತದೆ ಅಂತ ಡೈರೆಕ್ಟರ್ ಜೀತು ಜೋಸೆಫ್ ಚಿತ್ರದ ಪ್ರಚಾರ ಸಂದರ್ಶನದಲ್ಲಿ ಹೇಳಿಕೊಂಡಿರೋದು ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports