Last Updated:
ಶ್ರುತಿ ಕೃಷ್ಣ ಅವರು ಮಂಡ್ಯದ ಅನಕ್ಷರಸ್ಥ ಮಹಿಳೆಯ ಪಾತ್ರ ಮಾಡ್ತಿದ್ದಾರೆ. ಮದರ್ ಅನ್ನುವ ಈ ಚಿತ್ರದಲ್ಲಿ ಇವರ ಲುಕ್ ಬೇರೇನೆ ಇದೆ. ಈ ಚಿತ್ರ ಇವರ ಚಿತ್ರ ಜೀವನದ 175 ನೇ ಚಿತ್ರವಾಗಿದೆ. ಈ ಚಿತ್ರದ ಮುಹೂರ್ತದ ದಿನ ಅಣ್ಣಾವ್ರು, ಶ್ರೀನಿವಾಸ್ ಮೂರ್ತಿ, ದ್ವಾರಕೀಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ (Shruthi Krishna) ತಮ್ಮ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ತಮ್ಮನ್ನ ಇಂಡಸ್ಟ್ರಿಗೆ ತಂದ ಅಣ್ಣಾವ್ರಿಗೆ ಧನ್ಯವಾದ ಹೇಳಿದ್ದಾರೆ. ನಾಯಕಿ ಮಾಡಿರೋ ಶ್ರೀನಿವಾಸ್ ಮೂರ್ತಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಶ್ರುತಿ ಅಂತ ಹೆಸರಿಟ್ಟ ದ್ವಾರಕೀಶ್ (Dwarakish) ಅವರಿಗೂ ಮನಸಾರೆ ಧನ್ಯವಾದ ಹೇಳಿದ್ದಾರೆ. ಸಿನಿಮಾರಂಗದಲ್ಲಿ ಇವರು ಅಲ್ಲಿಂದ ಇಲ್ಲಿವರೆಗೂ ಬರೋಬ್ಬರಿ 174 ಚಿತ್ರ ಮಾಡಿದ್ದಾರೆ. ಇದೀಗ “ಮದರ್” ಹೆಸರಿನ ಚಿತ್ರ (Mother Movie) ಇವರ 175 ನೇ ಚಿತ್ರವಾಗಿದೆ. ಈ ಚಿತ್ರದ ಮುಹೂರ್ತದಲ್ಲಿ ಶ್ರುತಿ (Shruthi) ಅವರು ತಮ್ಮನ್ನ ಬೆಳೆಸಿದ ತಂದೆ ತಾಯಿ ಸೇರಿದಂತೆ ಎಲ್ಲರನ್ನ ನೆನಪು ಮಾಡಿಕೊಂಡಿದ್ದಾರೆ. ಇವರ ಈ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
175 ನೇ ಸಿನಿಮಾ
(ಚಿತ್ರ ಕೃಪೆ: ಶ್ರುತಿ ಕೃಷ್ಣ ಇನ್‌ಸ್ಟಾಗ್ರಾಮ್)
ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಆಗಿದೆ. ಈ ಒಂದು ಸಂದರ್ಭದಲ್ಲಿ ನಟ-ನಿರ್ಮಾಪಕ ವಿನೋದ್ ಪ್ರಭಾಕರ್ ಬಂದು ವಿಶ್ ಮಾಡಿದ್ದಾರೆ. ಅಭಿನಯ ಸರಸ್ವತಿ ಅಂತಲೂ ಕರೆದಿದ್ದಾರೆ. ಸಿನಿಮಾ ತಂಡ ಕೊಟ್ಟ ಈ ಹೆಸರನ್ನ ಇಲ್ಲಿ ಮತ್ತೆ ಹೇಳಿದ್ದಾರೆ.
ಶ್ರುತಿ ಕೃಷ್ಣ ಅವರು ರಾಜ್‌ಕುಮಾರ್ ಬ್ಯಾನರ್‌ನ ಚಿತ್ರದ ಮೂಲಕವೇ ಕನ್ನಡಕ್ಕೆ ಬಂದ್ರು. ಹಾಗಾಗಿ ಶ್ರುತಿ ಅವರು ಅಣ್ಣಾವ್ರಿಗೆ ಧನ್ಯವಾದ ಹೇಳಿದರು.
ಇದಾದ್ಮೆಲೆ ತಮ್ಮನ್ನ ಹೀರೋಯನ್ ಮಾಡಿದ್ದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೂ ಥ್ಯಾಂಕ್ಸ್ ಹೇಳಿದರು. ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಅನ್ನುವ ಚಿತ್ರದ ಮೂಲಕವೇ ಶ್ರುತಿ ಅವರು ನಾಯಕಿ ಆಗಿದ್ದರು.
ನಟ-ನಿರ್ದೇಶಕ-ನಿರ್ಮಪಕ ದ್ವಾರಕೀಶ್ ಅವರನ್ನು ಶ್ರುತಿ ಅವರು ನೆನಪಿಸಿಕೊಂಡರು. ಶ್ರುತಿ ಅಂತ ಹೆಸರು ಕೊಟ್ಟರು. ಶ್ರುತಿ ಅಂತ ಸಿನಿಮಾ ಕೂಡ ಮಾಡಿದರು.
ಮದರ್ ಚಿತ್ರದ ಮಾಹಿತಿ
(ಚಿತ್ರ ಕೃಪೆ: ಶ್ರುತಿ ಕೃಷ್ಣ ಇನ್‌ಸ್ಟಾಗ್ರಾಮ್)
ಈ ಒಂದು ಚಿತ್ರದಿಂದಲೇ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಉಳಿಯೋಕೆ ಸಾಧ್ಯವಾಯಿತು ಅಂತಲೂ ಶ್ರುತಿ ಅವರು ಹೇಳಿಕೊಂಡಿದ್ದಾರೆ. ಇಂಡಸ್ಟ್ರಿಗೆ ಕರೆತರಲು ತಂದೆ ಮತ್ತು ತಾಯಿ ಅದೆಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ಗೊತ್ತಿದೆ. ಅವರಿಗೂ ನನ್ನ ಧನ್ಯವಾದ ಅಂತಲೇ ಶ್ರುತಿ ಅವರ ಹೇಳಿಕೊಂಡಿದ್ದಾರೆ.
ಮದರ್ ಚಿತ್ರದಲ್ಲಿ ಅಮ್ಮ ಮತ್ತು ಮಗನ ಕತೆ ಇದೆ. ಮಂಡ್ಯದ ಅನಕ್ಷರಸ್ಥ ಹೆಣ್ಣುಮಗಳ ರಗಡ್ ರೋಲ್ ಮಾಡಿದ್ದಾರೆ. ಇಲ್ಲಿ ಅಳುವ ಮಾತೇ ಇಲ್ಲ ಬಿಡಿ. ಆ ರೀತಿನೇ ಈ ಪಾತ್ರ ಇದೆ.
ಈ ಚಿತ್ರವನ್ನ ಒಂದೇ ಹಂತದಲ್ಲಿಯೇ ಪೂರ್ಣಗೊಳಿಸುವ ಪ್ಲಾನ್ ಇದೆ. ಹೆಚ್ಚು ಕಡಿಮೆ 35 ದಿನಗಳು ಈ ಚಿತ್ರದ ಶೂಟಿಂಗ್ ಪ್ಲಾನ್ ಆಗಿದೆ. ಮಂಡ್ಯದ ಈ ಕತೆಯನ್ನ ಮಂಡ್ಯ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ಚಿತ್ರೀಕರಿಸಲಾಗುತ್ತಿದೆ.
ಶ್ರುತಿ ಅವರ ಈ 175 ನೇ ಚಿತ್ರಕ್ಕೆ ಡೈರೆಕ್ಟರ್ ನಾಗತಿಹಳ್ಳಿ ಚಂದ್ರಶೇಖರ್ ಅವರು ಕ್ಲಾಪ್ ಮಾಡಿದ್ದಾರೆ. ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ. ಗೆಸ್ಟ್ ಆಗಿ ಬಂದ ವಿನೋದ್ ಪ್ರಭಾಕರ್ ಇಡೀ ತಂಡಕ್ಕೆ ಶುಭ ಕೋರಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 11, 2026 10:11 AM IST













