Last Updated:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖಾಸಗಿ ಹೋಟೆಲ್ ಲಿಫ್ಟ್ನಲ್ಲಿ ಸಿಲುಕಿಕೊಂಡು ಪರದಾಡಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ತಿರುವನಂತಪುರಂ: ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ (Shashi Tharoor) ಅವರು ಕೂದಲೆಳೆಯ ಅಂತರದಲ್ಲಿ ದೊಡ್ಡ ದುರಂತದಿಂದ ಪಾರಾಗಿದ್ದಾರೆ. ಲಿಫ್ಟ್ನಲ್ಲಿ (Lift) ಸಿಲುಕಿ ಹೊರಬರಲಾಗದೇ ಪರದಾಡಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ (Hotel) ನಡೆದಿದೆ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸಂಸದ ಶಶಿ ತರೂರ್ ಅವರನ್ನು ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳು ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಲಿಫ್ಟ್ ಬಾಗಿಲು ತೆರೆದು ಸಂಸದ ಶಶಿ ತರೂರ್ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಲಿಫ್ಟ್ನಿಂದ ಹೊರಬಂದ ಶಶಿ ತರೂರ್ ನಗುಮುಖದಲ್ಲೇ ಮಾತನಾಡಿದ್ದು, ಲಿಫ್ಟ್ ಸ್ಟಕ್ ಆಗಿ ಸಿಲುಕಿಕೊಂಡಿದ್ದೆವು. ಹೊರಬರಲು ಎಲ್ಲಾ ರೀತಿಯ ಪ್ರಯತ್ನಿಸಿದೆವು. ಆದ್ರೆ, ಸಾಧ್ಯವಾಗಲಿಲ್ಲ, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು. ಅವರು ನಮ್ಮನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಚಿಂತಿಸುವ ಅಗತ್ಯವಿಲ್ಲ, ನಾವೆಲ್ಲರೂ ಆರಾಮಾಗಿದ್ದೇವೆ ಎಂದು ಹೇಳಿದರು.
ಹೈಡ್ರಾಲಿಕ್ ಸ್ಪ್ರೆಡರ್ ಎನ್ನುವುದು ಹೈಡ್ರಾಲಿಕ್ ಒತ್ತಡದ ಮೇಲೆ ಕಾರ್ಯನಿರ್ವಹಿಸುವ ವಿಶೇಷ ರಕ್ಷಣಾ ಸಾಧನವಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಇದನ್ನು ಬಳಸುತ್ತವೆ. ಇದರ ಪಕ್ಕದಲ್ಲಿ ಎರಡು ಬಲವಾದ ಲೋಹದ ಹಿಡಿಕೆಗಳಿವೆ. ಈ ಹಿಡಿಕೆಗಳು ಹೈಡ್ರಾಲಿಕ್ ಒತ್ತಡದ ಸಹಾಯದಿಂದ ನಿಧಾನವಾಗಿ ತೆರೆದುಕೊಳ್ಳುತ್ತವೆ. ಇದು ಲಿಫ್ಟ್ ಬಾಗಿಲುಗಳು, ಕಾರಿನ ಬಾಗಿಲುಗಳು ತೆರೆಯಲು ಸಹಾಯ ಮಾಡುತ್ತದೆ.
Jul 17, 2026 11:18 PM IST














