Vijayalakshmi: ಚಾಮುಂಡೇಶ್ವರಿ ದರ್ಶನಕ್ಕೆ ಬಂದ ವಿಜಯಲಕ್ಷ್ಮಿ, ಅಳಿಯನ ಜೊತೆ ಬಂದ ದರ್ಶನ್ ಪತ್ನಿ | Vijayalakshmi darshan visits Chamundeshwari temple mysore | | ACTPnews

ವಿಜಯಲಕ್ಷ್ಮಿ ದರ್ಶನ್


Last Updated:

Vijayalakshmi: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಆಷಾಢದ ಮೊದಲ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಟಿ ಮಾಳವಿಕಾ, ಅನುಷಾ ರೈ ಅವರೂ ಭೇಟಿ ಕೊಟ್ಟಿದ್ದಾರೆ.

ವಿಜಯಲಕ್ಷ್ಮಿ ದರ್ಶನ್
ವಿಜಯಲಕ್ಷ್ಮಿ ದರ್ಶನ್

ನಟ ದರ್ಶನ್ (Darshan) ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಜೈಲಿನಲ್ಲಿದ್ದರೆ ಇತ್ತ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ದೇವರು, ದೇವಸ್ಥಾನ ಅಂತ ಗಂಡನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆಷಾಢದ ಮೊದಲ ಶುಕ್ರವಾರ ಆಗಿರುವ ಜುಲೈ 17ರಂದು ವಿಜಯಲಕ್ಷ್ಮಿ ದರ್ಶನ್ ಅವರು ಚಾಮುಂಡಿ ಬೆಟ್ಟಕ್ಕೆ  (Chamundi Hills) ಬಂದಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅಳಿಯ ಚಂದನ್ ಆಗಮಿಸಿದ್ದಾರೆ. ತಾಯಿಯ ದರ್ಶನ ಪಡೆಯಲು ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಕಳೆದ ವರ್ಷ ಜಾಮೀನು ಪಡೆದು ಮೈಸೂರಿನಲ್ಲಿದ್ದ ದರ್ಶನ್ ಆಷಾಢ ಶುಕ್ರವಾರ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದರು.

ಆದರೆ ದರ್ಶನ್ ಈ ಬಾರಿ ಜೈಲಿನಲ್ಲಿದ್ದು, ಗಂಡನ ಅನುಪಸ್ಥಿತಿಯಲ್ಲಿಯೇ ವಿಜಯಲಕ್ಷ್ಮಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ್ದಾರೆ. ಪ್ರತಿ ಆಷಾಡ ಮಾಸದ ಶುಕ್ರವಾರ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದ ನಟ ದರ್ಶನ್ ಈ ಬಾರಿ ದರ್ಶನ್ ಪಡೆಯೋಕಾಗಲ್ಲ. ಆದರೆ ಅವರ ಪತ್ನಿ ಈಗಾಗಲೇ ಬಂದಿದ್ದಾರೆ.

ವಿಜಯಲಕ್ಷ್ಮಿಗೆ ವಿವಿಐಪಿ ಸೌಲಭ್ಯ

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪತ್ನಿಗೂ VVIP ಫೆಸಿಲಿಟಿ ನೀಡಲಾಗಿದೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. VVIP ಸಾಲಿನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ನಟಿ ಮಾಳವಿಕಾ ಹಾಗೂ ಬಿಗ್ ಬಾಸ್ ಅನುಷಾ ರೈ ಅವರು ಕೂಡಾ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ಚಾಮುಂಡೇಶ್ವರಿ ತಾಯಿ ಕಂಗೊಳಿಸುತ್ತಿದ್ದಾರೆ. ಆಷಾಢ ಮಾಸದಲ್ಲಿ ದರ್ಶನ ಮಾಡಿದರೆ ಒಳಿತಾಗತ್ತೆ ಎಂಬ ನಂಬಿಕೆಯಿದೆ.

ಈ ಹಿನ್ನಲೆ ಬಂದು ತಾಯಿಯ ದರ್ಶನ ಪಡೆದಿದ್ದೇವೆ. ನಾಡಿನ ಜನರಿಗೆ ಒಳ್ಳೆದಾಗಲಿ. ಉತ್ತಮ ಮಳೆಯಾಗಲಿ ಎಂದು ನಟಿಯರು ಹೇಳಿದ್ದಾರೆ.

ವರದಿ: ಆನಂದ್ ಕೆಎಸ್, ನ್ಯೂಸ್​18 ಕನ್ನಡ ಪ್ರತಿನಿಧಿ, ಮೈಸೂರು 



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports