Last Updated:
ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಸುದ್ದಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಂಗಸ್ಥಳಂ (Rangasthalam) ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಾಮ್ ಚರಣ್ (Ram Charan) ಮತ್ತು ನಿರ್ದೇಶಕ ಸುಕುಮಾರ್ (Director Sukumar) ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಜೋಡಿಯ ಬಹುನಿರೀಕ್ಷಿತ ಹೊಸ ಸಿನಿಮಾ ‘RC17’ ಕುರಿತು ದಿನದಿಂದ ದಿನಕ್ಕೆ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಸುದ್ದಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಂಗಸ್ಥಳಂ ಸಿನಿಮಾ ಟಾಲಿವುಡ್‌ನಲ್ಲಿ ಮಾತ್ರವಲ್ಲ, ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ದೊಡ್ಡ ಯಶಸ್ಸು ಕಂಡಿತ್ತು. ಆ ಚಿತ್ರದ ಕಥೆ, ಪಾತ್ರಗಳ ನಿರೂಪಣೆ ಹಾಗೂ ಸುಕುಮಾರ್ ಅವರ ನಿರ್ದೇಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅದೇ ಜೋಡಿ ಮತ್ತೆ RC17 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಅಭಿಮಾನಿಗಳ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.
ಇತ್ತೀಚಿನ ವರದಿಗಳ ಪ್ರಕಾರ, ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಅಲ್ಲ, ಕಥೆಯನ್ನು ಮುನ್ನಡೆಸುವ ಅತ್ಯಂತ ಪ್ರಭಾವಿ ಪಾತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸುಕುಮಾರ್ ಸಿನಿಮಾಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಿಗೂ ಕಥೆಯಷ್ಟೇ ಮಹತ್ವ ಇರುತ್ತದೆ. ಹೀಗಾಗಿ ನಯನತಾರಾಗಾಗಿ ವಿಶೇಷ ಪಾತ್ರವೊಂದನ್ನು ಸಿದ್ಧಪಡಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
RC17 ಚಿತ್ರದ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಇನ್ನೂ ಮುಂದುವರಿದಿದೆ. ಆರಂಭದಲ್ಲಿ ಕಿಯಾರಾ ಅಡ್ವಾಣಿ ಹೆಸರು ಹೆಚ್ಚು ಕೇಳಿಬಂದಿತ್ತು. ರಾಮ್ ಚರಣ್ ಜೊತೆ ಮೂರನೇ ಬಾರಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.
ಸುಕುಮಾರ್ ತಮ್ಮ ಸಿನಿಮಾಗಳಲ್ಲಿ ಪಾತ್ರಗಳ ಆಳ ಮತ್ತು ಕಥೆಯ ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡುವ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ರಂಗಸ್ಥಳಂ ಮತ್ತು ಪುಷ್ಪ ಸಿನಿಮಾಗಳಲ್ಲಿ ಪ್ರತಿಯೊಂದು ಪಾತ್ರಕ್ಕೂ ಸಮಾನ ಮಹತ್ವ ನೀಡಲಾಗಿತ್ತು.
ಇನ್ನು ಚಿತ್ರತಂಡ ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ RC17 ಚಿತ್ರದ ಪೂಜಾ ಕಾರ್ಯಕ್ರಮವನ್ನು ನಡೆಸುವ ಸಾಧ್ಯತೆ ಇದೆ. ನಂತರ ಚಿತ್ರೀಕರಣ ಆರಂಭಿಸುವ ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಇತ್ತೀಚೆಗೆ ಪೆದ್ದಿ ಚಿತ್ರದ ಯಶಸ್ಸಿನ ಬಳಿಕ ರಾಮ್ ಚರಣ್ ಸಣ್ಣ ವಿರಾಮದಲ್ಲಿದ್ದು, ಮುಂದಿನ ದಿನಗಳಲ್ಲಿ RC17 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ರಾಮ್ ಚರಣ್, ಸುಕುಮಾರ್ ಹಾಗೂ ನಯನತಾರಾ ಹೆಸರುಗಳು ಒಂದೇ ಸಿನಿಮಾದೊಂದಿಗೆ ಕೇಳಿಬರುತ್ತಿರುವುದರಿಂದ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
Bangalore [Bangalore],Bangalore,Karnataka














