Karavali Movie: ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್; ಕಂಬಳದ ರೋಷಾಗ್ನಿ ಹಾಡು ಬರೆದ ಸಿಂಗಾರ ಸಿರಿಯೇ ರೈಟರ್! | | ACTPnews

ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್!


Last Updated:

ಕರಾವಳಿ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಇದು ಕಂಬಳದ ರೋಷಾಗ್ನಿಯನ್ನ ಕಟ್ಟಿಕೊಂಡುತ್ತದೆ. ಅದಕ್ಕೇನೆ ಇದನ್ನ Rage of Kambala ಅಂತಲೇ ಕರೆದಿದ್ದಾರೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಇದನ್ನ ಬರೆದಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್!
ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್!

ಕರಾವಳಿ ಸಿನಿಮಾದ (Karavali Movie) ಮತ್ತೊಂದು ಹಾಡು ರಿಲೀಸ್ (Song Release) ಆಗಿದೆ. ಇದರಲ್ಲಿ ಒಂದು ಪವರ್ ಇದೆ. ಕಂಬಳದ ಸುತ್ತ ಸಾಗುವ ಈ ಹಾಡಿನಲ್ಲಿ ರೋಷಾಗ್ನಿ ಇದೆ. ಆ ರೀತಿನೇ ಇದನ್ನ ಕಂಪೋಸ್ ಮಾಡಿದ್ದಾರೆ. ಕಾಂತಾರ ಚಿತ್ರಕ್ಕೆ (Kantara Movie) ಸಿಂಗಾರ ಸಿರಿಯೇ ಹಾಡು ಬರೆದ ಅದೇ ಪ್ರಮೋದ್ ಮರವಂತೆ (Pramod Maravanthe) ಈ ಒಂದು ಕಂಬಳದ ಹಾಡನ್ನ ಬರೆದಿದ್ದಾರೆ. ಆದರೆ, ಇದು ವಿಷ್ಯೂಲಿ ಬೇರೆ ಇದೆ. ಸಿನಿಮಾದಲ್ಲಿ ಈ ಹಾಡಿನ ಟ್ರ್ಯಾಕ್ ಇರುತ್ತದೆ. ಹಾಗೆ ವಿಷ್ಯೂಲ್ ಕೂಡ ಬೇರೆ ಇರುತ್ತದೆ. ಈ ವಿಶೇಷ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಚಿತ್ರ ಕಂಬಳದ ಹಾಡು

ಕರಾವಳಿ ಚಿತ್ರದಲ್ಲಿ ಕಂಬಳದ ಹಾಡಿದೆ. ಇದನ್ನ ಪ್ರಮೋದ್ ಮರವಂತೆ ಬರೆದಿದ್ದಾರೆ. ಈ ಗೀತೆಯ ಕವರ್ ಸಾಂಗ್ ಕೂಡ ಈಗಾಗಲೇ ಹೊರ ಬಂದಿದೆ.
prajwal devaraj raj b shetty karavali movie rage of kambala cover video song release

ಕರಾವಳಿ ಚಿತ್ರ ಕಂಬಳದ ಹಾಡು

(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)

“Rage of Kambala Cover Video Song” ಬರ್ತಿದೆ ಅನ್ನೋ ವಿಚಾರವನ್ನ ರಾಜ್ ಬಿ ಶೆಟ್ರು ಜುಲೈ-14 ರಂದು ಹೇಳಿದ್ದರು. ಹಾಗೆ ಈ ಒಂದು ಹಾಡು ಜುಲೈ-15 ರಂದು ರಿಲೀಸ್ ಆಗಿದೆ. ಈ ಹಾಡನ್ನ ಕೇಳ್ತಾ ಹೋದ್ರೆ, ಒಂದು ವೈಬ್ರೇಷನ್ ಕ್ರಿಯೇಟ್ ಆಗುತ್ತದೆ. ಇದನ್ನ ರೋಷಾಗ್ನಿ ಅಂದ್ರು ತಪ್ಪಿಲ್ಲ ಬಿಡಿ. ಆ ರೀತಿನೇ ಈ ಒಂದು ಗೀತೆ ಇದೆ.

ಯಾರು ಹಾಡಿರೋದು

ಈ ಒಂದು ಗೀತೆಯನ್ನ ಯಾರು ಹಾಡಿದರು ಅಂತಲೇ ಕೇಳ್ಬೇಕು ಅನಿಸುತ್ತದೆ. ಇದನ್ನ ಕೇಳಿದಾಕ್ಷಣ ಈ ಪ್ರಶ್ನೆ ಮೊದಲು ಹುಟ್ಟುತ್ತದೆ. ಕಾರಣ, ಗಾಯಕನ ಧ್ವನಿ ಇಲ್ಲಿ ಹಾಗೆ ಕೇಳಿಸುತ್ತದೆ.

ಸದ್ಯ ಬಿಟ್ಟಿರೋದು ಕವರ್ ಸಾಂಗ್

ಕರಾವಳಿ ಚಿತ್ರದ ಈ ಒಂದು ಹಾಡು ಕವರ್ ಸಾಂಗ್ ಆಗಿದೆ. ಸಿನಿಮಾದಲ್ಲಿ ಈ ಹಾಡಿನ ಟ್ರ್ಯಾಕ್ ಇರುತ್ತದೆ. ಆದರೆ, ಈಗೀನ ವಿಷ್ಯೂಲ್ ಏನು ಇರೋದಿಲ್ಲ. ಬದಲಾಗಿ ಸಿನಿಮಾದಲ್ಲಿ ಈ ಹಾಡಿಗೆ ವಿಷ್ಯೂಲ್ ಬೇರೇನೆ ಇರುತ್ತದೆ.

ಹಾಗೆ ಈ ಒಂದು ಕರಾವಳಿ ಚಿತ್ರ ತನ್ನದೇ ಆದ ರೀತಿಯಲ್ಲಿಯೇ ಸದ್ದು ಮಾಡಿದೆ. ಪ್ರಜ್ವಲ್ ದೇವರಾಜ್ ಡಬ್ಬಿಂಗ್ ವಿವಾದ ಭಾರೀ ಸೌಂಡ್ ಮಾಡಿದೆ. ಆದರೆ, ಇದರಿಂದ ಸಿನಿಮಾಗೆ ಅದೆಷ್ಟು ಹೆಲ್ಪ್ ಆಯಿತೋ ಏನೋ? ಕರಾವಳಿ ಸಿನಿಮಾ ಈ ವಿವಾದದಿಂದಲೂ ಗಮನ ಸೆಳೆದಿದೆ.

prajwal devaraj raj b shetty karavali movie rage of kambala cover video song release

ಪ್ರಜ್ವಲ್ ದೇವರಾಜ್

(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)

ಚಿತ್ರದ ಟ್ರೈಲರ್ ರಿಲೀಸ್

ಈ ಕರಾವಳಿ ಚಿತ್ರದ ಎರಡು ಹಾಡು ಈಗಾಗಲೆ ರಿಲೀಸ್ ಆಗಿವೆ. ಒಂದು ಬಾ ಕರಾವಳಿಗೆ ಅನ್ನೋ ಹಾಡಾದ್ರೆ, ಮತ್ತೊಂದು ಮುದ್ದು ಗುಮ್ಮ ಅನ್ನೋದೆ ಆಗಿದೆ.

ಜುಲೈ-24 ರಂದು ರಿಲೀಸ್

ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ಗುರುದತ್ತ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಪಕರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ.

ಪ್ರಜ್ವಲ್ ದೇವರಾಜ್ ಈ ಚಿತ್ರದ ನಾಯಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಗೆಸ್ಟ್ ರೋಲ್ ಮಾಡಿದ್ದಾರೆ. ಸಂಪದ ಈ ಚಿತ್ರದ ನಾಯಕಿ ಆಗಿದ್ದಾರೆ. ಮಿತ್ರ, ಶ್ರೀಧರ್, ರಮೇಶ್ ಇಂದಿರಾ ಸೇರಿದಂತೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports