ಫೌಜಿ ಚಿತ್ರ ದಸರ ಹಬ್ಬಕ್ಕೆ ರಿಲೀಸ್ ಆಗ್ತದೆ ಅನ್ನುವ ಸುದ್ದಿ ಇತ್ತು. ಇಲ್ಲವೆ ಆಗಸ್ಟ್ ತಿಂಗಳಲ್ಲಿ ಪಕ್ಕಾ ಅನ್ನೋ ಮಾತು ಇತ್ತು. ಆದರೆ, ಇದೀಗ ಹೊಸ ಡೇಟ್ ಒಂದು ರಿವೀಲ್ ಆಗಿದೆ.
ಫೌಜಿ ರಿಲೀಸ್ ಡೇಟ್ ಅನೌನ್ಸ್
ಫೌಜಿ ಚಿತ್ರ ಡಿಸೆಂಬರ್-3 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಡೇಟ್ ಅನ್ನ ಪ್ರಭಾಸ್ ಜುಲೈ-16 ರಂದು ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.
ಈ ಚಿತ್ರದ ಇತರ ವಿಚಾರಕ್ಕೆ ಬಂದರೆ, ಫೌಜಿ ಚಿತ್ರವನ್ನ ಹನು ರಾಘವಪುಡಿ ಡೈರೆಕ್ಷನ್ ಮಾಡಿದ್ದಾರೆ. ಈ ಹಿಂದೆ ಇವರು ಸೀತಾ ರಾಮಂ ಚಿತ್ರ ಮಾಡಿದ್ದರು. ಇದು ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ.
ಈ ಚಿತ್ರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಇಮಾನ್ವಿ ನಾಯಕಿ ಆಗಿದ್ದಾರೆ. ಜಯಪ್ರದಾ ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಭಾಸ್ ಚಿತ್ರ ಜೀವನದಲ್ಲಿ ಈ ಸಿನಿಮಾ ಮಹತ್ವದ ಚಿತ್ರವೇ ಆಗಿದೆ. ಬಾಹುಬಲಿ ಬಳಿಕ ಇದು ಪ್ರಭಾಸ್ ಅವರ ಮತ್ತೊಂದು ಪಿರಿಯೋಡಿಕಲ್ ಸಿನಿಮಾ ಆಗಿದೆ.
ಫೌಜಿ ರಿಲೀಸ್ ಡೇಟ್ ಅನೌನ್ಸ್
ಈ ಚಿತ್ರವನ್ನ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಡೈರೆಕ್ಟರ್ ಹನು ರಾಘವಪುಡಿ ಈ ಸಂಸ್ಥೆಯ ಜೊತೆಗೆ ಈ ಚಿತ್ರಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರಗಳಲ್ಲಿ ಇದು ಅತ್ಯಂತ ದುಬಾರಿ ಚಿತ್ರವೇ ಆಗಿದೆ. ಹಾಗೆ ಈಗ ಬಿಟ್ಟಿರೋ ಪೋಸ್ಟರ್ ಕೂಡ ವಿಶೇಷವಾಗಿದೆ. ಪ್ರಭಾಸ್ ನಿರ್ವಹಿಸಿರೋ ಪಾತ್ರದ ಖದರ್ ಏನು ಅನ್ನೋದು ಹೇಳುತ್ತದೆ.
ಡಾರ್ಲಿಂಗ್ ಪ್ರಭಾಸ್ ಇಲ್ಲಿ ಲಾಂಗ್ ಹೇರ್ ಅಲ್ಲಿ ಕಾಣಿಸುತ್ತಿದ್ದಾರೆ. ದೇಹ ರಕ್ತಸಿಕ್ತವಾಗಿದೆ. ಎಡಗೈಯಲ್ಲಿ ಬಂದೂಕು ಇದೆ. ಬಂಡೆ ಮೇಲೆ ಪ್ರಭಾಸ್ ಕುಳಿತುಕೊಂಡಿದ್ದಾರೆ.
ಆದರೆ ಸುತ್ತಲೂ ಹೆಣಗಳೇ ಇವೆ. ಒಂದಲ್ಲ ಎರಡಲ್ಲ, ನೂರಾರು ಶವಗಳು ಬಿದ್ದಿವೆ. ಇದನ್ನ ನೋಡಿದ್ರೆ ನೂರಾರು ಜನರನ್ನ ಕೊಂದು ಹೀಗೆ ಪ್ರಭಾಸ್ ಕುಳಿತುಕೊಂಡಿದ್ದಾರೆ ಅನಿಸುತ್ತದೆ. ಆ ರೀತಿನೇ ಈ ಪೋಸ್ಟರ್ ಇದೆ. ಇದರೊಟ್ಟಿಗೆ ಚಿತ್ರ ಡಿಸೆಂಬರ್-03.2026 ರಂದು ವಿಶ್ವದಾದ್ಯಂತ ರಿಲೀಸ್ ಅನ್ನುವ ಮಾಹಿತಿನೂ ಸಿಗುತ್ತದೆ.
ಫೌಜಿ ಚಿತ್ರ ತೆಲುಗು ಭಾಷೆಯಲ್ಲಿ ರೆಡಿ ಆಗುತ್ತಿದೆ. ಆದರೆ, ರಿಲೀಸ್ ಅಂತ ಬಂದಾಗ, ತೆಲುಗು, ತಮಿಳು, ಕನ್ನಡ, ಹಿಂದಿ, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿಯೇ ಇದು ರಿಲೀಸ್ ಆಗುತ್ತಿದೆ. ಇನ್ನುಳಿದಂತೆ ಈ ಚಿತ್ರ ಬಹು ನಿರೀಕ್ಷೆಯ ಸಿನಿಮಾನೇ ಆಗಿದೆ ಅಂತ ಹೇಳಬಹುದು.













