Congress Leader: ಲಿಫ್ಟ್‌ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ! ಹೋಟೆಲ್‌ನಲ್ಲಿ ಒದ್ದಾಟ, ಕೊನೆಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಲಿಫ್ಟ್‌ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ!


Last Updated:

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖಾಸಗಿ ಹೋಟೆಲ್ ಲಿಫ್ಟ್ನಲ್ಲಿ ಸಿಲುಕಿಕೊಂಡು ಪರದಾಡಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಿಫ್ಟ್‌ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ!
ಲಿಫ್ಟ್‌ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ!

ತಿರುವನಂತಪುರಂ: ಕಾಂಗ್ರೆಸ್​​ ಹಿರಿಯ ನಾಯಕ, ಸಂಸದ ಶಶಿ ತರೂರ್ (Shashi Tharoor) ​ ಅವರು ಕೂದಲೆಳೆಯ ಅಂತರದಲ್ಲಿ ದೊಡ್ಡ ದುರಂತದಿಂದ ಪಾರಾಗಿದ್ದಾರೆ. ಲಿಫ್ಟ್​ನಲ್ಲಿ (Lift) ಸಿಲುಕಿ ಹೊರಬರಲಾಗದೇ ಪರದಾಡಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ (Hotel) ನಡೆದಿದೆ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸಂಸದ ಶಶಿ ತರೂರ್​ ಅವರನ್ನು ರಕ್ಷಣೆ ಮಾಡಿದ್ದಾರೆ.

ಸಂಸದ ಶಶಿ ತರೂರ್​ ಅವರು ಇಂದು ತಿರುವನಂತಪುರಂನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಆಯೋಜನೆ ಮಾಡಿದ್ದ ರೋಟರಿ ಕ್ಲಬ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ ಲಿಫ್ಟ್​ ಮೂಲಕ ತೆರಳಲು ಮುಂದಾಗಿದ್ದಾರೆ. ಆದ್ರೆ, ಲಿಫ್ಟ್ ಇದ್ದಕ್ಕಿದ್ದಂತೆ ಜಾಮ್ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಹೊರಬರಲು ಸಾಧ್ಯವಾಗಲೇ ಇಲ್ಲ. ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾವೆಲ್ಲರೂ ಆರಾಮಾಗಿದ್ದೇವೆ

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳು ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಲಿಫ್ಟ್ ಬಾಗಿಲು ತೆರೆದು ಸಂಸದ ಶಶಿ ತರೂರ್​ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಲಿಫ್ಟ್​ನಿಂದ ಹೊರಬಂದ ಶಶಿ ತರೂರ್ ನಗುಮುಖದಲ್ಲೇ ಮಾತನಾಡಿದ್ದು, ಲಿಫ್ಟ್​ ಸ್ಟಕ್​ ಆಗಿ ಸಿಲುಕಿಕೊಂಡಿದ್ದೆವು. ಹೊರಬರಲು ಎಲ್ಲಾ ರೀತಿಯ ಪ್ರಯತ್ನಿಸಿದೆವು. ಆದ್ರೆ, ಸಾಧ್ಯವಾಗಲಿಲ್ಲ, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು. ಅವರು ನಮ್ಮನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಚಿಂತಿಸುವ ಅಗತ್ಯವಿಲ್ಲ, ನಾವೆಲ್ಲರೂ ಆರಾಮಾಗಿದ್ದೇವೆ ಎಂದು ಹೇಳಿದರು.

ತಿರುವನಂತಪುರದ ಪಿಎಂಜಿ ಪ್ರದೇಶದಲ್ಲಿ ರೋಟರಿ ಕ್ಲಬ್ ಕಾರ್ಯಕ್ರಮವಿತ್ತು. ತರೂರ್ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ, ಅದು ಆರನೇ ಮಹಡಿಯಲ್ಲಿ ಏಕಾಏಕಿ ಜ್ಯಾಮ್​ ಆಗಿದೆ. ತರೂರ್ ಜೊತೆಗೆ ಒಟ್ಟು 7 ಜನರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ರಕ್ಷಣಾ ಅಧಿಕಾರಿ ಜಿತೇಶ್ ಕುಮಾರ್  ಮಾತನಾಡಿದ್ದು, ನಾವು ಸ್ಥಳಕ್ಕೆ ತಲುಪಿದಾಗ, ಸಂಸದ ತರೂರ್ ಕೂಡ ಲಿಫ್ಟ್‌ನಲ್ಲಿದ್ದಾರೆ ಎಂದು ಗೊತ್ತಾಯಿತು. ಆರಂಭದಲ್ಲಿ, ಲಿಫ್ಟ್ ಕೀಲಿಯೊಂದಿಗೆ ನಾವು ಲಿಫ್ಟ್ ಅನ್ನು ತೆರೆಯಲು ಸಾಧ್ಯವಾಗಲಿಲ್ಲ. ನಂತರ, ನಾವು ಹೈಡ್ರಾಲಿಕ್​ ಸ್ಪ್ರೆಡರ್‌ ಬಳಸಿ ಅವರನ್ನು ರಕ್ಷಣೆ ಮಾಡಲಾಯಿತು ಎಂದು ಹೇಳಿದರು.
ಹೈಡ್ರಾಲಿಕ್ ಸ್ಪ್ರೆಡರ್ ಎಂದರೇನು?

ಹೈಡ್ರಾಲಿಕ್ ಸ್ಪ್ರೆಡರ್ ಎನ್ನುವುದು ಹೈಡ್ರಾಲಿಕ್ ಒತ್ತಡದ ಮೇಲೆ ಕಾರ್ಯನಿರ್ವಹಿಸುವ ವಿಶೇಷ ರಕ್ಷಣಾ ಸಾಧನವಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಇದನ್ನು ಬಳಸುತ್ತವೆ. ಇದರ ಪಕ್ಕದಲ್ಲಿ ಎರಡು ಬಲವಾದ ಲೋಹದ ಹಿಡಿಕೆಗಳಿವೆ. ಈ ಹಿಡಿಕೆಗಳು ಹೈಡ್ರಾಲಿಕ್ ಒತ್ತಡದ ಸಹಾಯದಿಂದ ನಿಧಾನವಾಗಿ ತೆರೆದುಕೊಳ್ಳುತ್ತವೆ. ಇದು ಲಿಫ್ಟ್ ಬಾಗಿಲುಗಳು, ಕಾರಿನ ಬಾಗಿಲುಗಳು ತೆರೆಯಲು ಸಹಾಯ ಮಾಡುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports