Boss Movie: “ಸಿನಿಮಾ ವಿಜಯಲಕ್ಷ್ಮಿ ನೋಡ್ಬೇಕು” ಎಂದ ಬಾಸ್ ಸಿನಿಮಾ ಹೀರೋಯಿನ್ | | ACTPnews

"ಬಾಸ್ ಚಿತ್ರವನ್ನ ವಿಜಯಲಕ್ಷ್ಮಿ ಅವರೂ ನೋಡ್ಬೇಕು"; ಹೀಗೆ ಹೇಳಿದ್ಯಾರು?


Last Updated:

ಬಾಸ್ ಚಿತ್ರ ಈ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ವಿಜಯಲಕ್ಷ್ಮಿ ದರ್ಶನ್ ವಿಶ್ ಮಾಡಿದ್ದಾರೆ. ಈ ಚಿತ್ರದ ನಾಯಕಿ ಏನ್ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

"ಬಾಸ್ ಚಿತ್ರವನ್ನ ವಿಜಯಲಕ್ಷ್ಮಿ ಅವರೂ ನೋಡ್ಬೇಕು"; ಹೀಗೆ ಹೇಳಿದ್ಯಾರು?
“ಬಾಸ್ ಚಿತ್ರವನ್ನ ವಿಜಯಲಕ್ಷ್ಮಿ ಅವರೂ ನೋಡ್ಬೇಕು”; ಹೀಗೆ ಹೇಳಿದ್ಯಾರು?

ಬಾಸ್ ಚಿತ್ರ (Boss Movie) ಈ ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಚಿತ್ರ ನೋಡಲು ಬರುವವರು ನೈಜ ಘಟನೆಗೆ ಹತ್ತಿರವಾದ ಸಿನಿಮಾ ಅಂತಲೇ ಬರ್ತಾರೆ. ಆದರೆ, ಈ ಸಿನಿಮಾ (Movie) ನೋಡಿದ್ಮೇಲೆ ಇವರಿಗೆ ಬೇರೆ ಅನುಭವವೇ ಆಗುತ್ತದೆ. ವಿಜಯಲಕ್ಷ್ಮಿ ದರ್ಶನ್ ಅವರು ಈ ಬಾಸ್ ಚಿತ್ರವನ್ನ (Boss Movie) ನೋಡ್ಬೇಕು, ನಮ್ಮನ್ನ ಹರಸಬೇಕು ಅಂತಲೇ ಕೇಳಿಕೊಂಡಿದ್ದಾರೆ. ಹೀಗೆ ಕೇಳಿಕೊಂಡಿರೋದು ಬೇರೆ ಯಾರೋ ಅಲ್ಲ. ಚಿತ್ರದ ನಾಯಕಿ ವಂದಿತಾ ಗೌಡ (Vanditha Gowda) ಅವರೇ ನೋಡಿ. ಇವರ ಮಾತುಗಳ ಇನ್ನಷ್ಟು ವಿವರ ಮುಂದೆ ಇದೆ ಓದಿ.

ಬಾಸ್ ಚಿತ್ರ ಈ ವಾರ ರಿಲೀಸ್

ಬಾಸ್ ಚಿತ್ರ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಇದು ತೆರೆ ಕಾಣುತ್ತಿದೆ. ಕಳೆದ ವಾರವೇ ಈ ಚಿತ್ರ ರಿಲೀಸ್ ಆಗಬೇಕಿತ್ತು.
vijayalakshmi darshan must watch boss movie actress vanditha gowda

ವಿಜಯಲಕ್ಷ್ಮಿ ಅವರು ಚಿತ್ರ ನೋಡ್ಬೇಕು

ಆದರೆ, ಕೋರ್ಟ್ ಕಾಪಿ ಬರೋದು ಲೇಟ್ ಆಯಿತು. ಕೋರ್ಟ್ ಸೂಚಿಸಿದಂತೇನೆ ಈ ಚಿತ್ರದಲ್ಲಿ ಏನು ತೆಗೆಯಬೇಕೋ ಅದನ್ನ ತೆಗೆದು ಚಿತ್ರ ರಿಲೀಸ್ ಮಾಡ್ತೀವಿ ಅಂತ ಡೈರೆಕ್ಟರ್ ಲವ ಹೇಳಿದ್ದರು. ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ತನುಷ್ ಶಿವಣ್ಣ ಒಂದು ಮಾತು ಹೇಳಿದ್ದರು.

ವಿಜಯಲಕ್ಷ್ಮಿ ದರ್ಶನ್ ಮೀಟ್ ಆಗ್ತೀವಿ

ಇತ್ತೀಚಿನ ಪ್ರೆಸ್ ಮೀಟ್ ಅಲ್ಲಿ ತನುಷ್ ಶಿವಣ್ಣ ಈ ಮಾತು ಹೇಳಿದ್ದರು. ಕೋರ್ಟು ಕಚೇರಿ ಎಲ್ಲ ಮುಗಿದಿದೆ. ಚಿತ್ರದ ಅಳಿವು ಮತ್ತು ಉಳುವಿನ ಪ್ರಶ್ನೆ ಇದೆ.

ಹಾಗಾಗಿಯೇ ಚಿತ್ರ ರಿಲೀಸ್ ಮಾಡೋ ಮೊದಲು ಒಮ್ಮೆ ವಿಜಯಲಕ್ಷ್ಮಿ ದರ್ಶನ್ ಅವರನ್ನ ಮೀಟ್ ಆಗುತ್ತೇನೆ ಅಂತಲೂ ಹೇಳಿದ್ದರು.

ಇದೀಗ ಮೊನ್ನೆ ನಡೆದ ಪ್ರೆಸ್ ಮೀಟ್ ಅಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿಮ್ಮ ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಒಳ್ಳೆ ಮನಸ್ಸಿನಿಂದಲೇ ಹರಸಿದ್ದಾರೆ ಅನ್ನೋದನ್ನ ತನುಷ್ ಶಿವಣ್ಣ ಹೇಳಿಕೊಂಡಿದ್ದಾರೆ.

vijayalakshmi darshan must watch boss movie actress vanditha gowda

ಗ್ರೀನ್ ಸಿಗ್ನಲ್ ಸಿಕ್ಕಿದೆ
ಗ್ರೀನ್ ಸಿಗ್ನಲ್ ಸಿಕ್ಕಿದೆ

ಈ ಬಾಸ್ ಚಿತ್ರವನ್ನ ದರ್ಶನ ಪರ ವಕೀಲರು ಪ್ರಥಮ್ ಅವರು ನೋಡಿದ್ದಾರೆ. ನೋಡಿದ್ಮೇಲೆ ಆ ದಿನವೇ ರಾತ್ರಿ ತನುಷ್ ಅವರಿಗೆ ಕಾಲ್ ಬಂದಿದೆ. ನಮಗೆ ತೊಂದರೆ ಆಗುವ ರೀತಿ ಈ ಚಿತ್ರದಲ್ಲಿ ಏನೂ ಇಲ್ಲ. ನಮ್ಮ ಕಡೆಯಿಂದ ಗ್ರೀನ್ ಸಿಗ್ನಲ್ ಇದೆ ಅಂತ ಹೇಳಿದರು ಅನ್ನೋದನ್ನ ತನುಷ್ ಶಿವಣ್ಣ ಹೇಳಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಅವರು ಚಿತ್ರ ನೋಡ್ಬೇಕು

ನಮ್ಮ ಈ ಚಿತ್ರವನ್ನ ವಿಜಯಲಕ್ಷ್ಮಿ ದರ್ಶನ್ ಅವರು ನೋಡ್ಬೇಕು. ನೋಡಿ ನಮ್ಮನ್ನ ಹರಸಬೇಕು ಅಂತಲು ಚಿತ್ರದ ನಾಯಕಿ ವಂದಿತಾ ಗೌಡ ಹೇಳಿದ್ದಾರೆ. ಟಿವಿ-9 ಚಿಟ್ ಚಾಟ್ ಅಲ್ಲಿಯೇ ಈ ಒಂದು ವಿಷಯವನ್ನ ನಟಿ ವಂದಿತಾ ಗೌಡ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed