INS Malvan: ಕಾರವಾರದಲ್ಲಿ ಕಾರ್ಯಾಚರಣೆಗಿಳಿದ INS ಮಾಲವನ್‌, ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ಗೆ ಬೂಸ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ನೌಕಾಪಡೆಯ ಹಡಗುಗಳಿಗೆ ಸಾಮಾನ್ಯ ಉಕ್ಕನ್ನು ಬಳಸುವಂತಿಲ್ಲ. ಅದಕ್ಕಾಗಿ ಗುಜರಾತ್‌ನ ಹಜೀರಾದಲ್ಲಿರುವ ಎಎಂ/ಎನ್ಎಸ್ ಇಂಡಿಯಾ ಘಟಕದಲ್ಲಿ ಅತ್ಯುನ್ನತ ಗುಣಮಟ್ಟದ ‘ನೇವೆಲ್-ಗ್ರೇಡ್’ ಸ್ಟೀಲ್ ಅನ್ನು ತಯಾರಿಸಿ ಈ ನೌಕೆಗೆ ಬಳಸಲಾಗಿದೆ.

News18
News18

Indian Navy’s INS Malvan: ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಅತ್ಯಾಧುನಿಕ ‘ಐಎನ್‌ಎಸ್ ಮಾಲವನ್‌’ ಯುದ್ಧನೌಕೆ ಸೇರ್ಪಡೆಗೊಂಡಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಿದ್ದ ಶೇ. 100ರಷ್ಟು ವಿಶೇಷ ಉಕ್ಕನ್ನು ಪ್ರಸಿದ್ಧ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಪೂರೈಸಿದೆ. ಜುಲೈ 22, 2026 ರಂದು ಕರ್ನಾಟಕದ ಕಾರವಾರದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಈ ನೌಕೆಯನ್ನು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು.

ಭಾರತದ ರಕ್ಷಣಾ ವಲಯ ಮತ್ತು ಕಡಲ ಭದ್ರತೆಯಲ್ಲಿ ಈ ನೌಕೆ ಪ್ರಮುಖ ಪಾತ್ರ ವಹಿಸಲಿದ್ದು, ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಈ ಸಾಧನೆ ದೊಡ್ಡ ಬೂಸ್ಟ್ ನೀಡಿದೆ.

ಐಎನ್‌ಎಸ್ ಮಾಲವನ್‌ ಯುದ್ಧನೌಕೆಯ ವಿಶೇಷತೆಗಳೇನು?

ಕೊಚ್ಚಿನ್ ಶಿಪ್‌ಯಾರ್ಡ್ ಲಿ. ನಿರ್ಮಿಸಿರುವ ಈ ನೌಕೆಯು ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆ ಆಗಿದೆ. ಸಮುದ್ರದೊಳಗಿನ ಕಣ್ಗಾವಲು, ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಹೊಡೆದುರುಳಿಸುವುದು ಹಾಗೂ ಕರಾವಳಿ ಭದ್ರತೆಗೆ ಇದು ಹೇಳಿಮಾಡಿಸಿದ ನೌಕೆಯಾಗಿದೆ. ಈ ನೌಕೆಯನ್ನು ಶೇ. 80ಕ್ಕೂ ಹೆಚ್ಚು ದೇಶೀಯ ವಸ್ತುಗಳನ್ನೇ ಬಳಸಿ ನಿರ್ಮಿಸಲಾಗಿದ್ದು, ಇದು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಹಾಗೂ ವಿಕಸಿತ ಭಾರತ ಗುರಿಗಳಿಗೂ ಶಕ್ತಿ ತುಂಬಿದೆ. ನೌಕಾಪಡೆಗಾಗಿ ‘ಮಾಹೆ’ ಸರಣಿಯ ಒಟ್ಟು 8 ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಐಎನ್‌ಎಸ್ ಮಾಲವನ್‌ ಎರಡನೇ ನೌಕೆಯಾಗಿದೆ.

ಗುಜರಾತ್‌ನಲ್ಲಿ ತಯಾರಾದ ವಿಶೇಷ ‘ಉಕ್ಕು’

ನೌಕಾಪಡೆಯ ಹಡಗುಗಳಿಗೆ ಸಾಮಾನ್ಯ ಉಕ್ಕನ್ನು ಬಳಸುವಂತಿಲ್ಲ. ಅದಕ್ಕಾಗಿ ಗುಜರಾತ್‌ನ ಹಜೀರಾದಲ್ಲಿರುವ ಎಎಂ/ಎನ್ಎಸ್ ಇಂಡಿಯಾ ಘಟಕದಲ್ಲಿ ಅತ್ಯುನ್ನತ ಗುಣಮಟ್ಟದ ‘ನೇವೆಲ್-ಗ್ರೇಡ್’ ಸ್ಟೀಲ್ ಅನ್ನು ತಯಾರಿಸಿ ಈ ನೌಕೆಗೆ ಬಳಸಲಾಗಿದೆ.

ಈ ಬಗ್ಗೆ ಮಾತನಾಡಿದ ಎಎಂ/ಎನ್ಎಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಹಾಗೂ ಉಪಾಧ್ಯಕ್ಷ ರಂಜನ್ ಧರ್, ‘ಭಾರತದ ರಕ್ಷಣಾ ವಲಯವು ದೇಶೀಯ ಉತ್ಪಾದನೆಯಿಂದ ಹೇಗೆ ಬಲಗೊಳ್ಳುತ್ತಿದೆ ಎಂಬುದಕ್ಕೆ ಐಎನ್‌ಎಸ್ ಮಾಲವನ್‌ ನೌಕೆ ಅತ್ಯುತ್ತಮ ಉದಾಹರಣೆ. ನೌಕಾಪಡೆಗೆ ಬೇಕಾದ ಉಕ್ಕು ತಯಾರಿಸಲು ಅತ್ಯುನ್ನತ ಗುಣಮಟ್ಟ ಹಾಗೂ ಪರಿಣತಿಯ ಅಗತ್ಯವಿದೆ. ನಮ್ಮ ಕಂಪನಿಯ ಉಕ್ಕು ನೌಕಾಪಡೆಯ ಬಲ ಹೆಚ್ಚಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದು ಸಂತಸ ವ್ಯಕ್ತಪಡಿಸಿದರು.

ಕೇವಲ ನೌಕೆಯಲ್ಲ, ರಾಷ್ಟ್ರೀಯ ಯೋಜನೆಗಳಿಗೂ ಉಕ್ಕು ಪೂರೈಕೆ

ನೌಕಾಪಡೆಗಾಗಿ ನಿರ್ಮಾಣವಾಗುತ್ತಿರುವ ಒಟ್ಟು 8 ‘ಆಂಟಿ-ಸಬ್‌ಮರೀನ್’ ಯುದ್ಧನೌಕೆಗಳಿಗೂ ಎಎಂ/ಎನ್ಎಸ್ ಇಂಡಿಯಾ ಕಂಪನಿಯೇ ಸಂಪೂರ್ಣ ಉಕ್ಕನ್ನು ಪೂರೈಸುತ್ತಿದೆ. ಇದಕ್ಕೂ ಮುನ್ನ ಐಎನ್‌ಎಸ್ ವಿಶಾಖಪಟ್ಟಣಂ ಹಾಗೂ ಐಎನ್‌ಎಸ್ ಸೂರತ್ ನೌಕೆಗಳಿಗೂ ಈ ಕಂಪನಿ ಉಕ್ಕು ನೀಡಿತ್ತು. ಇದಲ್ಲದೆ, ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ‘ಚೀನಾಬ್ ರೈಲ್ವೆ ಸೇತುವೆ’, ಅಂಜಿಕಾಡ್ ರೈಲ್ವೆ ಸೇತುವೆ, ಬೋಗಿಬೀಲ್ ಸೇತುವೆ ಮತ್ತು ನ್ಯೂಟ್ರಿನೋ ವೀಕ್ಷಣಾಲಯದಂತಹ ಪ್ರಮುಖ ರಾಷ್ಟ್ರೀಯ ಯೋಜನೆಗಳಿಗೂ ಈ ಕಂಪನಿ ಉಕ್ಕು ಪೂರೈಸುವ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ.

ಎಎಂ/ಎನ್ಎಸ್ ಇಂಡಿಯಾ ವಿಶ್ವದ ಪ್ರಮುಖ ಸ್ಟೀಲ್ ಕಂಪನಿಗಳಾದ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ನಡುವಿನ ಜಂಟಿ ಉದ್ಯಮವಾಗಿದೆ. ಭಾರತದಲ್ಲಿ ವಾರ್ಷಿಕ 90 ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಸದ್ಯ ಆಂಧ್ರಪ್ರದೇಶದಲ್ಲೂ ವಾರ್ಷಿಕ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಸ್ಟೀಲ್ ಪ್ಲಾಂಟ್ ಅನ್ನು ಕಂಪನಿ ಸ್ಥಾಪಿಸುತ್ತಿದೆ. ವಿಶೇಷವೆಂದರೆ, ಕೇಂದ್ರ ಉಕ್ಕು ಸಚಿವಾಲಯದಿಂದ ಪರಿಸರ ಸ್ನೇಹಿ ‘ಗ್ರೀನ್ ಸ್ಟೀಲ್ ಪ್ರಮಾಣಪತ್ರ’ ಪಡೆದ ದೇಶದ ಏಕೈಕ ಸ್ಟೀಲ್ ಕಂಪನಿ ಇದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed