Kiran Raj Movie: ಕರ್ಣ ಸೀರಿಯಲ್ ಹೀರೋನ ಜಾಕಿ-42 ರೆಡಿ, ರಿಲೀಸ್ ಯಾವಾಗ? | | ACTPnews

Karna Serial Fame Kiran Raj Jackie 42 movie release date latest Updates


ಜಾಕಿ-42 ಸಿನಿಮಾ

ಜಾಕಿ-42 ಸಿನಿಮಾ ರಿಲೀಸ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು 20 ರಂದು ಇದು ತೆರೆ ಕಾಣುತ್ತಿದೆ. ಇದನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ.

ಚಿತ್ರದಲ್ಲಿ 3 ಹಾಡುಗಳು

(ಚಿತ್ರ ಕೃಪೆ: ಸಿನಿಮಾ ಟೀಮ್)

ಈ ಸಿನಿಮಾವನ್ನ ಪ್ರೇಮದ ಊರಲಿ ಚಿತ್ರದ ವಿತರಕ ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ರಾಜ್ಯದೆಲ್ಲೆಡೆ ಈ ಸಿನಿಮಾ ತೆರೆ ಕಾಣುತ್ತಿದೆ.

ಕುದುರೇ ರೇಸ್

ಈ ಚಿತ್ರದಲ್ಲಿ ಕುದುರೆ ರೇಸ್ ಇದೆ. ಇದರ ಹಿನ್ನೆಲೆಯಲ್ಲಿ ಕಥೆ ನಡೆಯುತ್ತದೆ. ಕೌಟುಂಬಿಕ ಮೌಲ್ಯಗಳೂ ಈ ಚಿತ್ರದಲ್ಲಿವೆ. ಸಿನಿಮಾದ 2 ಹಾಡು ರಿಲೀಸ್ ಆಗಿವೆ.

ಚಿತ್ರದಲ್ಲಿ 3 ಹಾಡುಗಳು

ಜಾಕಿ-42 ಚಿತ್ರದಲ್ಲಿ ಮೂರೇ ಹಾಡಿವೆ. ಒಂದು ಆ್ಯಕ್ಷನ್ ಸನ್ನಿವೇಶ ಇದೆ. ಫ್ಯಾಮಿಲಿ ಎಮೋಷನ್ಸ್ ಕೂಡ ಇವೆ. ಹಾಸ್ಯದ ಹೊನಲು ಇದೆ.

ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನೆಲೆ ಇರೋ ಭಾರತದ ಮೊದಲ ಸಿನಿಮಾ ಆಗಿದೆ. ಈ ವಿಷಯವನ್ನ ಡೈರೆಕ್ಟರ್ ಗುರುತೇಜ್ ಶೆಟ್ಟಿ ಹೇಳಿಕೊಂಡಿದ್ದಾರೆ.

Karna Serial Fame Kiran Raj Jackie 42 movie release date latest Updates

200 ಥಿಯೇಟರ್ ಅಲ್ಲಿ….

(ಚಿತ್ರ ಕೃಪೆ: ಸಿನಿಮಾ ಟೀಮ್)

200 ಥಿಯೇಟರ್ ಅಲ್ಲಿ….

ಜಾಕಿ-42 ಸಿನಿಮಾ ದೊಡ್ಡಮಟ್ಟದಲ್ಲಿಯೇ ತೆರೆ ಕಾಣುತ್ತಿದೆ. ಈ ಚಿತ್ರ 200 ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ರಿಲೀಸ್ ಆಗುತ್ತಿದೆ. ಈ ಮ್ಯಾಟರ್ ಅನ್ನ ಚಿತ್ರದ ನಿರ್ಮಾಪಕ ಭಾರತಿ ಸತ್ಯನಾರಾಯಣ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ನಾಯಕಿ ಅಂತ ಬಂದ್ರೆ, ಹೃತಿಕಾ ಶ್ರೀನಿವಾಸ್ ಅಭಿನಯಿಸಿದ್ದಾರೆ. ಯುಕ್ತ, ರಾಜೇಂದ್ರ ಕಾರಂತ್, ಬಲ ರಾಜ್ ವಾಡಿ, ಗಿರೀಶ್ ಹೆಗ್ಡೆ, ಅರುಣ್ ಆಚಾರ್, ಯಶ್ ಶೆಟ್ಟಿ, ದೀಪಕ್ ರೈ ಪಣಜೆ, ಶಾಂತಲಾ ಕಾಮತ್ ಇತರ ಪಾತ್ರದಲ್ಲಿ ನಟಿಸಿದ್ದಾರೆ.

ಮ್ಯೂಸಿಕ್ ಡೈರೆಕ್ಟರ್

ಈ ಚಿತ್ರಕ್ಕೆ ವಿನೋದ್ ಯಜಮಾನ್ಯ ಮ್ಯೂಸಿಕ್ ಮಾಡಿದ್ದಾರೆ. ರಾಘವೇಂದ್ರ ಕೋಲಾರ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿರಣ್ ರಾಜ್ ಡಬಲ್ ರೋಲ್ ಮಾಡಿದ್ದಾರೆ. ಇದರ ಝಲಕ್ ಸಿನಿಮಾದ ಟೀಸರ್ ಅಲ್ಲಿ ರಿವೀಲ್ ಆಗಿದೆ.

ಈ ಸಿನಿಮಾದ ಮೂಲಕ ಕಿರಣ್ ರಾಜ್ ಹೊಸ ಭರವಸೆ ಮೂಡಿಸಿದ್ದಾರೆ. ಕುದುರೆ ರೇಸ್ ಕತೆಯಲ್ಲಿ ಎರಡು ರೋಲ್ ಮಾಡ್ತಾನೇ ತಮ್ಮ ಅಭಿನಯದ ಎರಡು ರೂಪ ತೋರಿಸಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *